Breaking News

ಶಿವಮೊಗ್ಗ ಜಿಲ್ಲೆಯಲ್ಲಿ 2023ಕ್ಕಿಂತ 2024ರಲ್ಲಿ ಮದ್ಯ ಮಾರಾಟ ಕಡಿಮೆಯಾಗಿದೆ.

Spread the love

ಶಿವಮೊಗ್ಗ: ಜಿಲ್ಲೆಯಲ್ಲಿ ಮದ್ಯ ಮಾರಾಟ 2023ಕ್ಕೆ ಹೋಲಿಸಿದರೆ 2024ರಲ್ಲಿ ಕಡಿಮೆಯಾಗಿರುವುದನ್ನು ಜಿಲ್ಲಾ ಅಬಕಾರಿ ಇಲಾಖೆಯ ಅಂಕಿಅಂಶಗಳು ತಿಳಿಸುತ್ತವೆ.

2023ರಲ್ಲಿ ಡಿಸೆಂಬರ್‌ತನಕ 1,90,552 ಮದ್ಯದ ಬಾಕ್ಸ್​ಗಳು ಮಾರಾಟವಾಗಿದ್ದವು. 2024ರ ಡಿಸೆಂಬರ್‌ತನಕ 1,79,500 ಬಾಕ್ಸ್​ಗಳು ಮಾರಾಟವಾಗಿವೆ. ಒಂದು ವರ್ಷದ ಅವಧಿಯಲ್ಲಿ 11,052 ಬಾಕ್ಸ್‌ ಕಡಿಮೆ ಮಾರಾಟವಾಗಿದೆ. ಇದರೊಂದಿಗೆ ಇಲಾಖೆಯ ಆದಾಯವೂ ಕಡಿಮೆಯಾಗಿದೆ.

ಜಿಲ್ಲೆಯಲ್ಲಿ ಒಟ್ಟು 331 ಮದ್ಯದಂಗಡಿಗಳಿವೆ. ಇವುಗಳಲ್ಲಿ,

  • ಸಿಎಲ್ 7 – 65
  • ಬಾರ್​ಗಳು- 73
  • ಎಂಎಸ್ಐಎಲ್- 62
  • ಎಂಆರ್​ಪಿ- 131.

ರಾಜ್ಯದಲ್ಲಿ ಕಡಿಮೆ ಮದ್ಯ ಮಾರಾಟ ಮಾಡಿದ ಜಿಲ್ಲೆಗಳ ಪೈಕಿ ಶಿವಮೊಗ್ಗ ಟಾಪ್ 5ನೇ ಸ್ಥಾನದಲ್ಲಿದೆ.

ಜಿಲ್ಲಾ ಅಬಕಾರಿ ಜಂಟಿ ಆಯುಕ್ತ ಬಿ.ಕೆ.ಸುಮಿತಾ ಪ್ರತಿಕ್ರಿಯಿಸಿ, ”ಜಿಲ್ಲೆಯಲ್ಲಿ 2023ಕ್ಕೆ ಹೋಲಿಸಿದರೆ 2024ರಲ್ಲಿ 11 ಸಾವಿರ ಬಾಕ್ಸ್ ಮದ್ಯ ಮಾರಾಟ ಕಡಿಮೆಯಾಗಿದೆ. 2023ರಲ್ಲಿ 1.90 ಸಾವಿರ ಬಾಕ್ಸ್ ಮಾರಾಟವಾಗಿತ್ತು. 2024ರಲ್ಲಿ 1.79 ಸಾವಿರ ಬಾಕ್ಸ್ ಮಾರಾಟವಾಗಿದೆ” ಎಂದು ತಿಳಿಸಿದರು.

”ಹೊಸ ವರ್ಷ ಈ ಬಾರಿ ಮಂಗಳವಾರ ಬಂದಿದೆ. ಇದು ಕೆಲಸ ನಿರ್ವಹಿಸುವ ದಿನ. ಅಲ್ಲದೇ ಬುಧವಾರವೂ ಸಹ ಕೆಲಸದ ದಿನವಾಗಿತ್ತು. ಕಳೆದ ಬಾರಿ ಶಿವಮೊಗ್ಗ ನಗರದ ಎಲ್ಲಾ ಕ್ಲಬ್​ಗಳಲ್ಲಿ ಹೊಸ ವರ್ಷಾಚರಣೆ ಜೋರಾಗಿತ್ತು. ಕ್ಲಬ್ ಸದಸ್ಯರಿಗೆ ಹಾಗೂ ಅತಿಥಿಗಳಿಗೂ ಅವಕಾಶ ನೀಡಲಾಗಿತ್ತು. ಈ ಬಾರಿ ಕೇವಲ ಒಂದು ಕ್ಲಬ್​ನಲ್ಲಿ ಮಾತ್ರ ಹೊಸ ವರ್ಷಾಚರಣೆ ನಡೆಸಲಾಗಿರುವುದು ಮದ್ಯ ಮಾರಾಟ ಇಳಿಯಲು ಇತರೆ ಕಾರಣಗಳು” ಎಂದು ಅವರು ಹೇಳಿದರು.

”ಕಳೆದ ವರ್ಷ ನಾಲ್ಕು ಬ್ರ್ಯಾಂಡ್‌​ಗಳ ದರ ಏರಿಕೆ ಆಗುತ್ತದೆ ಎಂದು ಹೇಳಲಾಗಿತ್ತು. ಇದರಿಂದಾಗಿ ಹೆಚ್ಚು ಖರೀದಿಯಾಗಿತ್ತು. ಡಿಸೆಂಬರ್​ನಲ್ಲಿ ಕ್ರಿಸ್ಮಸ್ ಜೊತೆಗೆ ಹೊಸ ವರ್ಷ ಬರುವ ಕಾರಣಗಳಿಂದಾಗಿ ಮದ್ಯ ಹೆಚ್ಚು ಮಾರಾಟ ಆಗುತ್ತದೆ. ಕಳೆದ ವರ್ಷ ವಾರಾಂತ್ಯದಲ್ಲಿ ಹೊಸ ವರ್ಷ ಬಂದಿದ್ದರಿಂದ ಮದ್ಯ ಜಾಸ್ತಿ ಮಾರಾಟವಾಗಿತ್ತು. ಆದರೆ ಈ ಬಾರಿ ಅದು ನಡೆದಿಲ್ಲ” ಎಂದರು.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ