Breaking News

ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಪತ್ನಿ ಹೆಸರಿನಲ್ಲಿ ₹ 9,99,999 ದೇಣಿಗೆ ನೀಡಿದ ಡಿಸಿಎಂ

Spread the love

ಉಡುಪಿ : ಡಿಸಿಎಂ ಡಿ. ಕೆ ಶಿವಕುಮಾರ್ ಅವರಿಂದು ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ವೇಳೆ ತಮ್ಮ ಪತ್ನಿ ಹೆಸರಿನಲ್ಲಿ ದೇವಸ್ಥಾನಕ್ಕೆ 9,99,999 ರೂ. ದೇಣಿಗೆ ನೀಡಿದರು.

ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇವರು ವರ-ಶಾಪ ಕೊಡಲ್ಲ, ಅವಕಾಶ ಮಾತ್ರ ಕೊಡ್ತಾನೆ. ಮಾತೃಭೂಮಿ, ಭೂತಾಯಿ, ದೇವಿ ದರ್ಶನ ಮಾಡುವ ಅವಕಾಶ ಸಿಕ್ಕಿದೆ ಎಂದರು.

ನಮ್ಮ ಧರ್ಮವನ್ನ ನಾವು ಕಾಪಾಡಬೇಕು. ಯಾರು ಯಾರಿಗೂ ತೊಂದರೆ ಕೊಡಬೇಕು ಅಂತ ಯಾವ ಧರ್ಮದಲ್ಲೂ ಇಲ್ಲ. ಈ ದೇವಿ ಹೂವಿನಹಾರವನ್ನೂ ತೆಗೆದುಕೊಳ್ಳುತ್ತದೆ, ಹಣ್ಣೂ ತೆಗೆದುಕೊಳ್ಳುತ್ತದೆ, ಕೋಳಿ ಹಾಗೂ ಕುರಿಯನ್ನೂ ತೆಗೆದುಕೊಳ್ಳುತ್ತದೆ ಎಂದು ಇಲ್ಲಿನ ದೇವಸ್ಥಾನದ ವ್ಯವಸ್ಥಾಪಕರು ತಿಳಿಸಿದ್ದಾರೆ. ಇಲ್ಲಿ ದೇವಸ್ಥಾನದ ಕೆತ್ತನೆ ಮಾಡಿರುವವರಿಗೆ ಹಾಗೂ ದೇಗುಲಕ್ಕೆ ದಾನ ಮಾಡಿರುವವರಿಗೆ ಈ ದೇವಿ ಅನುಗ್ರಹಿಸುತ್ತಾರೆ ಎಂಬ ಸಂಪೂರ್ಣವಾದ ನಂಬಿಕೆ ನನಗೆ ಕಾಣಿಸುತ್ತಿದೆ ಎಂದು ಹೇಳಿದರು.

ಭಕ್ತಿ ಇಲ್ಲದೆ ಯಾವ ಮನುಷ್ಯನೂ ಬದುಕಲು ಸಾಧ್ಯವಿಲ್ಲ. ಲಕ್ಷಾಂತರ ಜನ ಭಕ್ತರು ಈ ದೇವಾಲಯಕ್ಕೆ ಬಂದು ದೇವಿಯ ಅನುಗ್ರಹ ಪಡೆಯುತ್ತಾರೆ ಎಂಬುದನ್ನ ನಾನು ತಿಳಿದಿದ್ದೇನೆ. ಎಲ್ಲಾ ಕಾರ್ಯಕ್ರಮ ಮುಗಿದ ಮೇಲೆ ಮತ್ತೆ ಕ್ಷೇತ್ರಕ್ಕೆ ಫ್ಯಾಮಿಲಿ ಜೊತೆ ಬರುತ್ತೇನೆ ಎಂದು ಡಿಸಿಎಂ ಹೇಳಿದರು.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ