Breaking News

ವೈದ್ಯ ವಿದ್ಯಾರ್ಥಿನಿ ಫೋಟೊ ಇಟ್ಟುಕೊಂಡು ಬ್ಲ್ಯಾಕ್​ಮೇಲ್​: ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲು

Spread the love

ಹುಬ್ಬಳ್ಳಿ: ನಗರದ ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬಳು ಆನ್​ಲೈನ್‌ನಲ್ಲಿ ಪರಿಚಿತನಾದ ಯುವಕನೊಂದಿಗೆ ವಿವಸ್ತ್ರಳಾಗಿ ವಾಟ್ಸ್‌ಆ್ಯಪ್ ಚಾಟ್, ವಿಡಿಯೋ ಕಾಲ್ ಮಾಡಿದ್ದನ್ನೇ ದುರುಪಯೋಗ ಪಡಿಸಿಕೊಂಡ ವ್ಯಕ್ತಿ, ನಕಲಿ ಖಾತೆ ಸೃಷ್ಟಿಸಿ ಮಾನ ಹರಾಜು ಹಾಕಿರುವ ಬಗ್ಗೆ ಹುಬ್ಬಳ್ಳಿ ಸಿಇಎನ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರಿನಲ್ಲಿ ಏನಿದೆ?: ಇಲ್ಲಿನ ಮೆಡಿಕಲ್​​​​ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಗೆ ಉತ್ತರಪ್ರದೇಶದ ರಜತ್​ ಶರ್ಮಾ ಎಂಬಾತ ಆನ್‌ಲೈನ್‌ನಲ್ಲಿ ಪರಿಚಯವಾಗಿದ್ದಾನೆ. ನಂತರ ವಿಡಿಯೋ ಕಾಲ್, ವಾಟ್ಸ್‌ಆ್ಯಪ್ ಚಾಟ್, ಟೆಲಿಗ್ರಾಮ್ ವಿಡಿಯೋ, ಸ್ನಾಪ್‌ಚಾಟ್, ಇನ್‌ಸ್ಟಾಗ್ರಾಂ, ಪಿಂಟರೆಸ್ಟ್, ಇಮೇಲ್ಸ್, ಎಸ್‌ಎಂಎಸ್ ಮೂಲಕ ಚಾಟ್ ಮಾಡಿದ್ದಾನೆ. 9 ವಾಟ್ಸ್​ಆ್ಯಪ್ ನಂಬರ್‌ಗಳ ಮುಖಾಂತರ ಚಾಟ್, ವಿಡಿಯೋ ಕಾಲ್ ಮಾಡಿದ್ದಾನೆ. ಆಗ ರಜತ್​ ಹೇಳಿದಂತೆ ವಿದ್ಯಾರ್ಥಿನಿ ವಿವಸ್ತ್ರಳಾಗಿ ವಿಡಿಯೋ ಕಾಲ್ ಮಾಡಿದ್ದು, ಆ ಸಮಯದಲ್ಲಿ ಫೋಟೊ, ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡಿದ್ದಾನೆ. ನಂತರ ಅವಳ ಹೆಸರಲ್ಲಿಯೇ ಇನ್​ಸ್ಟಾಗ್ರಾಮ್ ನಕಲಿ ಖಾತೆ ತೆರೆದು ಅಶ್ಲೀಲ ಫೋಟೋ ಹಾಕಿ, ಇಮೇಲ್ ಮತ್ತು ವಾಟ್ಸ್​ಆ್ಯಪ್ ಮೂಲಕ ಹಿಂಸೆ ನೀಡುತ್ತಿದ್ದಾನೆ. ಈ ಮೂಲಕ ಮಾನ ಹರಾಜು ಹಾಕುತ್ತಿದ್ದಾನೆ ಎಂದು ವಿದ್ಯಾರ್ಥಿನಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ಕೊಟ್ಟಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ