Breaking News

ಗ್ರಾಹಕರ ದೂರುಗಳನ್ನು ಪರಿಹರಿಸಲು ನೇಮಕಗೊಂಡ ಜಿಲ್ಲಾ ಪ್ರತಿನಿಧಿಗಳ ಸನ್ಮಾನ

Spread the love

ಗ್ರಾಹಕರ ದೂರುಗಳನ್ನು ಪರಿಹರಿಸಲು ನೇಮಕಗೊಂಡ ಜಿಲ್ಲಾ ಪ್ರತಿನಿಧಿಗಳ ಸನ್ಮಾನ
ಬೆಳಗಾವಿಯಲ್ಲಿ ಗ್ರಾಹಕರ ದೂರುಗಳನ್ನು ತ್ವರಿತವಾಗಿ ಪರಿಹರಿಸಲು ಕರ್ನಾಟಕ ರಾಜ್ಯ ಗ್ರಾಹಕ ಕುಂದುಕೊರತೆ ನಿವಾರಣಾ ಆಯೋಗದ ಶಾಶ್ವತ ಸಂಚಾರಿ ನ್ಯಾಯಾಲಯವನ್ನು ಆರಂಭಿಸಲಾಗಿದ್ದು, ಗ್ರಾಹಕರ ದೂರುಗಳನ್ನು ಪರಿಹರಿಸಲು ನೇಮಕಗೊಂಡ ಜಿಲ್ಲಾ ಪ್ರತಿನಿಧಿ ಮತ್ತು ಸದಸ್ಯರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ವತಿಯಿಂದ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಗ್ರಾಹಕರ ದೂರುಗಳನ್ನು ತ್ವರಿತವಾಗಿ ಪರಿಹರಿಸಲು ಕರ್ನಾಟಕ ರಾಜ್ಯ ಗ್ರಾಹಕ ಕುಂದುಕೊರತೆ ನಿವಾರಣಾ ಆಯೋಗದ ಶಾಶ್ವತ ಸಂಚಾರಿ ನ್ಯಾಯಾಲಯವನ್ನು ಬೆಳಗಾವಿ ಜಿಲ್ಲೆಯಲ್ಲಿ ಉದ್ಘಾಟಿಸಲಾಗಿದ್ದು, ಪ್ರತಿನಿಧಿಯಾಗಿ ರವಿಶಂಕರ್ ಹಾಗೂ ಸದಸ್ಯರಾದ ಸುನೀತಾ ಬಾಗೇವಾಡಿ ಮತ್ತು ಮಲ್ಲಿಕಾರ್ಜುನ ಕಾಮತಗಿ ಅವರನ್ನು ನೇಮಿಸಲಾಗಿದೆ. ಇವರನ್ನು ಕರ್ನಾಟಕ ದಲಿತ ಸಂಘರ್ಷ ಅಂಬೇಡ್ಕರ್ ವಾದದ ವತಿಯಿಂದ ಸಮಿತಿಯ ರಾಜ್ಯಾಧ್ಯಕ್ಷ ಸಿದ್ದಪ್ಪ ಕಾಂಬಳೆ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಕೀಲರಾದ ಚನ್ನಪ್ಪ ಬಾಗೇವಾಡಿ, ಭಾವು ಗಡಕರಿ, ಜನಾಬಾ ಕಾಂಬಳೆ, ಮಹಾಂತೇಶ್ ತಳವಾರ, ದೀಪಕ್ ದಬಡೆ, ತುಕಾರಾಮ್ ಕಾಂಬಳೆ, ಸಂತೋಷ್ ತಳವಾರ್ ಇನ್ನುಳಿದವರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ