Breaking News

ಸಿಎನ್ ಜಿ ಬದಲು ಸಿಬಿಜಿ ಗ್ಯಾಸ್ ಪೂರೈಕೆ ಆರೋಪ.. ಎರಡು ಪೆಟ್ರೋಲ್ ಬಂಕ್ ನಲ್ಲಿ ಆಟೋ, ಕಾರು ಚಾಲಕರ ಪ್ರತಿಭಟನೆ..

Spread the love

ಬಾಗಲಕೋಟೆ : ಸಿಎನ್ ಜಿ ಬದಲು ಸಿಬಿಜಿ ಗ್ಯಾಸ್ ಪೂರೈಕೆ ಆರೋಪ..
ಎರಡು ಪೆಟ್ರೋಲ್ ಬಂಕ್ ನಲ್ಲಿ ಆಟೋ, ಕಾರು ಚಾಲಕರ ಪ್ರತಿಭಟನೆ..
ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಎರಡು ಪೆಟ್ರೋಲ್ ಬಂಕ್ ಗಳಲ್ಲಿ ಸಿ ಎನ್ ಜಿ ಬದಲು ಸಿ ಬಿ ಜಿ ಗ್ಯಾಸ್ ಪೂರೈಕೆ ಮಾಡುತ್ತಿರುವುದನ್ನು ಖಂಡಿಸಿ ಚಾಲಕರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಜಮಖಂಡಿ ನಗರದಲ್ಲಿರುವ ಭಾರತ್ ಪೆಟ್ರೋಲಿಯಂ ಎಜೆನ್ಸಿ ಬಂಕ್ ಗಳಲ್ಲಿ
ಸಿಬಿಜಿ ಪೂರೈಕೆ ಬಂದ್ ಮಾಡಿಸಿ ಚಾಲಕರು ಪ್ರತಿಭಟನೆ ನಡೆಸಿದರು. ಸಿಎನ್ ಜಿ ಬೋರ್ಡ್ ಹಾಕಿ ಸಿಬಿಜಿ ಪೂರೈಕೆ ಮಾಡ್ತಿದಾರೆ ಸಿಬಿಜಿಯಿಂದ ನಮ್ಮ ವಾಹನಗಳು ಉತ್ತಮ ಮೈಲೇಜ್ ಕೊಡುವುದಿಲ್ಲ ಕಾರಣ ಸಿಬಿಜಿ ಬದಲಿಸಿ ಸಿಎನ್ ಜಿ ಪೂರೈಸುವಂತೆ ಒತ್ತಾಯ ಮಾಡಿದರು.
ಈ ಕುರಿತು ಪ್ರತಿಭಟನಾ ನಿರತ ಚಾಲಕ ನಿಂಗಪ್ಪ ಬಳೋಲ ಇನ್ ನ್ಯೂಸ್ ವಾಹಿನಿಯೊಂದಿಗೆ ಮಾತನಾಡಿ, ಕಳೆದ 15 ದಿನಗಳಿಂದ ಸಿಎನ್‌ಜಿ ಬದಲಾಗಿ ಸಿಬಿಜಿ ಪೂರೈಕೆ ಮಾಡುತ್ತಿದ್ದಾರೆ. ಸಾಲ ಮಾಡಿ ನಾವು ವಾಹನ ತೆಗೆದುಕೊಂಡಿದ್ದು ನಮ್ಮ ಜೀವನ ಆಟೋಗಳ ಮೇಲೆ ಅವಲಂಬಿತವಾಗಿದೆ ಸಿಬಿಜಿ ಹೆಚ್ಚು ಮೈಲೇಜ್ ಕೊಡುವುದಿಲ್ಲ. ವಾಹನ ಪಿಕಪ್ ಕೂಡ ಕೊಡುತ್ತಿಲ್ಲ.
ಎಂಜಿನ್ ಮೇಲಿಂದ ಮೇಲೆ ರಿಪೇರಿಗೆ ಬರುತ್ತದೆ.ಈ ಮೊದಲು ಸಿ ಎನ್ ಜಿ ಗೆ ಒಂದು ದಿನಕ್ಕೆ 1100 ರೂ ಹಾಕಿಸಲಾಗುತ್ತಿತ್ತು ಈಗ ಸಿಬಿಜಿಗೆ 1600 ರೂ. ಹಾಕಬೇಕಾಗಿದೆ ಇದರಿಂದ ನಮಗೆ ಹಾನಿಯಾಗುತ್ತಿದೆ. ಆದ್ದರಿಂದ ಸಿ ಎನ್ ಜಿ ಪೂರೈಸುವವರೆಗೆ ಪೆಟ್ರೋಲ್ ಬಂಕ್ ಬಂದ್ ಮಾಡಲು ನಾವು ಅಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದೇವೆ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡಿದರೆ ಇನ್ನು ಎರಡು ತಿಂಗಳಾಗುವುದಿಲ್ಲವೆನ್ನುತ್ತಿದ್ದರೆ. ಹೀಗಾದರೆ ನಾವು ಬದುಕುವುದು ಹೇಗೆ ಎಂದು ಚಾಲಕ ಪ್ರಶ್ನಿಸಿದರು
ನಂತರ ಬಂಕ್ ವ್ಯವಸ್ಥಾಪಕರು ಎರಡು ದಿನಗಳ ಕಾಲಾವಕಾಶ ಕೇಳಿದ ಬೆನ್ನಲ್ಲೆ ತಮ್ಮ ಪ್ರತಿಭಟನೆ ವಾಪಸ್ ಪಡೆದ ಚಾಲಕರು ಸಿ ಎನ್ ಜಿ ಬರುವವರೆಗೂ ಸಿಬಿಜಿ ಪೂರೈಕೆ ನಿಲ್ಲಿಸುವಂತೆ ತಾಕೀತು ಮಾಡಿದರು.

Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ