ಹುಕ್ಕೇರಿ : ಮೇ 11 ರಂದು ಹುಕ್ಕೇರಿ ಮಾಧ್ಯಮಿಕ ಶಾಲಾ ನೌಕರರ ಸಂಘದ ಬೆಳ್ಳಿ ಹಬ್ಬ ಆಚರಣೆ – ಸಂಬಾಳ
ಹುಕ್ಕೇರಿ ತಾಲೂಕಿನ ಮಾಧ್ಯಮಿಕ ಶಾಲಾ ನೌಕರರ ಸಂಘದ 25 ನೇ ಬೆಳ್ಳಿ ಹಬ್ಬ ಆಚರಣೆ ಹಾಗೂ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಮೇ 11 ರಂದು ಜರುಗಲಿದೆ ಎಂದು ಸಂಘದ ಸಂಸ್ಥಾಪಕ ಎಸ್ ಆಯ್ ಸಂಬಾಳ ಹೇಳಿದರು. ಅವರು ಇಂದು ಹುಕ್ಕೇರಿ ನಗರದ ಸಂಘದ ಕಛೇರಿಯಲ್ಲಿ ಮಾದ್ಯಮಗಳೊಂದಿಗೆ
ಮಾತನಾಡುತ್ತಾ ಕಳೆದ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮಿಕ ಶಾಲಾ ನೌಕರರ ಸಂಘ ಈ ವರ್ಷ ಬೆಳ್ಳಿ ಹಬ್ಬ ಆಚರಣೆಗೆ ಸಜ್ಜಾಗಿದೆ ಮೇ 11 ರಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೋರಟ್ಟಿ ಯವರು ನೂತನ ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ ಹಾಗೂ ಹರಗುರು ಚರಮೂರ್ತಿಗಳು ಶಾಸಕ ,ಸಚಿವರು ಉಪಸ್ಥಿತರಿರುವರು ಎಂದರು
ಸಂಘದ ಅದ್ಯಕ್ಷ ಸಿ ಎಮ್ ದರಬಾರೆ ಮಾತನಾಡಿ ಸರಕಾರಿ ಮತ್ತು ಅನುದಾನಿತ ಮಾಧ್ಯಮಿಕ ಶಾಲಾ ನೌಕರರ ಹಿತದೃಷ್ಟಿಯಿಂದ ಪ್ರಾರಂಬಿಸಿದ ಈ ಸಂಘ ಇಂದು ಹೆಮ್ಮರವಾಗಿ ಬೆಳೆದು ನೌಕರರ ಹಿತಕಾಪಾಡುವಲ್ಲಿ ಯಶಸ್ವಿಯಾಗಿದೆ ಕಾರಣ ಮೇ 11 ರಂದು ಜರಗಲಿರುವ ಕಾರ್ಯಕ್ರಮಕ್ಜೆ ತಾಲೂಕಿನ ಎಲ್ಲ ಸದಸ್ಯರು ಪಾಲ್ಗೊಂಡು ಶೋಭೆ ತರಬೇಕು ಎಂದರು
ಈ ಸಂದರ್ಭದಲ್ಲಿ ಉಪಾದ್ಯಕ್ಷ ಜಿ ಎಚ್ ಮುತಾಲಿಕ, ಎಸ್ ಸಿ ಮಾನಗಾಂವಿ, ಆರ್ ಎ ಬಡಿಗೇರ, ಬಿ ಕೆ ಯರಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Laxmi News 24×7