Breaking News

ಪ್ರಧಾನಿ ಮೊದಿಯೊಂದಿಗೆ ನಡೆಯುವ ಸಂವಾಧದಲ್ಲಿ ಪಾಲ್ಗೊಳ್ಳಲು ತೆರಳಿದ ವಿಜಯಪುರದ ಯುವಕ, ಮನೆಯಲ್ಲಿ ಸಂಭ್ರಮಾಚರಣೆ

Spread the love

: ದೇಶದ ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಕಾಲ ದೆಹಲಿಯಲ್ಲಿ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಈ ಕಾರ್ಯಕ್ರಮ ದಲ್ಲಿ ಯುವಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಲಿದ್ದಾರೆ. ಈ ಸಂವಾದಕ್ಕೆ ಗುಮ್ಮಟ ನಗರಿಯ ಯುವಕ ಸೆಲೆಕ್ಟ್ ಆಗಿದ್ದು ಯುವಕನ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಹಾಗಾದರೆ ಅಲ್ಲಿ ನಡೆಯುವ ಕಾರ್ಯಕ್ರಮವಾದರೂ ಏನು ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್… ದೇಶದ ಪ್ರಧಾನಿ ನರೇಂದ್ರ ಮೋದಿ ಇದೇ ಜನವರಿ 10, 11, 12 ರಂದು ಮೂರು ದಿನಗಳ ಕಾಲ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮ ಅಂಗವಾಗಿ ವಿಕಸಿತ ಭಾರತ ಹಾಗೂ ಯುವಕರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. 2047 ಕ್ಕೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸಲು ವಿವಿಧ ಕ್ಷೇತ್ರದಲ್ಲಿ ಸಕ್ರೀಯವಾಗಿ ಸಾಧನೆ ಮಾಡಿದವರಿಂದ ಅವರೊಂದಿಗೆ ಸಂವಾದ ನಡೆಸುವರು. ಅದರಲಿ ಪ್ರಮುಖವಾಗಿ ಯುವಕರ ಪಾತ್ರ ಹೆಚ್ಚಾಗಿದ್ದು ಈ ವಿಚಾರವಾಗಿ ಯುವಕರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಎಂಪವರಿಂಗ್ ಯೂಥ್ ಫಾರ್ ವಿಕಸಿತ ಭಾರತ ವಿಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಂವಾದ ಏರ್ಪಡಿಸಲಾಗಿದೆ. ಈ ಸಂವಾಧಕ್ಕೆ ಗುಮ್ಮಟ ನಗರಿ ವಿಜಯಪುರದ ಯುವಕ ಕೂಡಾ ಸಿಲೆಕ್ಟ್ ಆಗಿದ್ದಾರೆ…
ಅಮೀನ್ ಸಾಬ್ ಹಳ್ಳೂರ, ಪ್ರಧಾನಿ ಮೋದಿ ಅವರ ಸಂವಾಧಕ್ಕೆ ಸೆಲೆಕ್ಟ ಆದ ಯುವಕನ ತಂದೆ…

. : ವಿಜಯಪುರ ನಗರದ ಯುವಕ ರಿಹಾನ್ ಮಲಿಕ್ ಹಳ್ಳೂರ ಎಂಬಾತ ಪ್ರಧಾನಿ ನರೇಂದ್ರ ಮೋದಿ ಅವರ ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ. ದೇಶದಲ್ಲಿ 30 ಲಕ್ಷ ವಿದ್ಯಾರ್ಥಿಗಳ ಪೈಕಿ ಕರ್ನಾಟಕದಲ್ಲಿ 3 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ನಾಲ್ಕು ಹಂತದ ಪರೀಕ್ಷೆಯಲ್ಲಿ ಪಾಸಾಗಿ ವಿಕಸಿತ ಭಾರತ ಹಾಗೂ ಯುವಕರೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ವಿಜಯಪುರದ ಯುವಕ ರಿಹಾನ್ ಮಲಿಕ್ ಹಳ್ಳೂರ ಆಯ್ಕೆಯಾಗಿದ್ದಾರೆ.‌ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಸಂವಾದ ನಡೆಸ್ತಿರೋದು ಪೋಷಕರಲ್ಲಿ ಇನ್ನಿಲ್ಲದ ಸಂತಸ ಮನೆ ಮಾಡಿದೆ. ಈ ಹಿನ್ನಲೆಯಲ್ಲಿ ರಿಹಾನ್ ಮಲಿಕ್ ಹಳ್ಳೂರ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು ಸಿಹಿ ತಿನ್ನಿಸಿ ದೆಹಲಿಗೆ ಮಗನನ್ನು ಕಳುಹಿಸಿಕೊಟ್ಟಿದ್ದಾರೆ ಪೋಷಕರು. ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಯಾಗಿದ್ದಾನೆ ರಿಹಾನ್ ಮಲಿಕ್ ಹಳ್ಳೂರ. ಇನ್ನೂ ಕರ್ನಾಟಕದ ರಾಜ್ಯದ 45 ವಿದ್ಯಾರ್ಥಿಗಳು ಈ ಸಂವಾಧಕ್ಕೆ ಆಯ್ಕೆಯಾದರೆ, ಉತ್ತರ ಕರ್ನಾಟಕ ಭಾಗದ ಏಕೈಕ ವಿದ್ಯಾರ್ಥಿ ರಿಹಾನ್ ಮಲಿಕ್ ಹಳ್ಳೂರ ಆಗಿದ್ದಾರೆ…

: ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಟ್ಟಿಗೆ ಸಂವಾಧದಲ್ಲಿ ಪಾಲ್ಗೊಳ್ಳುತ್ತಿರುವದು ಇದು ನನ್ನ ಜೀವನದ ದೊಡ್ಡ ಸಾಧನೆಯಾಗಿದೆ ಎನ್ನುತ್ತಾನೆ ರಿಹಾನ್ ಮಲಿಕ್. ಇನ್ನೂ 2047 ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ತಮ್ಮಲ್ಲಿರುವ ಐಡಿಯಾ ವನ್ನು ಪ್ರಧಾನಿಗಳ ಮುಂದೆ ಪ್ರಸ್ತುತ ಪಡಿಸಲಿ ಎಂಬುದೇ ನಮ್ಮ‌ ಆಶಯ…


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ