Breaking News

ಬೆಂಗಳೂರಿನ‌ ಗವಿಗಂಗಾದೇಶ್ವರ ದೇವಸ್ಥಾನದ ಶಿವಲಿಂಗಕ್ಕೆ ಮಕರ ಸಂಕ್ರಮಣದ ದಿನದಂದು ಸೂರ್ಯ ಸ್ಪರ್ಶ ಮಾಡುವದನ್ನ ನಾವು ಕೇಳಿದ್ದೇವೆ.ಆದರೆ ಇಲ್ಲೊಂದು ಶಿವನ‌ ದೇವಸ್ಥಾನದಲ್ಲಿ ದಿನನಿತ್ಯ ಈಶ್ವರಲಿಂಗಕ್ಕೆ ಸೂರ್ಯದೇವ ಸ್ಪರ್ಶ ಮಾಡಿ ಹೋಗುತ್ತಿರುವದು ಕೌತುಕಕ್ಕೆ ಕಾರಣವಾಗಿದೆ.

Spread the love

ಬೆಂಗಳೂರಿನ‌ ಗವಿಗಂಗಾದೇಶ್ವರ ದೇವಸ್ಥಾನದ ಶಿವಲಿಂಗಕ್ಕೆ ಮಕರ ಸಂಕ್ರಮಣದ ದಿನದಂದು ಸೂರ್ಯ ಸ್ಪರ್ಶ ಮಾಡುವದನ್ನ ನಾವು ಕೇಳಿದ್ದೇವೆ.ಆದರೆ ಇಲ್ಲೊಂದು ಶಿವನ‌ ದೇವಸ್ಥಾನದಲ್ಲಿ ದಿನನಿತ್ಯ ಈಶ್ವರಲಿಂಗಕ್ಕೆ ಸೂರ್ಯದೇವ ಸ್ಪರ್ಶ ಮಾಡಿ ಹೋಗುತ್ತಿರುವದು
ಕೌತುಕಕ್ಕೆ ಕಾರಣವಾಗಿದೆ.
ಹಾಗಾದ್ರೆ ಈ ವಿಶೇಷ ದೇವಸ್ಥಾನ ಇರುವದಾದರೂ ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.
: ಹೌದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಹಳೇ ತಹಶೀಲ್ದಾರ ಕಚೇರಿ ಆವರಣದಲ್ಲಿರುವ ಐತಿಹಾಸಿಕ ಈಶ್ವರಲಿಂಗ ದೇವಸ್ಥಾನ ಅಚ್ಚರಿಗೆ ಸಾಕ್ಷಿಯಾಗಿದೆ. ದೇವಸ್ಥಾನದಲ್ಲಿ ಪ್ರತಿನಿತ್ಯ ಸೂರ್ಯ ಈಶ್ವರಲಿಂಗನಿಗೆ ಸ್ಪರ್ಶ ಮಾಡಿಯೇ ಹೋಗುವದು ದೇವಸ್ಥಾನದ ವಿಶೇಷ. ಬೆಂಗಳೂರಿನ ಗವಿಗಂಗಾದೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಮಣ ದಿನದಂದು ಮಾತ್ರ ಶಿವಲಿಂಗಕ್ಕೆ ನೇಸರ ಸ್ಪರ್ಶ ಮಾಡಿ ಹೋದರೇ ಹುಕ್ಕೇರಿಯ ಈಶ್ವರಲಿಂಗ ದೇವಸ್ಥಾನದಲ್ಲಿ ದಿನನಿತ್ಯ ಸೂರ್ಯ ಶಿವನ ಸ್ಪರ್ಶ ಮಾಡುವದು ವಿಶೇಷ.ಬೆಳಿಗ್ಗೆ 7:30 ರಿಂದ 8 ಗಂಟೆಯ ಒಳಗೆ ಕೆಲ ಕಾಲ ಸೂರ್ಯ ಈಶ್ವರಲಿಂಗನ ಸ್ಪರ್ಶ ಮಾಡುತ್ತಾನೆ. ಅಂದಾಜು 500 ರಿಂದ 600 ವರ್ಷ ಪುರಾತನ ಐತಿಹಾಸಿಕ ಲಿಂಗ ಇದಾಗಿದೆ‌. ಮೊದಲು ಹಳೆಯ ಕಟ್ಟದಲ್ಲಿದ್ದ ಈ ಲಿಂಗವನ್ನ ನೂತನ ದೇವಸ್ಥಾನ ನಿರ್ಮಿಸಿ ಪ್ರತಿಷ್ಠಾಪಿಸಲಾಗಿದೆ.ನೂತನ ದೇವಸ್ಥಾನದಲ್ಲೂ ಈಶ್ವರಲಿಂಗಕ್ಕೆ ಸೂರ್ಯದೇವ ಸ್ಪರ್ಶ ಮಾಡಿ ಹೋಗುತ್ತಿರುವದು ಅಚ್ಚರಿಗೆ ಕಾರಣವಾಗಿದೆ.
: ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ, ಹಿರೇಮಠ ಹುಕ್ಕೇರಿ
ಸಕಲ ಇಷ್ಟಾರ್ಥಗಳನ್ನ ಪೂರೈಸುವ ಸುಪ್ರಸಿದ್ದ ಈಶ್ವರ ಲಿಂಗ ದೇವಸ್ಥಾನಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಸೂರ್ಯ ದೇವನ ಸೃಷ್ಟಿಕರ್ತನ ಪಾದಕ್ಕೆ ತಗುಲಿ ಹೋಗುವ ಕಾರಣ ಈಶ್ಚರ ಲಿಂಗಕ್ಕೆ ತನ್ನದೇ ಆದ ಶಕ್ತಿ ಇದೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಸೂರ್ಯ ಶಿವನ ಸ್ಪರ್ಶ ಮಾಡಿ ಹೋಗುವ ಕೆಲವೇ ಕೆಲುವು ದೇವಸ್ಥಾನಗಳಿದ್ದು ಅದರಲ್ಲಿ ಹುಕ್ಕೇರಿ ಪಟ್ಟಣದ ಈಶ್ವರಲಿಂಗ ದೇವಸ್ಥಾನವೂ ಒಂದು.ಶಿವ ಭಕ್ತರು ಈ ಕೌತುಕವನ್ನ ಬೆಳಗಿನ ಜಾವ ತೆರಳಿ ದಿನನಿತ್ಯ ಕಣ್ಣು ತುಂಬಿಕೊಂಡು ಶಿವನ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಬೈಟ್ : ಸುರೇಶ ಕಿಲ್ಲೆದಾರ, ಸ್ಥಳೀಯ
ಒಟ್ಟಿನಲ್ಲಿ ಸನಾತನ ಧರ್ಮದಲ್ಲಿ ಇಂಥ ವಿಶೇಷಗಳು ನಡೆಯುತ್ತಲೆ ಇರುತ್ತವೆ.ಸೃಷ್ಟಿಕರ್ತ ಶಿವನ ಪಾದ ಸ್ಪರ್ಶಿಸಿ ಸೂರ್ಯದೇವ ಮುಂದೆ ಹೋಗುತ್ತಾನೆ ಎನ್ನುವ ಮಾತುಗಳು ದೇವಸ್ಥಾನದ ಭಕ್ತರದ್ದಾಗಿದೆ. ಇಂಥ ಕೌತುಕವನ್ನ ನೀವು ಒಮ್ಮೆ ಈ ದೇವಸ್ಥಾನಕ್ಕೆ ಹೋಗಿ ಕಣ್ಣುತುಂಬಿಕೊಂಡು ಶಿವನ ಕೃಪೆಗೆ ಪಾತ್ರರಾಗಲಿ ಎನ್ನುವದು ನಮ್ಮ ಆಶಯ ಕೂಡ

Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ