Breaking News

ಸುಮಾರು 25 ವರ್ಷಗಳ ಬಳಿಕ ಡೋರಿ ಗ್ರಾಮದ ಗ್ರಾಮದೇವಿ ಜಾತ್ರೆ ಡೋಲಿ ಹೊತ್ತ ಮುಸ್ಲಿಂ ಬಾಂಧವರು:

Spread the love

ಧಾರವಾಡ: ಜಾತ್ರಾ ಮಹೋತ್ಸವಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಿರುವ ಬೆನ್ನಲ್ಲೇ ಜಿಲ್ಲೆಯ ಅಳ್ನಾವರ ತಾಲೂಕಿನ ಡೋರಿ ಗ್ರಾಮದಲ್ಲಿ ಗ್ರಾಮಸ್ಥರೆಲ್ಲರೂ ಭಾವೈಕ್ಯತೆ ಮೆರೆದಿದ್ದಾರೆ. ಗ್ರಾಮದೇವಿಯ ಜಾತ್ರೆಯಲ್ಲಿ ಮುಸ್ಲಿಂ ಬಾಂಧವರು ಹೊನ್ನಾಟ ಆಡುವ ಮೂಲಕ ಸಾಮರಸ್ಯ ಸಾರಿದ್ದಾರೆ.

ಕಳೆದ 8 ದಿನಗಳಿಂದ ನಡೆದಿರುವ ಗ್ರಾಮದೇವಿ ಜಾತ್ರೆಯಲ್ಲಿ ಮೂರು ದಿನಗಳಿಂದ ಹೊನ್ನಾಟ ನಡೆದಿದೆ. ಸುಮಾರು 25 ವರ್ಷಗಳ ಬಳಿಕ ಡೋರಿ ಗ್ರಾಮದ ಗ್ರಾಮದೇವಿ ಜಾತ್ರೆ ಮಾಡುತ್ತಿದ್ದಾರೆ. ಇವತ್ತು ಇಡೀ ದಿನ ಮುಸ್ಲಿಂ ಬಾಂಧವರು ಹೊನ್ನಾಟ ಆಡಿದ್ದಾರೆ.

ಹೊನ್ನಾಟದಲ್ಲಿ ಮುಸಲ್ಮಾನ ಬಾಂಧವರಿಗೆ ಗ್ರಾಮದೇವಿ ಡೋಲಿ ಹೊರಲು ಅವಕಾಶ ಮಾಡಿ ಕೊಡಲಾಗಿತ್ತು. ನಿನ್ನೆ ಮತ್ತು‌ ಮೊನ್ನೆ ಇದೇ‌ ದೇವಿಯರ ಡೋಲಿ ಹಿಂದೂ ಬಾಂಧವರು ಹೊತ್ತಿದ್ದರು. ಈ ಹಿನ್ನೆಲೆ ಇವತ್ತು ಮುಸ್ಲಿಂ ಬಾಂಧವರಿಗೆ ಡೋಲಿ‌ ಹೊರಲು ಅವಕಾಶ ನೀಡಿ ಹಿಂದೂ ಬಾಂಧವರು, ಭಾವೈಕ್ಯತೆ ಮೆರೆದಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ