Breaking News

ಮೋಜು ಮಸ್ತಿಗೆ ಹೆಸರಾಗಿದ್ದ ಗೋವಾ ಈಗ ಖಾಲಿ ಖಾಲಿ

Spread the love

GOA : ಮೋಜು ಮಸ್ತಿಗೆ ಹೆಸರಾಗಿದ್ದ ಗೋವಾ ಈಗ ಖಾಲಿ ಖಾಲಿ – ಅಧಿಕ ದರ & ಅವ್ಯವಸ್ಥೆಗೆ ಬೇಸತ್ತ ಪ್ರವಾಸಿಗರು

..ಗೊ..ಗೋವಾ ಅಂದ್ರೆ ಅದೊಂಥರ ಜೋಶ್. ಸಾಮ್ನಯ ಸಂಧರ್ಬಗಳಲ್ಲೇ ಗಿಜಿಗುಡುವ ಗೋವಾ, ಹೊಸ ವರ್ಷದ ಸೆಲೆಬ್ರೇಶನ್ ಸಂದರ್ಭದಲ್ಲಿ ಖಾಲಿ ಖಾಲಿಯಾಗಿದೆ ಅಂದ್ರೆ ನೀವು ನಂಬುತ್ತೀರ..?

ಹೀಗೆ ಕೆಲವು ವರ್ಷಗಳ ಹಿಂದೆ ನ್ಯೂ ಇಯರ್ ಅಂದ್ರೆ, ಗೋವಾ ಗೆ ಕಾಲಿಡಲು ಕಷ್ಟ ಎಂಬ ಪರಿಸ್ಥಿತಿ ಇರುತ್ತಿತ್ತು.
ಅಷ್ಟರಮಟ್ಟಿಗೆ ಜನ ಕಿಕ್ಕಿರಿದು ಸೇರುತ್ತಿದ್ದರು.ಪ್ರವಾಸಿಗರು ಮಲಗಲು ರೂಮ್ ಗಳು ಸಿಗದೆ ರಸ್ತೆಯಲ್ಲಿ ಮಲಗುತ್ತಿದ್ದರು. ಇಂಥ ಗೋವಾ ಈ ಬಾರಿ ಖಾಲಿ ಖಾಲಿ.

ಇದಕ್ಕೆ ಕಾರಣ ಗೋವಾ ಸರ್ಕಾರ ಮಾಡಿರುವ ಯಡವಟ್ಟುಗಳು. ದೇಶ ವಿದೇಶಗಳಿಂದ ಬರುವ ಗ್ರಾಹಕರನ್ನು, ಪ್ರವಾಸಿಗರನ್ನು ಸರಿಯಾಗಿ ನಡೆಸಿಕೊಳ್ಳದೆ, ಭಿಕ್ಷುಕರಂತೆ ನಡೆಸಿಕೊಂಡ ಪರಿಣಾಮ ಅಲ್ಲಿನ ಪ್ರವಾಸೋದ್ಯಮ ಹಾಳಾಗಿದೆ ಎಂದು ಪ್ರವಾಸಿಗರು ಜರಿಯುತ್ತಿದ್ದಾರೆ.

ಇತ್ತೀಚೆಗೆ ಗೋವಾದಲ್ಲಿ ಮಿತಿಮೀರಿದ ಶುಲ್ಕ, ಕಳಪೆ ಸೇವೆಯನ್ನು ನೀಡಿ, ಸೊಕ್ಕಿನ ಪ್ರದರ್ಶನ, ಅನೈರ್ಮಲ್ಯ ಮತ್ತು ಕೊಳಕು ಬೀದಿಗಳು ಪ್ರವಾಸಿಗರಿಗೆ ಗೋವಾ ಮೇಲೆ ಬೇಸರ ಹುಟ್ಟಿಸಿದೆ. ಹೀಗಾಗಿ ಜನ ಗೋವಾ ಮೇಲೆ ಆಸಕ್ತಿ ಕಳೆದುಕೊಂಡಿದ್ದಾರೆ.

ಗೋವಾ ಬದಲು ನೀವು ಥೈಲ್ಯಾಂಡ್‌ಗೆ ಹೋದರೆ ಅವರು ನಮ್ಮನ್ನು ರಾಜ ಮತ್ತು ರಾಣಿಯಂತೆ ನೋಡಿಕೊಳ್ಳುತ್ತಾರೆ ಎಂಬುದು ಪ್ರವಾಸಿಗರ ಅಭಿಪ್ರಾಯ .

ಅಲ್ಲಿ ಹೋಟೆಲ್,ಆಹಾರ,ಸಾರಿಗೆ ಶಾಪಿಂಗ್ ಎಲ್ಲವೂ ಭಾರತದ ಯಾವುದೇ ಮೆಟ್ರೋ ನಗರದಲ್ಲಿನ ಬೆಲೆಗಳಿಗಿಂತ ಅಗ್ಗವಾಗಿದೆ ಮತ್ತು ಗೋವಾಕ್ಕಿಂತ ಕಡಿಮೆಯಾಗಿದೆ.
ಈ ಎಲ್ಲಾ ಕಾರಣಗಳಿಂದ ಜನ ಗೋವಾ ಬಿಟ್ಟು ಬೇರೆ ಆಯ್ಕೆಗಳ ಕಡೆ ಮುಖ ಮಾಡುತ್ತಿದ್ದು, ಇನ್ನಾದ್ರೂ ಗೋವಾ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ