Breaking News

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಸಮಾಜ ವಿಧ್ರೋಹಿಗಳಿಗೆ ಶಕ್ತಿ ಬಂದಂತಾಗಿದೆ: ಜೋಶಿ‌ ಕಿಡಿ

Spread the love

ಹುಬ್ಬಳ್ಳಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಸಮಾಜ ವಿಧ್ರೋಹಿಗಳಿಗೆ ಶಕ್ತಿ ಬಂದಂತಾಗಿದೆ. ಅಧಿಕಾರಕ್ಕೆ ಬಂದಾಗೆಲ್ಲ ಪಿಎಫ್​ಐ, ಎಸ್​ಡಿಪಿಐ ಮೇಲಿನ ಕೇಸ್​ಗಳನ್ನ ಹಿಂಪಡೆದ ಹಿನ್ನೆಲೆ ಕೆಲವರಿಗೆ ಶಕ್ತಿ ಬಂದಿದೆ. ಹೀಗಾಗಿ ಹಸು ಕೆಚ್ಚಲು ಕೊಯ್ಯುವ ಮಟ್ಟಕ್ಕೆ ಬಂದಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ‌ಜೋಶಿ‌ ರಾಜ್ಯ ಕಾಂಗ್ರೆಸ್​ ವಿರುದ್ಧ ಕಿಡಿಕಾರಿದರು.

ನಗರದಲ್ಲಿಂದು ‌ಮಾತನಾಡಿದ‌ ಅವರು, ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕ್ರಿಮಿನಲ್​ಗಳಿಗೆ ಧೈರ್ಯ ಬಂದಿದೆ. ಏನಾದರೂ ಆದ್ರೆ ರಕ್ಷಿಸಿಸುತ್ತಾರೆ ಅನ್ನೋ ಧೈರ್ಯ ಹುಟ್ಟಿಕೊಂಡಿದೆ. ಪರಿಣಾಮ ಈ ರೀತಿಯ ಪ್ರಕರಣಗಳು ನಡೆಯುತ್ತಿವೆ. ಸರ್ಕಾರ ಗಟ್ಟಿಯಾಗಿದ್ರೆ, ಈ ರೀತಿಯ ಘಟನೆಗಳು ನಡೆಯೋದಿಲ್ಲ. ಸರ್ಕಾರದ ಸಂಪೂರ್ಣ ವೈಫಲ್ಯ ಆಗಿದೆ. ಅಮಾಯಕ ಹಸುಗಳ ಮೇಲೆ ಈ ರೀತಿ ಮಾಡುತ್ತಿದ್ದಾರೆ. ಇದರ ಬಗ್ಗೆ ಹೋರಾಟ ಮಾಡಿದ್ರೆ ಇದು ರಾಜಕೀಯ ಪ್ರೇರಿತ ಅಂತ ಸಿಎಂ ಅಸಡ್ಡೆಯಿಂದ ಮಾತನಾಡುತ್ತಾರೆ. ಹೀಗಾದ್ರೆ ಜನರ ಬದುಕು ಹೇಗೆ ಅನ್ನೋದನ್ನ ವಿಚಾರ ಮಾಡಬೇಕು. ಎಲ್ಲಾ ಕ್ರಿಮಿನಲ್​ಗಳಿಗೆ ಕಾಂಗ್ರೆಸ್ ಸರ್ಕಾರ ಸ್ವರ್ಗ ಆಗಿದೆ ಎಂದು ಹೀಗಳೆದರು.

ಕುಡಿದು ಏನ್​ ಬೇಕಾದರೂ ಮಾಡಬಹುದಾ?: ಕುಡಿದ ಮತ್ತಿನಲ್ಲಿ ಹಸುವಿನ ಕೆಚ್ಚಲು ಕೊಯ್ದಿದ್ದಾನೆ ಎಂದು ಯಾರೋ ಹೇಳುತ್ತಿದ್ದಾರೆ. ಹಾಗಾದ್ರೆ, ಕುಡಿದಾಗ ಏನು ಬೇಕಾದ್ರೂ ಮಾಡಬಹುದಾ? ಕುಡಿದ ಮತ್ತಿನಲ್ಲಿ ಅವರ ಮನೆಯವರನ್ನು ಕೊಲೆ ಮಾಡ್ತಾರಾ? ಯಾರು ಆ ರೀತಿ ಹೇಳಿದ್ದಾರಲ್ಲ, ಅವರ ಮನೆಯಲ್ಲೇ ಯಾರನ್ನಾದ್ರೂ ಕೊಲೆ ಮಾಡಿದ್ರೆ ಬಿಡ್ತಾರಾ? ಇದ್ದ ಹಸುಗಳನ್ನು ನರಳುವಂತೆ ಮಾಡಿ, ಹೊಸ ಹಸು ಕೊಡಿಸುವೆ ಅಂದ್ರೆ, ಜಮೀರ್​ಗೆ ಏನಾದ್ರೂ ಬುದ್ಧಿ ಇದೆಯಾ? ಎಂದು ಪ್ರಶ್ನಿಸಿದರು.

ಇಂಡಿಯಿಂದ ಕಾಂಗ್ರೆಸ್ ಹೊರ ಬಂದಿಲ್ಲ, ಇಂಡಿನೇ ಕಾಂಗ್ರೆಸ್ ಅನ್ನು ಹೊರ ಹಾಕಿದೆ. ಉಳಿದ ಇಂಡಿಗಳು ಕೂಡಿ ಇವರ ಕೈಯಲ್ಲಿ ಗಿಂಡಿ ಕೊಟ್ಟು ಕಳ್ಸಿವೆ‌. ಕಾಂಗ್ರೆಸ್ ಪಕ್ಷ ಭಾರ ಆಗಿದೆ ಎಂದು ಜೋಶಿ ವ್ಯಂಗ್ಯವಾಡಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ