Breaking News

ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಶೇ.15ರಷ್ಟು ಪ್ರಯಾಣ ದರ

Spread the love

ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಲ್ಲಿ ಶೇ.15ರಷ್ಟು ಪ್ರಯಾಣ ದರ ಪರಿಷ್ಕರಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಇಂದು ಮಧ್ಯರಾತ್ರಿಯಿಂದ ಶೇ 15ರಷ್ಟು ಟಿಕೆಟ್ ಏರಿಕೆಯ ಪರಿಷ್ಕೃತ ದರ ಅನ್ವಯವಾಗಲಿದೆ.

ಹೀಗಿದೆ ಬಸ್​​ ಪ್ರಯಾಣದ ದರ ಏರಿಕೆಯ ಪಟ್ಟಿ: ಈ ಸಂಬಂಧ ಕೆಎಸ್ಆರ್​ಟಿಸಿ ಎಕ್ಸ್‌ಪ್ರೆಸ್ ಬಸ್​ಗಳ ಹೊಸ ದರ ಪಟ್ಟಿ ಬಿಡುಗಡೆ ಮಾಡಿದೆ. ಹೊಸ ಟಿಕೆಟ್ ದರ ಪಟ್ಟಿಯಂತೆ

ಪರಿಷ್ಕೃತ ದರ ಪಟ್ಟಿ

ಪರಿಷ್ಕೃತ ದರ ಪಟ್ಟಿ (ETV Bharat)

  • ಬೆಂಗಳೂರಿನಿಂದ ತುಮಕೂರು ಪ್ರಯಾಣ ದರ 80 ನಿಂದ 91 ರೂ.ಗೆ ಏರಿಕೆಯಾಗಿದೆ.
  • ಬೆಂಗಳೂರು-ಮಂಡ್ಯಗೆ ಪ್ರಯಾಣ ದರ 116 ನಿಂದ 131 ರೂ.ಗೆ ಏರಿಕೆಯಾಗಿದೆ.
  • ಬೆಂಗಳೂರು-ಮಂಗಳೂರು ಟಿಕೆಟ್ ದರ 454 ರೂ.ಗೆ ಏರಿಕೆಯಾಗಿದೆ.
  • ಬೆಂಗಳೂರು-ಹಾಸನ ಟಿಕೆಟ್ ದರ 246 ರೂ.ಗೆ ಹೆಚ್ಚಳವಾಗಿದೆ.
  • ಬೆಂಗಳೂರು-ಮೈಸೂರು ಟಿಕೆಟ್ ದರ 162 ರೂ.ಗೆ ಹೆಚ್ಚಳವಾಗಿದೆ.
  1. ಬೆಂಗಳೂರು – ಬೆಳಗಾವಿ ಟಿಕೆಟ್ ದರ 697 ರೂ.ಗೆ ಏರಿಕೆಯಾಗಿದೆ.
  2. ಬೆಂಗಳೂರು – ಹುಬ್ಬಳ್ಳಿಟಿಕೆಟ್ ದರ 563 ರೂ.ಗೆ ಏರಿಕೆಯಾಗಿದೆ.
  3. ಬೆಂಗಳೂರು-ಹಾವೇರಿಟಿಕೆಟ್ ದರ 474 ರೂ.ಗೆ ಹೆಚ್ಚಳವಾಗಿದೆ.
  4. ಬೆಂಗಳೂರು-ಕಲಬುರಗಿಟಿಕೆಟ್ ದರ 805 ರೂ.ಗೆ ಹೆಚ್ಚಳವಾಗಿದೆ.
  5. ಬೆಂಗಳೂರು-ಶಿವಮೊಗ್ಗಟಿಕೆಟ್ ದರ 356 ರೂ.ಗೆ ಏರಿಕೆಯಾಗಿದೆ.
  6. ಬೆಂಗಳೂರು-ಬಳ್ಳಾರಿಟಿಕೆಟ್ ದರ 424 ರೂ.ಗೆ ಏರಿಕೆಯಾಗಿದೆ.

Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ