Breaking News

ಬೆಂಗಳೂರಿನ ಟೆಕ್ಕಿಗೆ ಮೊಬೈಲ್ ಫೋನ್ ಗಿಫ್ಟ್ ಕಳುಹಿಸಿ ₹2.8 ಕೋಟಿ ವಂಚನೆ

Spread the love

ಬೆಂಗಳೂರು: ಅಪರಿಚಿತರಿಂದ ಗಿಫ್ಟ್ ಹೆಸರಿನಲ್ಲಿ ಮೊಬೈಲ್ ಫೋನ್‌, ಟ್ಯಾಬ್ ನಿಮ್ಮ ಮನೆ ಬಾಗಿಲಿಗೆ ಬಂದರೆ ಅವುಗಳನ್ನ ಬಳಸುವ ಮುನ್ನ ಎಚ್ಚರವಿರಲಿ. ಇದು ಸೈಬರ್ ವಂಚಕರ ಹೊಸ ವರಸೆಯೂ ಆಗಿರಬಹುದು. ಕ್ರೆಡಿಟ್ ಕಾರ್ಡ್ ಮಂಜೂರಾಗಿದೆ ಎಂದು ನಂಬಿಸಿದ ಸೈಬರ್ ವಂಚಕರು ಮೊಬೈಲ್ ಗಿಫ್ಟ್​ ಕಳುಹಿಸಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರ ಖಾತೆಯಿಂದ ₹2.8 ಕೋಟಿ ರೂ ದೋಚಿರುವ ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿದೆ. ಖಾಸಗಿ ಬ್ಯಾಂಕ್ ಪ್ರತಿನಿಧಿಗಳ ಹೆಸರಿನಲ್ಲಿ ತಾವೇ ಮೊಬೈಲ್ ಫೋನ್ ಕಥ ಕಳುಹಿಸಿ ವಂಚಿಸಿರುವ ಖದೀಮರ ವಿರುದ್ಧ ವೈಟ್ ಫೀಲ್ಡ್ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Cyber ​​Crime Police Station

ದೂರುದಾರ ವ್ಯಕ್ತಿಗೆ ನವೆಂಬರ್ ತಿಂಗಳಲ್ಲಿ ಕರೆ ಮಾಡಿದ್ದ ವಂಚಕರು, ನಿಮ್ಮ ರಿವಾರ್ಡ್ ಪಾಯಿಂಟ್ಸ್ ಉತ್ತಮವಾಗಿರುವುದರಿಂದ ಕ್ರೆಡಿಟ್ ಕಾರ್ಡ್ ಆಫರ್ ಮಾಡುತ್ತಿದ್ದೇವೆ ಎಂದು ನಂಬಿಸಿದ್ದರು. ಬಳಿಕ ಹೊಸ ಸಿಮ್‌ ಕಾರ್ಡ್‌ ಒಂದನ್ನ ಖರೀದಿಸಿ ಅದರ ನಂಬರ್ ನೀಡುವಂತೆ ಕೇಳಿ ಪಡೆದುಕೊಂಡಿದ್ದರು. ಇದಾದ ಬಳಿಕ ಡಿಸೆಂಬರ್ ಮೊದಲ ವಾರದಲ್ಲಿ ದೂರುದಾರರ ವಿಳಾಸಕ್ಕೆ ತಾವೇ ಹೊಸ ಮೊಬೈಲ್ ಫೋನ್‌ವೊಂದನ್ನ ಕಳುಹಿಸಿದ್ದರು.ವಂಚಕರ ಕುರಿತು ಸುಳಿವಿರದ ದೂರುದಾರರು, ಹೊಸ ಮೊಬೈಲ್ ಫೋನ್‌ನಲ್ಲಿ ತಾವು ಖರೀದಿಸಿದ್ದ ಹೊಸ ಸಿಮ್ ಕಾರ್ಡ್ ಹಾಕಿ ಬಳಸಲಾರಂಭಿಸಿದ್ದಾರೆ. ಆದರೆ, ಹೊಸ ಸಿಮ್ ಕಾರ್ಡ್ ಆ್ಯಕ್ಟಿವೇಟ್ ಆಗುತ್ತಿದ್ದಂತೆ ವಂಚಿಸಲು ಅಗತ್ಯ ಇರುವಂತೆ ಕ್ಲೋನಿಂಗ್ ಮತ್ತು ಆ್ಯಪ್‌ಗಳನ್ನ ಇನ್‌ಸ್ಟಾಲ್ ಮಾಡಿಟ್ಟಿದ್ದ ವಂಚಕರು, ಬ್ಯಾಂಕ್‌ನಿಂದ ಯಾವುದೇ ಸಂದೇಶ ಅಥವಾ ಮೇಲ್ ಬಾರದಂತೆ ಮೊಬೈಲ್ ಫೋನ್‌ನಲ್ಲಿ ಸೆಟ್ ಮಾಡಿಟ್ಟಿದ್ದರು. ಒಂದು ವಾರದ ಬಳಿಕ ತಮ್ಮ ಎಫ್‌ಡಿ ಖಾತೆಯಲ್ಲಿ ಹಣ ಕಡಿತವಾಗಿರುವುದನ್ನ ಗಮನಿಸಿದ ದೂರುದಾರರು, ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಹಣ ವಂಚಕರ ಪಾಲಾಗಿರುವುದು ತಿಳಿದು ಬಂದಿದೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ