Breaking News

ಜಮೀರ್ ಶಾಂತವಾಗಿದ್ದರೇ ಸಾಕು; ಹೇಳಿಕೆಗಳನ್ನ ಕೊಡದೆ ಬಾಯಿ ಮುಚ್ಚಿಕೊಂಡಿದ್ದರೆ ಸಾಕು: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

Spread the love

ಜಮೀರ್ ಶಾಂತವಾಗಿದ್ದರೇ ಸಾಕು; ಹೇಳಿಕೆಗಳನ್ನ ಕೊಡದೆ ಬಾಯಿ ಮುಚ್ಚಿಕೊಂಡಿದ್ದರೆ ಸಾಕು: ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಜಮೀರ್ ಶಾಂತವಾಗಿದ್ದರೇ ಸಾಕು ಎಂದು ಸಚಿವ ಜಮೀರ್ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟಾಂಗ್ ನೀಡಿದ್ದಾರೆ. ಬಾಂಬ್ ಕಟ್ಟಿಕೊಂಡು ಪಾಕ್ ಗಡಿಗೆ ಹೋಗ್ತೀನಿ ಎಂದ ಸಚಿವ ಜಮೀರ್ ಅಹ್ಮದ್‌ ಗೆ ಸಚಿವ ಪ್ರಲ್ಹಾದ ಜೋಶಿಯವರು ಇಂದು ವಿಜಯಪುರದ ಲಕ್ಷ್ಮೀ ನರಸಿಂಹ ದೇಗುಲಕ್ಕೆ ಭೇಟಿ ನೀಡಿದಾಗ ಮಾದ್ಯಮಗಳ ಜೊತೆಗೆ ಮಾತನಾಡಿ ನೀವೆನೂ ಮಾಡೋದು ಬೇಡ, ಸುಮ್ಮನಿದ್ದರೆ ಸಾಕು, ಮಿಲಿಟರಿ ಯನ್ನ ನಂಬಿ ಸುಮ್ಮನಿರಿ ಸಾಕು ನಿಮ್ಮ ಭಾಷಣ ಬೇಡ, ನೀವು ಹೋಗೋದು ಬೇಡ, ಸೈನ್ಯದ ಶಕ್ತಿ, ಸೈನಿಕರು, ಇಂಟಲಿಜೆನ್ಸ್ ಬಗ್ಗೆ ವಿಶ್ವಾಸವಿಡಿ, ಹೇಳಿಕೆಗಳನ್ನ ಕೊಡದೆ ಬಾಯಿ ಮುಚ್ಚಿಕೊಂಡಿದ್ದರೆ ಸಾಕು ಎಂದು ವ್ಯಂಗ್ಯವಾಡಿದರು.
ಜಮೀರ್ ಶಾಂತವಾಗಿರೋದೆ ದೇಶಕ್ಕೆ ಮಾಡೋ ದೊಡ್ಡ ಸೇವೆ ಎಂದರು. ಜಮೀರ್ ದೊಡ್ಡ ತ್ಯಾಗಕ್ಕೆ ಹೊರಟಿದ್ದಾರೆ, ಅವರಂತ ದೊಡ್ಡ ತ್ಯಾಗದವರು ಯಾರು ಇಲ್ಲ ಎಂದು ವ್ಯಂಗ್ಯವಾಡಿದರು. ನೀವು ನಿಮ್ಮ ಪಕ್ಷದವರು ಶಾಂತದಿಂದ ಇರಿ, ಜಮೀರ್, ಸಂತೋಷ ಲಾಡ್, ಖರ್ಗೆ, ಸಿದ್ದರಾಮಯ್ಯ ಸುಮ್ಮನಿದ್ದರೆ ಸಾಕು , ಡಿಕೆ ಶಿವಕುಮಾರ್ ಟೆರೆರಿಸ್ಟ್‌ಗಳನ್ನ ಬ್ರದರ್ ಎನಸಿದ್ದರೇ ಸಾಕು ಎಂದು ಟಾಂಗ್ ನೀಡಿದರು.
ಸೇನೆ ಎಲ್ಲವನ್ನೂ ನಿಭಾಯಿಸುತ್ತೆ, ಸೈನ್ಯದ, ಸೈನಿಕರ ಆತ್ಮ ಸ್ಥೈರ್ಯ ಕುಗ್ಗಿಸದೆ ಸುಮ್ಮನಿದ್ದರೆ ಸಾಕು, ಇಲ್ಲ ಸಲ್ಲದ ಹೇಳಿಕೆ‌ ಕೊಡೊದನ್ನ ಬಿಟ್ಟರೇ ಸಾಕು ಎಂದು ಪ್ರಹ್ಲಾದ್ ಜೋಶಿ ಹೇಳಿದರು. ನನಗೆ ಬಾಂಬ್ ಕಟ್ಟಿ ಪಾಕಿಸ್ತಾನಕ್ಕೆ ಹೋಗಿ ಹೋರಾಡ್ತೀನಿ ಎಂದಿದ್ದ ಸಚಿವ ಜಮೀರ್ ಅಹ್ಮದ್‌ಗೆ ಮಾತಲ್ಲೆ ಕೇಂದ್ರ ಸಚಿಚ ಜೋಶಿ ಟಾಂಗ್ ಕೊಟ್ಟರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ