Breaking News

ಮಗಳನ್ನು ಹುಡುಕಿಕೊಡುವಂತೆ ಠಾಣೆ ಮುಂದೆ ಪೋಷಕರಿಂದ ಅರೆಬೆತ್ತಲೆ ಪ್ರತಿಭಟನೆ (

Spread the love

ತುಮಕೂರು: ಹಾಡಹಗಲೇ ಮಗಳ ಅಪಹರಣವಾಗಿದ್ದು ಹುಡುಕಿಕೊಡುವಂತೆ ಪೊಲೀಸರ ಬಳಿ ಬಂದರೂ ನ್ಯಾಯ ಸಿಗಲಿಲ್ಲ ಎಂದು ಆರೋಪಿಸಿ ಮಗಳನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆ ಎದುರೇ ಪೋಷಕರು ಅರೆಬೆತ್ತಲೆ ಪ್ರತಿಭಟನೆ ನಡೆಸಿದ ಘಟನೆ ತುಮಕೂರು ಜಿಲ್ಲೆ ತಿಪಟೂರು ನಗರ ಪೊಲೀಸ್ ಠಾಣೆ ಎದುರು ನಡೆದಿದೆ.

ತಿಪಟೂರು ನಗರದ ಕಂಚಾಘಟ್ಟ ನಿವಾಸಿ ರಂಗಸ್ವಾಮಿ ಕುಟುಂಬದಿಂದ ಪ್ರತಿಭಟನೆ ನಡೆದಿದೆ.

ಹಿರೆಬಿದರೆ ಗ್ರಾಮದ ಯುವಕನೊಬ್ಬ ಮಗಳನ್ನು ಪ್ರೀತಿಸುತ್ತಿದ್ದ, ಯುವಕನ ತಾಯಿ ಆಟೋದಲ್ಲಿ ಬಂದು ತಮ್ಮ ಮಗಳನ್ನು ಕರೆದೊಯ್ದಿದ್ದಾರೆ. ಯುವತಿ ಮನೆಗೆ ಬಂದು ಪೋಷಕರನ್ನು ಕೂಡಿಹಾಕಿ ಅಪಹರಣ ಆರೋಪ ಮಾಡಲಾಗಿತ್ತು ಎಂದು ಪೋಷಕರು ಆರೋಪಿಸಿದ್ದರು. ದೂರು ನೀಡಲು ಬಂದವರಿಗೆ ಸ್ಪಂದಿಸದ ಪೊಲೀಸರ ವಿರುದ್ಧ ರೊಚ್ಚಿಗೆದ್ದ ಪೋಷಕರು ಠಾಣೆ ಎದುರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.ನಂತರ ಅವರನ್ನು ಸಮಾಧಾನ ಪಡಿಸಿದ ಪೊಲೀಸರು ಪ್ರತಿಭಟನೆ ಮುಂದುವರೆಸದಂತೆ ತಡೆದರು. ರಾತ್ರಿ ಪ್ರಿಯಕರನೊಂದಿಗೆ ಠಾಣೆಗೆ ಬಂದ ಯುವತಿ, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದಾರೆ. ಮಗಳ ಪ್ರೀತಿಗೆ ಪೋಷಕರು ಒಪ್ಪಿದ್ದು, ಎರಡು ಮನೆಯವರಿಂದ ಮದುವೆಗೆ ಒಪ್ಪಿಗೆ ದೊರೆತ ನಂತರ ಪ್ರಕರಣ ಸುಖಾಂತ್ಯ ಕಂಡಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ