ಮಹಾರಾಷ್ಟ್ರದಲ್ಲಿ ಹೆಚ್ಚಿದ ಕೋರೋನಾ…ಬೆಳಗಾವಿಯಲ್ಲಿಯೂ ಒಂದು ಪಾಜಿಟ್ಹಿವ್….
ಆದರೂ ಗಡಿ ಪ್ರವೇಶದಲ್ಲಿ ಚೆಕ್’ಪೋಸ್ಟ್ ನಿರ್ಮಿಸದೇ ಬೆಳಗಾವಿ ಜಿಲ್ಲಾಡಳಿತದ ನಿರ್ಲಕ್ಷ್ಯ!!!
ಮಹಾರಾಷ್ಟ್ರದಲ್ಲಿ ಕೋರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ ಅಲ್ಲದೇ ಬೆಳಗಾವಿಯಲ್ಲಿಯೂ ಓರ್ವ ಮಹಿಳೆಗೆ ಸೋಂಕು ತಗುಲಿದೆ. ಆದರೇ, ಗಡಿಯಲ್ಲಿ ಬೆಳಗಾವಿ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ನೆರೆಯ ಮಹಾರಾಷ್ಟ್ರದಲ್ಲಿ ಕೋರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ ಅಲ್ಲದೇ ಬೆಳಗಾವಿಯಲ್ಲಿಯೂ ಓರ್ವ ಮಹಿಳೆಗೆ ಸೋಂಕು ತಗುಲಿದೆ. ಆದರೇ, ಗಡಿಯಲ್ಲಿ ಬೆಳಗಾವಿ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಯಾವುದೇ ರೀತಿಯಲ್ಲಿ ತಪಾಸಣೆ ಇಲ್ಲದೇಯೇ ಬೆಳಗಾವಿ ಗಡಿಗೆ ಹೊಂದಿಕೊಂಡಿರುವ ಶಿನೋಳಿ ಚೆಕ್ ಪೊಸ್ಟ್ ಮೂಲಕ ಬೆಳಗಾವಿ ಗಡಿಯನ್ನು ಪ್ರಯಾಣಿಕರು ಪ್ರವೇಶಿಸುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, 56ಕ್ಕೂ ಅಧಿಕ ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇನ್ನು ಗಡಿಯಲ್ಲಿ ನಿಗಾ ವಹಿಸಬೇಕಿದ್ದ ಬೆಳಗಾವಿ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದೆ.
Laxmi News 24×7