Breaking News

ಬಸ್ಸಿನ ಟೈರ್​​ ಸ್ಫೋಟ 100 ಮೀಟರ್‌ಗೂ ಹೆಚ್ಚು ತೆವಳಿಕೊಂಡು ಹೋಗಿ ನಿಂತ. ಬಸ್

Spread the love

ಗಂಗಾವತಿ(ಕೊಪ್ಪಳ): ಚಲಿಸುತ್ತಿದ್ದ ಕೆಕೆಆರ್‌ಟಿಸಿ ಬಸ್ಸಿನ ಮುಂಭಾಗದ ಟೈರ್​​ ಸ್ಫೋಟಗೊಂಡ ಘಟನೆ ದಾಸನಾಳದ ಹೊರವಲಯದಲ್ಲಿ ನಡೆದಿದೆ. ನಿಯಂತ್ರಣ ತಪ್ಪಿದ ಬಸ್ಸ​ನ್ನು ಚಾಲಕ ಹತೋಟಿಗೆ ತಂದು 20 ಪ್ರಯಾಣಿಕರ ಜೀವ ಕಾಪಾಡಿದ್ದಾರೆ.

ಗಂಗಾವತಿ ಸಾರಿಗೆ ಘಟಕಕ್ಕೆ ಸೇರಿದ ಬಸ್​​ ಕೊಪ್ಪಳದಿಂದ ಗಂಗಾವತಿಯತ್ತ ಸಂಚರಿಸುತ್ತಿದ್ದಾಗ ಮುಂದಿನ ಚಕ್ರ ಸ್ಫೋಟಗೊಂಡಿದೆ. ಚಾಲಕ ಮಂಜುನಾಥ ಗಾಣಿಗೇರ ತಕ್ಷಣ ಬಸ್ಸನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಪರಿಣಾಮ ಬಸ್​​ ಸುಮಾರು 100 ಮೀಟರ್‌ಗೂ ಹೆಚ್ಚು ತೆವಳಿಕೊಂಡು ಹೋಗಿ ನಿಂತಿದೆ.

“ಟೈರ್​ ಸ್ಫೋಟಗೊಂಡ​ ಸಂದರ್ಭದಲ್ಲಿ ಬಸ್​​ನ ಹಿಂದೆ ಅಥವಾ ಎದುರು ಯಾವುದಾದರೂ ವಾಹನ ಬಂದಿದ್ದರೆ ಊಹಿಸಲಾಗದ ಅಪಾಯ ಉಂಟಾಗುತ್ತಿತ್ತು” ಎಂದು ಪ್ರಯಾಣಿಕರೊಬ್ಬರು ಹೇಳಿದರು.

ಪಾರಾದ ಸಚಿವ, ಸಂಸದ: ಈ ಘಟನೆಗೆ ಕೆಲವೇ ನಿಮಿಷ ಮುನ್ನ ಇದೇ ರಸ್ತೆಯಲ್ಲಿ ಸಚಿವ ಶಿವರಾಜ ತಂಗಡಗಿ ಹಾಗೂ ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್ ತೆರಳಿದ್ದರು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ