Breaking News

ಜನರಿಗೆ ತೆರಿಗೆಗೆ ಸಂಬಂಧಿಸಿದ ಸರಿಯಾದ ಮಾಹಿತಿ ನೀಡುವುದು ಟ್ಯಾಕ್ಸ್ ಪ್ರ್ಯಾಕ್ಟಿಶಿನರ್ಸ್’ಗಳ ಕರ್ತವ್ಯ; ಅಧ್ಯಕ್ಷ ಸಂಜೀವ್ ಬಡಗಂಡಿ

Spread the love

ಬೆಳಗಾವಿಯ ಟ್ಯಾಕ್ಸ್ ಪ್ರ್ಯಾಕ್ಟಿಶಿನರ್ಸ್ ಅಸೋಸಿಯೇಷನ್’ನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ
ಜನರಿಗೆ ತೆರಿಗೆಗೆ ಸಂಬಂಧಿಸಿದ ಸರಿಯಾದ ಮಾಹಿತಿ ನೀಡುವುದು ಟ್ಯಾಕ್ಸ್ ಪ್ರ್ಯಾಕ್ಟಿಶಿನರ್ಸ್’ಗಳ ಕರ್ತವ್ಯ; ಅಧ್ಯಕ್ಷ ಸಂಜೀವ್ ಬಡಗಂಡಿ
ಬೆಳಗಾವಿಯ ಟ್ಯಾಕ್ಸ್ ಪ್ರ್ಯಾಕ್ಟಿಶಿನರ್ಸ್ ಅಸೋಸಿಯೇಷನ್’ನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ಉತ್ಸಾಹದಲ್ಲಿ ನೆರವೇರಿತು.
ಮಂಗಳವಾರದಂದು ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಬೆಳಗಾವಿಯ ಟ್ಯಾಕ್ಸ್ ಪ್ರ್ಯಾಕ್ಟಿಶಿನರ್ಸ್ ಅಸೋಸಿಯೇಷನ್’ನ ನೂತನ ಕಾರ್ಯಕಾರಿ ಸಮಿತಿಯ ೨೦೨೫-೨೦೨೮ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭವು ನೂತನ ಅಧ್ಯಕ್ಷ ಸಂಜೀವ್ ಬಡಗಂಡಿ ಅವರ ನೇತೃತ್ವದಲ್ಲಿ ಇಂದು ಉತ್ಸಾಹದಿಂದ ನಡೆಯಿತು.
ಕರ್ನಾಟಕ ರಾಜ್ಯ ತೆರಿಗೆ ವೃತ್ತಿಪರರ ಸಂಘದ ಅಧ್ಯಕ್ಷ ಎಸ್.ಎನ್. ಪ್ರಸಾದ್ ಅವರು ಉಪಸ್ಥಿತರಿದ್ಧರು. ಅವರು ನೂತನ ಅಧ್ಯಕ್ಷರು ಮತ್ತು ಅವರ ಕಾರ್ಯಕಾರಿ ಸಮಿತಿಗೆ ಅಧಿಕಾರವನ್ನು ಹಸ್ತಾಂತರಿಸಿದರು. ಮುಖ್ಯ ಅತಿಥಿಗಳಾಗಿ ಕೆಎಸ್‌ಟಿಪಿಎ ಕಾರ್ಯದರ್ಶಿ ಮುಕುಂದ್ ಪೋಟನೀಸ್, ಬೆಳಗಾವಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಸಂಜು ಕತ್ತಿಶೆಟ್ಟಿ, ಬಿಸಿಸಿಐ ಕಾರ್ಯದರ್ಶಿ ರಾಜೇಂದ್ರ ಮುತಗೇಕರ ಉಪಸ್ಥಿತರಿದ್ದರು.
ಈ ಸಮಯದಲ್ಲಿ ಮಾತನಾಡಿದ ಎಸ್.ಎನ್. ಪ್ರಸಾದ್ ಅವರು ತೆರಿಗೆ ಸಲಹೆಗಾರರ ಪಾತ್ರ ಮಹತ್ವದ್ದಾಗಿದೆ. ಸಂಸ್ಥೆಯ ಹೊಸ ತಂಡವು ಪ್ರಾಮಾಣಿಕವಾಗಿ ಮತ್ತು ಪರಿಣಾಮಕಾರಿಯಾಗಿ ಕೆಲಸ ಸೇವೆ ಸಲ್ಲಿಸಲಿದೆ ಎಂದು ಆಶಿಸಿದರು. ಮುಕುಂದ್ ಪೋಟನಿಸ್ ಅವರು ಸಂಸ್ಥೆಯ ಭವಿಷ್ಯದ ಯೋಜನೆಗಳ ಕುರಿತು ಮಾಹಿತಿಯನ್ನು ನೀಡಿದರು. ಬೆಳಗಾವಿಯ ಆರ್ಥಿಕ ಅಭಿವೃದ್ಧಿಯಲ್ಲಿರುವ ತೆರಿಗೆ ಸಲಹೆಗಾರರ ಕೊಡುಗೆಯನ್ನು ಸಂಜು ಕತ್ತಿಶೆಟ್ಟಿ ಮತ್ತು ರಾಜೇಂದ್ರ ಮುತಗೇಕರ್ ಶ್ಲಾಘಿಸಿದರು.
ನೂತನ ಅಧ್ಯಕ್ಷ ಸಂಜೀವ್ ಬಡಗಂಡಿ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಸಂಸ್ಥೆಯ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವುದು ಮತ್ತು ತೆರಿಗೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿಯನ್ನು ಒದಗಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಹೇಳಿದರು. ಅವರು ತಮ್ಮ ತಂಡದ ಸದಸ್ಯ ಟಿ.ಎನ್. ಮಾಳಗೆ, ವಿಕ್ರಮ್ ಕೋಕಣೆ, ಸಚಿನ್ ಕುಲಕರ್ಣಿ, ಶಶಿ ಬಾಡಕರ್ ಮತ್ತು ಸೋಮಶೇಖರ್ ಸುತಾರ್ ಹಾಗೂ ಬಿಟಿಪಿಎಯ ಎಲ್ಲಾ ಕಾರ್ಯಕಾರಿ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಇದೇ ವೇಳೆ ಅವರು ಎಲ್ಲರ ಸಹಕಾರದೊಂದಿಗೆ ಸಂಸ್ಥೆಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಟಿ. ಎನ್. ಮಾಳಗೆ, ವಿಕ್ರಮ್ ಕೋಕಣೆ, ಸಚಿನ್ ಕುಲಕರ್ಣಿ, ಶಶಿ ಬಾಡಕರ ಮತ್ತು ಸೋಮಶೇಖರ್ ಸುತಾರ್ ನೇತೃತ್ವದ ಸ್ವಾಗತ ಸಮಿತಿಯು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿತು.

Spread the love

About Laxminews 24x7

Check Also

ಅಕ್ರಮ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

Spread the loveಬೆಳಗಾವಿ: ಮಹಾನಗರ ಪಾಲಿಕೆ 8 ಮತ್ತು 9 ವಾರ್ಡ್‌ನಲ್ಲಿನ  ಆಸ್ತಿಗಳಿಗೆ ಮತ್ತೊಬ್ಬರ ಹೆಸರಿನಲ್ಲಿ ಬಾಂಡ್ ಆಧಾರದ ಮೇಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ