ನೀರಿಗಾಗಿ ಮಜಗಾವ ದಲ್ಲಿ ಪ್ರತಿಭಟನೆ
ಬೆಳಗಾವಿ ನಗರದ ಮಜಗಾವಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಅಲ್ಲಿಯ ನಿವಾಸಿಗಳು ಇಂದು ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ಮಾಡಿದರು.
ಕಳೆದ ಮೂರು ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ನಿರೀಕ್ಷಿಗೂ ಮೀರಿ ಮಳೆಯಾಗಿದ್ದರ ಪರಿಣಾಮವಾಗಿ ಜಿಲ್ಲೆಯ ಘಟಪ್ರಭಾ ಮಲಪ್ರಭಾ ಹಾಗೂ ರಕ್ಕಸಕೊಪ್ಪ ಜಲಾಶಯಗಳಲ್ಲಿ ಸಾಕಷ್ಟು ನೀರಿನ ಸಂಗ್ರಹವಿದ್ದರೂ ನಗರದ ಅನೇಕ ಬಡಾವಣೆಯಲ್ಲಿ ಕಳೆದ 10 ದಿನಗಳಿಂದ ನೀರು ಪೂರೈಕೆಯಾಗಿಲ್ಲ. ಬೇಸಿಗೆ ಆರಂಭವಾಗಿದ್ದು, ನೀರು ಸಿಗದಿರುವುದಕ್ಕೆ ಜನರು ಕಂಗಾಲಾಗಿದ್ದಾರೆ. ಮಹಾನಗರ ಪಾಲಿಕೆಯಿಂದ ಟ್ಯಾಂಕರ್ ಮೂಲಕ ಕೆಲವು ಕಡೆ ನೀರು ಪೂರೈಕೆ ಮಾಡಲಾಗುತ್ತಿದೆ. ಈಗಲೂ ಹೀಗಾದರೆ ಬೇಸಿಗೆಯಲ್ಲಿ ಹೇಗೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ
ನಗರಕ್ಕೆ ರಾಕಸಕೊಪ್ಪ, ಹಿಡಕಲ್ ಜಲಾಶಯದಿಂದ ನೀರು ಪೂರೈಕೆ ಆಗುತ್ತದೆ. ಎರಡೂ ಜಲಾಶಯಗಳಲ್ಲಿ ಸಾಕಷ್ಟು ನೀರಿನ ಸಂಗ್ರಹವಿದೆ. ಹೀಗಿದ್ದರೂ ಜನರಿಗೆ ಕುಡಿಯುವ ನೀರಿಗಾಗಿ ಹಾಹಾಕಾರ ಎದುರಾಗಿದೆ. ನೀರಿನ ಟ್ಯಾಂಕರ್‌ಗಳು ಬಡಾವಣೆಗಳಿಗೆ ಬರುತ್ತಿದ್ದಂತೆ ಜನರು ತಳ್ಳಾಡಿಕೊಂಡು ನೀರು ಸಂಗ್ರಹಿಸುತ್ತಿದ್ದಾರೆ.
ನೀರಿಗಾಗಿ ಜನರು ವಾಗ್ವಾದ ಮಾಡುತ್ತಿದ್ದಾರೆ. ಕಳೆದ ಡಿಸೆಂಬರ್ ತಿಂಗಳಿನಿಂದ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು ಪೈಪ್ ಲೈನ್ ದುರಸ್ತಿ ಕಾರ್ಯ ನಡೆಯುತ್ತಿದೆ ಎಂದು ಹೇಳುತ್ತಲೇ ಬರುತ್ತಿದ್ದಾರೆ ಕಾರ್ಪೊರೇಟರ್ನ್ ಕೇಳಿದರೆ ಟ್ಯಾಂಕರ್ ಕಳಿಸುತ್ತಿದ್ದಾರೆ ಕುಡಿಯುವ ನೀರಿಗಾದರೆ ಬಳಕೆಗೆ ಏನು ಮಾಡುವುದೆಂದು ಮಹಿಳೆಯರು ಪ್ರಶ್ನಿಸಿದರು
ಇದೇ ಪರಿಸ್ಥಿತಿ ಮುಂದುವರೆಯುವುದಾದರೆ ನಮ್ಮನ್ನು ಪಾಲಿಕೆಯಿಂದ ಬಿಡುಗಡೆಗೊಳಿಸಿ ಗ್ರಾಮ ಪಂಚಾಯಿತಿಯನ್ನಾಗಿ ಪರಿವರ್ತಿಸಿ ಎಂದು ಸ್ಥಳೀಯ ನಿವಾಸಿ ಒಬ್ಬರು ಅಗ್ರಹಿಸಿದರು
ಕೂಡಲೇ ಮಜಗಾವಿಗೆ ಕುಡಿಯುವ ನೀರನ್ನು ಜಿಲ್ಲಾಡಳಿತ ಪೂರೈಕೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ವರಿಸಿದರು
Laxmi News 24×7