Breaking News

ಪತ್ನಿ ಹಾಗೂ ಆಕೆಯ ತಾಯಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ:ಅಳಿಯನ ಬಂಧನ

Spread the love

ಬೆಂಗಳೂರು : ಪತ್ನಿ ಹಾಗೂ ಆಕೆಯ ತಾಯಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಆರೋಪಿಯನ್ನ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಸೀಫ್ ಬಂಧಿತ ಆರೋಪಿ. ತವರು ಮನೆ ಸೇರಿದ್ದ ಪತ್ನಿ ಹೀನಾ‌ ಕೌಸರ್‌ ಹುಡುಕಿಕೊಂಡು ಜನವರಿ 14ರಂದು ಸರಬಂಡೆಪಾಳ್ಯದಲ್ಲಿರುವ ಮನೆಗೆ ಬಂದಿದ್ದ ಆರೋಪಿ, ಪತ್ನಿ ಹಾಗೂ ಅತ್ತೆ ಪರ್ವೀನ್ ತಾಜ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.ಈ ಬಗ್ಗೆ ಪರ್ವೀನ್ ತಾಜ್ ಮಾತನಾಡಿ, ”ಹತ್ತು ವರ್ಷಗಳ ಹಿಂದೆ ಮಗಳು ಹೀನಾ ಕೌಸರ್‌ ಹಾಗೂ ಆಸೀಫ್​ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ, ಅವನು ಪರಸ್ತ್ರಿಯೊಂದಿಗೆ ಸಂಬಂಧ ಹೊಂದಿದ್ದ. ಅಲ್ಲದೇ, ನಮ್ಮ ಮಗಳು ಬೇರೆಯವರಿಗೆ ಮೆಸೇಜ್ ಮಾಡಿದ್ದನ್ನ ಕಂಡು ಅನುಮಾನಿಸಿ ಅವಳ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ 8 ತಿಂಗಳ ಹಿಂದೆ ಮನೆಗೆ ತಂದು ಬಿಟ್ಟುಹೋಗಿದ್ದ. ಇದಾದ ನಂತರ ನಮ್ಮ ಮೇಲೆ ಮೂರು ಬಾರಿ ಅಕ್ಯಾಟ್​ ಮಾಡಿದ್ದ” ಎಂದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ