Breaking News

ಸಂಚಾರಿ‌ ನಿಯಮ ಉಲ್ಲಂಘಿಸಿದವರಿಂದ 1,01,23,100 ರೂಪಾಯಿ ದಂಡ ವಸೂಲಿ

Spread the love

ಹುಬ್ಬಳ್ಳಿ: ಸಂಚಾರಿ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು ದೊಡ್ಡ ಮಟ್ಟದ ದಂಡ ವಿಧಿಸಲಾಗುತ್ತಿದೆ. ಆದ್ರೂ ಕೂಡಾ ವಾಹನ ಸವಾರರು ಎಚ್ಚೆತ್ತುಕೊಳ್ಳುತ್ತಿಲ್ಲ. ಒಂದಿಲ್ಲೊಂದು ಕಾರಣದಿಂದ ನಿಯಮ ಉಲ್ಲಂಘಿಸುವ ಸವಾರರಿಂದ ಎರಡು ತಿಂಗಳಲ್ಲಿ ಕೋಟಿಗಟ್ಟಲೆ ದಂಡವನ್ನು ಹುಬ್ಬಳ್ಳಿ-ಧಾರವಾಡ ಸಂಚಾರಿ ಪೊಲೀಸರು ವಸೂಲಿ ಮಾಡಿದ್ದಾರೆ.

ಕಳೆದ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಅವಳಿ ನಗರದ ಪೊಲೀಸರು, ಸಂಚಾರಿ‌ ನಿಯಮ ಉಲ್ಲಂಘನೆಯಿಂದ 1,01,23,100 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಮದ್ಯ ಸೇವಿಸಿ ವಾಹನ ಚಾಲನೆ, ಏಕಮುಖ ಸಂಚಾರ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚಾರ, ನೋ‌ ಹೆಲ್ಮೆಟ್, ನೋ ಪಾರ್ಕಿಂಗ್‌, ಫುಟ್‌ಪಾತ್‌ನಲ್ಲಿ ವಾಹನಗಳ ನಿಲುಗಡೆ, ದ್ವಿಚಕ್ರ ವಾಹನದಲ್ಲಿ ಮೂವರು ಸವಾರರ ಪ್ರಯಾಣ ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳೂ ಸೇರಿದಂತೆ ಹಲವು ಪ್ರಕರಣಗಳಿಂದ ಸವಾರರು ಹಾಗೂ ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಜನವರಿ‌ ಹಾಗೂ ಫೆಬ್ರವರಿಯಲ್ಲಿ ಒಟ್ಟು 9,951 ಪ್ರಕರಣ ದಾಖಲಾಗಿದ್ದು, ಮದ್ಯ ಸೇವಿಸಿ ವಾಹನ ಚಲಾವಣೆಯ 397 ಪ್ರಕರಣ ದಾಖಲಿಸಿ 40,74,500 ರೂ. ದಂಡ ವಸೂಲಿ ಮಾಡಲಾಗಿದೆ. ಓವರ್ ಸ್ಪೀಡ್ ವಿರುದ್ಧ 338 ಪ್ರಕರಣ ದಾಖಲಿಸಿ 3,35,500 ರೂ. ದಂಡ ವಸೂಲಿ ಮಾಡಲಾಗಿದೆ. ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವವರ ವಿರುದ್ಧ 7,362 ಪ್ರಕರಣ ದಾಖಲಿಸಿ 47,92,500 ರೂ. ದಂಡ ವಸೂಲಿ ಮಾಡಲಾಗಿದೆ.‌

ವಾಹನ ಚಾಲನೆ ವೇಳೆ ಮೊಬೈಲ್​ ಬಳಕೆ ಸಂಬಂಧ 333 ಪ್ರಕರಣ ದಾಖಲಾಗಿದ್ದು, 1,73,600 ರೂ. ವಸೂಲಿ ಮಾಡಲಾಗಿದೆ. ಸೀಟ್ ಬೆಲ್ಟ್ ಧರಿಸದಿರುವವರ ವಿರುದ್ಧ 333 ಪ್ರಕರಣ ದಾಖಲಾಗಿದ್ದು, 1,73,600 ರೂ. ದಂಡ ವಿಧಿಸಲಾಗಿದೆ. ಟ್ರಾಫಿಕ್​ ಸಿಗ್ನಲ್​ ಜಂಪ್​ ಮಾಡಿದವರ ವಿರುದ್ಧ 65 ಪ್ರಕರಣ ದಾಖಲಾಗಿದ್ದು, ಅವರಿಂದ 32,100 ರೂ. ದಂಡ ಕಟ್ಟಿಸಿಕೊಳ್ಳಲಾಗಿದೆ. ವಾಹನ ಅಜಾಗರೂಕ ಚಾಲನೆ ಮಾಡಿದವರ ವಿರುದ್ಧ 42 ಪ್ರಕರಣ ದಾಖಲಾಗಿದ್ದು, ಅವರಿಂದ 46,500 ರೂ. ದಂಡ ವಸೂಲಿ ಮಾಡಲಾಗಿದೆ. ಹೈ-ಬೀಮ್ ಲೈಟ್​ ಬಳಕೆ ಮಾಡಿದವರ ವಿರುದ್ಧ 17 ಪ್ರಕರಣ ದಾಖಲಾಗಿದ್ದು, ಅವರಿಂದ 8,500 ರೂ. ದಂಡ ಕಟ್ಟಿಸಿಕೊಳ್ಳಲಾಗಿದೆ. ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸಿದರವ ವಿರುದ್ಧ 289 ಪ್ರಕರಣ ದಾಖಲಿದ್ದು, ಅವರಿಂದ 58,900 ರೂ. ದಂಡ ವಸೂಲಿ ಮಾಡಲಾಗಿದೆ. ನೋ ಪಾರ್ಕಿಂಗ್​ ಸ್ಥಳದಲ್ಲಿ ವಾಹನ ಪಾರ್ಕ್​ ಮಾಡಿದವರ ವಿರುದ್ಧ 1,059 ಪ್ರಕರಣ ದಾಖಲಾಗಿದ್ದು, ಅವರಿಂದ 5,29,900 ರೂ. ದಂಡ ಕಟ್ಟಿಸಿಕೊಳ್ಳಲಾಗಿದೆ.

ಹೀಗೆ ಸೀಟ್ ಬೆಲ್ಟ್, ಟ್ರಾಫಿಕ್ ಸಿಗ್ನಲ್‌ ಜಂಪ್, ನೋ ಪಾರ್ಕಿಂಗ್​ ಸೇರಿದಂತೆ ಹಲವು ಕಾರಣದಿಂದ ಸುಮಾರು 1.1 ಕೋಟಿಗೂ‌ ಅಧಿಕ ದಂಡ ವಸೂಲಿ ಮಾಡಲಾಗಿದೆ. ಇನ್ನೂ ಅಪ್ರಾಪ್ತರು ಬೈಕ್ ಚಾಲನೆ ಮಾಡುವವರ ವಿರುದ್ಧವೂ 2024-25ರಲ್ಲಿ ನಾಲ್ಕು ಸಂಚಾರಿ ಠಾಣೆಯಲ್ಲಿ 52 ಪ್ರಕರಣ ದಾಖಲಿಸಿ 10,79,500 ರೂಪಾಯಿ‌ ದಂಡ ವಸೂಲಿ ಮಾಡಲಾಗಿದೆ ಎಂದು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ