ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರು ಲಾಲಭಾಗನಲ್ಲಿ ಫಲ ಪುಷ್ಪ ಪ್ರದರ್ಶನ 1 ಗಣರಾಜ್ಯೋತ್ಸವ ಅಂಗವಾಗಿ ಫಲ ಪುಷ್ಪ ಪ್ರದರ್ಶನ.
2 ಸಿ ಎಂ ಸಿದ್ದರಾಮಯ್ಯ ರಿಂದ ಚಾಲನೆ.
3 ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಇಂದಿನಿಂದ ಆರಂಭ 4 …ಜನವರಿ 16 ರಿಂದ 27ರವರೆಗೆ ನಡೆಯುವ ಪ್ರದರ್ಶನ.
– ಗಣರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ವಿದ್ಯುಕ್ತ ಚಾಲನೆ ನೀಡಿದ್ದಾರೆ.
ಇಂದಿನಿಂದ ಅಂದರೆ ಜನವರಿ 16 ರಿಂದ 27 ರವರೆಗೆ ಒಟ್ಟು 12 ದಿನಗಳ ಕಾಲ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಪ್ರವೇಶದ್ವಾರದ ಬಳಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಹಿನ್ನಲೆಯಲ್ಲಿ ಆನ್‌ಲೈನ್ ಮೂಲಕ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ
. ಪ್ರವೇಶ ದ್ವಾರದ ಬಳಿ ಜನದಟ್ಟಣೆಯನ್ನು ಕಡಿಮೆ ಮಾಡುವ ಹಿನ್ನಲೆಯಲ್ಲಿ ತೋಟಗಾರಿಕಾ ಇಲಾಖೆಯು ವೆಬ್‌ಸೈಟ್‌ನಲ್ಲಿ ಕ್ಯೂ ಆರ್ ಕೋಡನ್ನುಪ್ರಕಟಿಸಿದೆ. ಸಾರ್ವಜನಿಕರು ಆದಷ್ಟು ಆನ್‌ಲೈನ್ ಟಿಕೆಟ್ ಪಡೆದು ಬರುವುದು ಉತ್ತಮ ಎಂದು ತೋಟಗಾರಿಕಾ ಇಲಾಖೆ ತಿಳಿಸಿದೆ.
ಇನ್ನು ಫಲ ಪುಷ್ಪ ಪ್ರದರ್ಶನಕ್ಕೆ ಬರುವ ಜನರಿಗೆ ಪ್ರವೇಶ ಟಿಕೆಟ್ ದರ ನಿಗದಿ ಮಾಡಿದ್ದು ಹಿರಿಯರಿಗೆ 80 ರಿಂದ 100 ರೂ, ಹಾಗೆ ಮಕ್ಕಳಿಗೆ 30 ರೂ. ನಿಗದಿಪಡಿಸಲಾಗಿದೆ. ಜೊತೆಗೆ ಶಾಲಾ ಸಮವಸ್ತ್ರ ತೊಟ್ಟು ಬರುವ ವಿಧ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗಿದೆ.
ಇನ್ನು ಫ್ಲವರ್ ಶೋಗೆ ಬರುವ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸುಗಮ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ರಸ್ತೆ ಬದಲಾವಣೆ ಕ್ರಮ ಕೈಗೊಂಡಿದ್ದಾರೆ.
Laxmi News 24×7