Breaking News

ವೃದ್ಧಾಶ್ರಮವಾಗುತ್ತಿದೆ ಬೆಳಗಾವಿ ಬಿಮ್ಸ್; ಇಳಿ ವಯಸ್ಸಿನಲ್ಲಿ ಮಕ್ಕಳಿದ್ದರೂ ಅನಾಥವಾಗುತ್ತಿದ್ದಾರೆ ತಂದೆ-ತಾಯಿಯರು…!!!

Spread the love

ಮಕ್ಕಳಿಲ್ಲ ಎನ್ನುವವರು ಮಕ್ಕಳಿದ್ದವರ ಪರಿ ಏನಾಗುತ್ತಿದೆ ನೋಡಿ…!!!
ವೃದ್ಧಾಶ್ರಮವಾಗುತ್ತಿದೆ ಬೆಳಗಾವಿ ಬಿಮ್ಸ್; ಇಳಿ ವಯಸ್ಸಿನಲ್ಲಿ ಮಕ್ಕಳಿದ್ದರೂ ಅನಾಥವಾಗುತ್ತಿದ್ದಾರೆ ತಂದೆ-ತಾಯಿಯರು…!!!
ನಮಗೆ ಮಕ್ಕಳಾಗಿಲ್ಲ ಎಂದು ಚಿಂತಿಸುವವರೂ ಮಕ್ಕಳಿದ್ದ ತಂದೆ-ತಾಯಿಯರ ಪರಿಸ್ಥಿತಿ ಹೇಗಿದೆ ಎಂದು ನೋಡಲೇಬೇಕಾದ ಒಂದು ವರದಿ ಇಲ್ಲಿದೆ.
ಹೌದು, 9 ತಿಂಗಳು ಹೊತ್ತು ಹೆತ್ತಿ ಮಕ್ಕಳಿಗೆ ಜನ್ಮ ನೀಡಿ, ಕಷ್ಟಪಟ್ಟು ಬೆಳೆಸಿ ವೃದ್ಧಾಪ್ಯಕಾಲದಲ್ಲಿ ಆಸರೆಯಾಗುತ್ತಾರೆಂದು ಭಾವಿಸುವ ಪಾಲಕರು ಒಂದು ಬಾರಿ ಈ ವರದಿಯನ್ನು ನೋಡಿ. ಮಗುವಿಗೆ ಹುಷಾರಿಲ್ಲದಿದ್ದರೇ, ರಾತ್ರಿಯಿಡಿ ನಿದ್ದೆಗೆಡ್ಡು ಆರೈಕೆ ಮಾಡುವ ತಂದೆ ತಾಯಿಯರು ಇಳಿವಯಸ್ಸಿಗೆ ಬಂದಾಗ ಈ ಮಕ್ಕಳಿಗೆ ಭಾರವಾಗಿದ್ದಾರೆ. ಅನಾರೋಗ್ಯಕ್ಕಿಡಾದ ತಂದೆ-ತಾಯಿಯರನ್ನು ಮನೆಯಿಂದ ಹೊರ ಹಾಕಿ ಮಕ್ಕಳು ದೂರ ಉಳಿಯುತ್ತಿದ್ದಾರೆ. ಇನ್ನು ಇಂತಹ ವೃದ್ಧರಿಗೆ ಆಶ್ರಮವಾಗಿ ಬೆಳಗಾವಿಯ ಜಿಲ್ಲಾಸ್ಪತ್ರೆ ವೃದ್ಧಾಶ್ರಮವಾಗಿ ಪರಿವರ್ತನೆಗೊಳ್ಳುತ್ತಿದೆ.
ಕಳೆದ 2 ವರ್ಷಗಳಲ್ಲಿ 152 ವೃದ್ಧರನ್ನು ಅನಾರೋಗ್ಯಕ್ಕಿಡಾದ ಹಿನ್ನೆಲೆ ಅವರ ಮಕ್ಕಳು ಜಿಲ್ಲಾಸ್ಪತ್ರೆಯಲ್ಲೇ ಬಿಟ್ಟು ಹೋಗಿದ್ದಾರೆ. ಆಸ್ತಿ ಕಾಗದಪತ್ರಗಳಿಗೆ ಸಹಿ ಮಾಡಿಸಿಕೊಂಡು ಮೂಲ ಮಾಲೀಕರನ್ನೇ ಬೀದಿಪಾಲು ಮಾಡುತ್ತಿದ್ದಾರೆ. ತಮ್ಮ ತಂದೆ ತಾಯಿ ಗುಣಮುಖರಾದರೂ ಕೂಡ, ಅವರನ್ನು ಮನೆಗೆ ಕರೆದೊಯ್ಯದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಜಿಲ್ಲಾಸ್ಪತ್ರೆ ಪೊಲೀಸ್ ಇಲಾಖೆಯ ಮೂಲಕ ಮಕ್ಕಳನ್ನು ಸಂಪರ್ಕಿಸಿದರೂ, ತಮ್ಮ ಪೋಷಕರನ್ನು ಕರೆದುಕೊಂಡು ಹೋಗಲು ಬರುತ್ತಿಲ್ಲವೆಂಬುದು ವಿಪರ್ಯಾಸವೇ ಸರಿ.
ಈಗಾಗಲೇ ಹೊರ ರಾಜ್ಯದ 17 ಜನರನ್ನು ಮತ್ತು ರಾಜ್ಯದ ವಿವಿಧೆಡೆಯ 23 ಜನರನ್ನು ಅವರ ಮಕ್ಕಳ ಮನೆಗೆ ಕಳುಹಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಆದರೇ ಇನ್ನುಳಿದ 62 ಜನರ ಮಕ್ಕಳಿದ್ದರೂ ಅನಾಥರಾಗಿ ಕಣ್ಣೀರು ಹಾಕುತ್ತಿದ್ದಾರೆ. ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಈ ಕುರಿತು ಬಿಮ್ಸ್ ಆರ್.ಎಂ.ಓ ಸರೋಜಿನಿ ಹೇಳಿದ್ದು ಹೀಗೆ.
ಬಿಮ್ಸ್ ಸಿಬ್ಬಂದಿ ವಿದ್ಯಾಶ್ರೀ ಬಾಮನೆ ಅವರು ರೋಗಿಗಳು ಹುಷಾರಾದ ಬಳಿಕ ಅವರ ಪೋಷಕರನ್ನು ಪೊಲೀಸರ ಸಹಾಯದಿಂದ ಹುಡುಕಿ ಕಳುಹಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಈಗಾಗಲೇ ಹಲವರನ್ನು ಅವರ ಮನೆಗಳಿಗೆ ಕಳುಹಿಸಿ ಕೊಡಲಾಗಿದೆ. ಕೆಲ ಜನರನ್ನು ವೃದ್ಧಾಶ್ರಮಕ್ಕೆ ಕಳುಹಿಸಲಾಗಿದೆ ಎಂದರು.
ಒಟ್ಟಾರೆ ಹೆತ್ತ ತಂದೆ-ತಾಯಿಯೇ ಬೇಡವಾದವೆಂದು ಅವರನ್ನು ಬಿಟ್ಟು ಹೋದವರು ಹಣ್ಣು ಜೀವದ ವ್ಯಥೆಯನ್ನು ತಿಳಿದುಕೊಳ್ಳದಿರುವುದು ದುರ್ದೈವವೇ ಸರಿ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ