Breaking News

ನೋಟಿಸ್​ ಕೊಡುವ ಅಧಿಕಾರ ಅವರಿಗಿದೆ. ಕೊಟ್ಟಿದ್ದರೆ, ನೋಟಿಸ್​ಗೆ ನಾನು ಉತ್ತರ ಕೊಡುತ್ತೇನೆ. ನೋಟಿಸ್ ಕೊಟ್ಟ ಕೂಡಲೇ ದೊಡ್ಡ ಅನಾಹುತ ಏನೂ ಆಗುವುದಿಲ್ಲ.

Spread the love

ಬೆಂಗಳೂರು: ಕೆಪಿಸಿಸಿಯಿಂದ ನೋಟಿಸ್​ ಕೊಟ್ಟಾಕ್ಷಣ ಯಾವುದೇ ದೊಡ್ಡ ಅನಾಹುತ ಆಗುವುದಿಲ್ಲ. ಅದಕ್ಕೆ ಸ್ಪಷ್ಟ ಉತ್ತರವನ್ನು ಅಧ್ಯಕ್ಷರ ಮುಂದೆ ನೀಡಲಾಗುವುದು ಎಂದು ಸಚಿವ ಸತೀಶ್​ ಜಾರಕಿಹೊಳಿ ತಿಳಿಸಿದ್ದಾರೆ.

ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಮಾತನಾಡಿ ಅವರು, ನೋಟಿಸ್​ ಕೊಡುವ ಅಧಿಕಾರ ಅವರಿಗಿದೆ. ಕೊಟ್ಟಿದ್ದರೆ, ನೋಟಿಸ್​ಗೆ ನಾನು ಉತ್ತರ ಕೊಡುತ್ತೇನೆ. ನೋಟಿಸ್ ಕೊಟ್ಟ ಕೂಡಲೇ ದೊಡ್ಡ ಅನಾಹುತ ಏನೂ ಆಗುವುದಿಲ್ಲ. ಕೆಪಿಸಿಸಿ ಆಕಾಂಕ್ಷಿ ಎಂದು ನಾನು ಎಲ್ಲಿಯೂ ಹೇಳಿಲ್ಲ. ಈ ಕುರಿತು ವಿಡಿಯೋ ಕೂಡ ನಮ್ಮ ಬಳಿ ಇದೆ. ಆದರೆ, ನಿರೂಪಣೆ ಆಗಿದ್ದು ಬೇರೆ ಇದೆ. ಈಗಾಗಲೇ ಈ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದೇನೆ. ಈಗಾಗಲೇ ನನ್ನ ವರ್ಷನ್ ಅನ್ನು ಸ್ಪಷ್ಟವಾಗಿದೆ. ನನ್ನ ಹೇಳಿಕೆ ಯಾರಿಗೂ ನೋವಾಗುವುದಿಲ್ಲ. ವಿಪಕ್ಷ ಅಥವಾ ನಮ್ಮ ಪಕ್ಷದವರಿಗೂ ಅಷ್ಟೆ ನೋವಾಗುವುದಿಲ್ಲ ಎಂದರು.

ನಾನು ನಿನ್ನೆ ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಏನು ಮಾತನಾಡಿದ್ದು ಏನು ಎಂಬ ಕುರಿತು ಮಾಧ್ಯಮಗಳ ಮುಂದೆ ಸ್ಪಷ್ಟವಾಗಿದೆ. ಮಾಧ್ಯಮದವರು ಮುಂಜಾನೆ ನಮ್ಮನ್ನು ಹೀರೋ ಮಾಡುತ್ತಾರೆ. ಸಂಜೆಗೆ ವಿಲನ್​ ಮಾಡುತ್ತಾರೆ. ಈ ರೀತಿಯಾಗಿ ಆಗಬಾರದು. ಇದರಲ್ಲಿ ಮಾಧ್ಯಮಗಳದ್ದು ಜವಾಬ್ದಾರಿ ಇದೆ.ಹೈಕಮಾಂಡ್ ಭೇಟಿ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಪ್ರಶ್ನೆಗಳು ಒಬ್ಬರಿಂದ ಒಬ್ಬರಿಗೆ ಹೋದಾಗ ಅದು ಬೇರೆಯದೇ ತಿರುವು ಪಡೆಯುತ್ತದೆ. ಈ ರೀತಿಯ ಚರ್ಚೆಗಳಿಂದ ನನಗೂ ಹಾಗೂ ಪಕ್ಷಕ್ಕೂ ಎರಡಕ್ಕೂ ಹಾನಿಯಾಗಲಿದೆ ಎಂದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ