Breaking News

ಗ್ರಾ.ಪಂ. ಉಪಾಧ್ಯಕ್ಷರ ವಾರ್ಡ್ ನಲ್ಲಿಯೇ ಕಸ ತುಂಬಿದ್ದರಿಂದ ಪರಿಸರ ಮಾಲಿನ್ಯ

Spread the love

ನಂದಗಡ : ಗ್ರಾ.ಪಂ. ಉಪಾಧ್ಯಕ್ಷರ ವಾರ್ಡ್ ನಲ್ಲಿಯೇ ಕಸ ತುಂಬಿದ್ದರಿಂದ ಪರಿಸರ ಮಾಲಿನ್ಯ
ಖಾನಾಪೂರ ತಾಲೂಕಿನ ನಂದಗಡ ಗ್ರಾಮದಲ್ಲಿನ ವಾರ್ಡ್ ನಂಬರ್ 4ರ ಹಾಲಿ ಉಪಾಧ್ಯಕ್ಷ ಸಂಗೀತಾ ಮಡ್ಡಿಮನಿ
ಅವರು ಪ್ರತಿನಿಧಿಸಿ ಉಪಾಧ್ಯಕ್ಷ ಸ್ಥಾನ ಅಲಂಕರಿಸಿರುವ ಅವರು ತಮ್ಮ ವಾರ್ಡಿನ ಕಡೆ ಸಂಪೂರ್ಣ ನಿರ್ಲಕ್ಷಿ ಮಾಡಿರುವ ಬಗ್ಗೆ ಕಂಡು ಬರುತ್ತಿದೆ ಒಟ್ಟು ನಾಲ್ಕು ಸದಸ್ಯರನ್ನು ಒಳಗೊಂಡ ಈ ವಾರ್ಡಿನ ಕಲಾಲಗಲ್ಲಿ
ಮುಂದಿನ ಬೊಳ ಒಳಗಡೆ ಇರುವ ಪ್ರದೇಶದಲ್ಲಿ ಇಂತಹಾ ದುಶೀತಗೊಂಡ ಪರಿಸರ ಅಸ್ವಸ್ಥತೆ ಪದೇ ಪದೇ ಇದರ ಬಗ್ಗೆ ಹೇಳಿಯೂ ನಿರ್ಲಕ್ಷ್ಯ ಧೋರಣೆ ಅನುಸರಿಸುವ ಮೂಲಕ ಸ್ವಚ್ಛ ಭಾರತ ಮಾಡುವ ಯೋಜನೆ ಶೂನ್ಯ
ಈ ಪರಿಸರದಲ್ಲಿ ಒಂದು ಬಾವಿ ಕೂಡಾ ಇದೆ ಇದರ ಪರಿಸ್ಥಿತಿ ನೋಡಿದರೆ ಸಂಪೂರ್ಣ ನೀರು
ಹಸಿರುಮಯ,ತ್ಯಾಪಿಯಿಂದ ಕುಡಿದೆ ಒಂದು ಬಿಟ್ಟು ಎರಡು ಸಲ ಇದಕ್ಕೆ ಸಂಬಂಧಿಸಿದಂತೆ ಯೋಜನೆ ಮಾಡಿಯೂ ಸಾರ್ವಜನಿಕರಿಗೆ ಸದುಪಯೋಗವಾಗದೆ ಇರುವ ಸ್ಥಿತಿ ಇದರ ಪಕ್ಕದಲ್ಲೇ ಹೊಲಗಳಿವೆ ರೈತರು ಈ ಪರಿಸ್ಥಿತಿ ನೋಡಿ ಕಂಗಾಲಾಗಿದ್ದಾರೆ ಇದರ ಕುರಿತು ಶಂಕರ ಪಾಟೀಲ ಎಂಬ ರೈತ ಮಾತನಾಡಿ ಪದೇ ಪದೇ ಗ್ರಾಮ ಪಂಚಾಯಿತಿಗೆ ಹೇಳಿಯೂ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿಲ್ಲ
ಕಲಾಲಗಲ್ಲಿ ಜನರು ಇಲ್ಲಿ ಕಸ ಎಸೆಯುವುದು ಮಾಡುವುದರಿಂದ ಹಂದಿಗಳ ಕಾಟ ಕೂಡಾ ಜಾಸ್ತಿ ಇದೆ ನಮ್ಮ ಹೊಲದಲ್ಲಿ ಸಂಪೂರ್ಣ ಅಸ್ವಸ್ಥತೆ ನಿರ್ಮಿಸಿದೆ ಇಲ್ಲಿಯೇ ಬಾವಿ ಕೂಡಾ ಇದೆ ಅದರ ಪರಿಸ್ಥಿತಿ ಇದೆ ಇದರ ಸ್ಥಿತಿ ಕಳೆದ ಎರಡು ಮೂರು ವರ್ಷಗಳಿಂದ ಇದರ ಬಗ್ಗೆ ಗ್ರಾಮ ಪಂಚಾಯಿತಿಗೆ ಹೇಳಿಯೂ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು.
ಸಂಪೂರ್ಣ ನಿರ್ಲಕ್ಷ್ಯ ಧೋರಣೆ ಮಾಡಿದ ನಂದಗಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂಬರ್ 4ರ ಕಲಾಲಗಲ್ಲಿನ ಈ ಅಸ್ವಸ್ಥತೆ ಬಗ್ಗೆ ಉಪಾಧ್ಯಕ್ಷರಾಗಲಿ,ವಾರ್ಡಿನ ಸದಸ್ಯರಾಗಲಿ ಗಮನಿಸಿ,
ಇಲ್ಲವಾದರೆ ಕೊನೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರಾದರೂ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕ ಆರೋಗ್ಯದ ಬಗ್ಗೆ ರೈತರ ಹೊಲದಲ್ಲಿ ಬೆಳೆ ಬೆಳೆಯಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಸ್ವಚ್ಛ ವಾತಾವರಣದ ಬಗ್ಗೆ ಪರಿಗಣಿಸುತ್ತಾರೆಯೂ ಕಾದು ನೋಡಬೇಕಿದೆ.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ