Breaking News

ದಶಕಗಳ ಬಳಿಕ ಗೋಲಿಸೋಡಕ್ಕೆ ಮತ್ತೆ ಡಿಮ್ಯಾಂಡ್

Spread the love

ಮಂಗಳೂರು: ಮೂರು ದಶಕಗಳ ಹಿಂದೆ ತಂಪು ಪಾನೀಯ ಎಂದರೆ ಅದು ಗೋಲಿಸೋಡ. ಸ್ಥಳೀಯವಾಗಿ ತಯಾರಾಗುತ್ತಿದ್ದ ಗೋಲಿಸೋಡಕ್ಕೆ ವಿಪರೀತ ಡಿಮ್ಯಾಂಡ್ ಇತ್ತು. ಆಗಿನ ಕಾಲದ ಗೋಲಿಸೋಡ ಕ್ರಮೇಣ ನೇಪಥ್ಯಕ್ಕೆ ಸರಿದಿತ್ತು. ಆದರೆ ಮೂರು ದಶಕಗಳ ಬಳಿಕ ಮತ್ತೆ ಈ ಗೋಲಿಸೋಡಕ್ಕೆ ಡಿಮ್ಯಾಂಡ್ ಬಂದಿದೆ.

ಮೂರು ಫ್ಲೇವರ್​ಗಳಾದ ಆರೆಂಜ್, ಜಿಂಜರ್ ಮತ್ತು ಸಪ್ಪೆಯಲ್ಲಿ ಇರುತ್ತಿದ್ದ ಗೋಲಿಸೋಡಕ್ಕೆ ಕ್ರಮೇಣ ಬೇಡಿಕೆ ಕಡಿಮೆಯಾಗುತ್ತಾ ಬಂತು. ವಿವಿಧ ಕಂಪೆನಿಗಳ ತಂಪು ಪಾನೀಯಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಗೋಲಿಸೋಡಕ್ಕೆ ಬೇಡಿಕೆ ಕಡಿಮೆಯಾಯಿತು. ಕ್ರಮೇಣ ಕೆಲವೇ ಅಂಗಡಿಗಳನ್ನು ಹೊರತುಪಡಿಸಿ ಗೋಲಿಸೋಡ ಎಲ್ಲಿಯೂ ಸಿಗದಂತೆ ಆಗಿತ್ತು.

ಗೋಲಿಸೋಡ ತಯಾರಕರು ಗೋಲಿಸೋಡಕ್ಕೆ ಬೇಡಿಕೆಯಿಲ್ಲದ ಕಾರಣಕ್ಕಾಗಿ ಇದರ ಉತ್ಪಾದನೆಯನ್ನು ಸ್ಥಗಿತಗೊಳಿಸಿದರು. ಯುವಜನರು ಬಹುರಾಷ್ಟ್ರೀಯ ಕಂಪೆನಿಯ ತಂಪುಪಾನೀಯದ ಮೊರೆ ಹೋದರು. ಗೋಲಿಸೋಡ ಮರೆತೇ ಬಿಟ್ಟಿದ್ದ ಜನತೆಗೆ ಮತ್ತೆ ಮಾರುಕಟ್ಟೆಗೆ ಬಂದ ಗೋಲಿಸೋಡ ಹಿಂದಿನ ನೆನಪನ್ನು ಮರುಕಳಿಸಿದೆ.

ಗೋಲಿಸೋಡ ಮರೆತ ಕಾಲದಲ್ಲಿ ಮಂಗಳೂರಿನ ವಿನಾಯಕ ಪೈ ಅವರು ಗೋಲಿಸೋಡ ಉತ್ಪಾದನೆ ಆರಂಭಿಸಿದರು. ನಗರದ ಬಂದರ್​ನಲ್ಲಿ ಫ್ಯಾಕ್ಟರಿ ಆರಂಭಿಸಿ ಗೋಲಿಸೋಡ ತಯಾರು ಮಾಡುತ್ತಿದ್ದಾರೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ