Breaking News

ಅಮೇರಿಕಾದ ಪ್ರಖ್ಯಾತ ನ್ಯೂಯಾರ್ಕ್ ವಿಶ್ವವಿದ್ಯಾಲಕ್ಕೆ ಟಾಪರ್ ಆದ ಸಚಿವ ಎಂಬಿಪಿ ಪುತ್ರ*

Spread the love

ಅಮೇರಿಕಾದ ಪ್ರಖ್ಯಾತ ನ್ಯೂಯಾರ್ಕ್ ವಿಶ್ವವಿದ್ಯಾಲಕ್ಕೆ ಟಾಪರ್ ಆದ ಸಚಿವ ಎಂಬಿಪಿ ಪುತ್ರ*
ವಿಜಯಪುರದ ಧ್ರುವ ಎಂ ಪಾಟೀಲ ಅಮೇರಿಕಾದ ಪ್ರಖ್ಯಾತ ನ್ಯೂಯಾರ್ಕ್ ವಿಶ್ವವಿದ್ಯಾಲಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಬಿ ಎಲ್ ಡಿ ಇ ಸಂಸ್ಥೆ ಅಧ್ಯಕ್ಷ, ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಅವರ ಕಿರಿಯ ಪುತ್ರನಾಗಿರುವ ಧ್ರುವ ಎಂ ಪಾಟೀಲ ಅಮೆರಿಕಾದ ನ್ಯೂಯಾರ್ಕ್ ವಿವಿಯಲ್ಲಿ ಬ್ಯಾಚರ್ ಆಫ್ ಸೈನ್ಸ್ ಪದವಿಯನ್ನು ನ್ಯೂಯಾರ್ಕ್ ವಿವಿಗೆ ಟಾಫ್ 5 ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದು, ದಿ 15ರಂದು ನಡೆದ ಘಟಿಕೋತ್ಸವದಲ್ಲಿ ಇವರಿಗೆ ಪದವಿ ಪ್ರದಾನ ಮಾಡಲಾಯಿತು. ಘಟಿಕೋತ್ಸವದಲ್ಲಿ ಸಚಿವ ಎಂ ಬಿ ಪಾಟೀಲ ಹಾಗೂ ಕುಟುಂಬದ ಸದಸ್ಯರು ಭಾಗವಹಿಸಿ, ಧ್ರುವ ಎಂ ಪಾಟೀಲ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವನ್ಯ ಜೀವಿ ರಕ್ಷಣೆ, ಪರಿಸರ ಜಾಗೃತಿ, ಬೀದಿ ಬದಿ ಪ್ರಾಣಿಗಳ ರಕ್ಷಣೆ ಕುರಿತು ಸದಾ ಮುಂದಿರುವ ಧ್ರುವ ಎಂ ಪಾಟೀಲ ಅತ್ಯುತ್ತಮ ಛಾಯಾಚಿತ್ರಕಾರರಾಗಿದ್ದಾರೆ. ಅಲ್ಲದೆ, ಸೊಸೈಟಿ ಫಾರ್ ಪ್ರೊಟೆಕ್ಷನ್ ಆಫ್ ಪ್ಲಾಂಟ್ಸ್ ಆಂಡ್ ಅನಿಮಲ್ಸ್ ಎನ್ ಜಿ ಓ ದ ಮುಖ್ಯಸ್ಥರಾಗಿದ್ದಾರೆ.
ಧ್ರುವ ಎಂ ಪಾಟೀಲ್ ಅವರ ಸಾಧನೆಗೆ ವಿಜಯಪುರದ ಬಿ ಎಲ್ ಡಿ ಇ ಆಡಳಿತ ಮಂಡಳಿ ಹಾಗೂ ಎಂ ಬಿ ಪಾಟೀಲ ಅಭಿಮಾನಿಗಳು ಅಭಿನಂದಿಸಿದ್ದಾರೆ.

Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ