Breaking News

ಅಲ್ಲು ಅರ್ಜುನ್ ಪರ ವಾದ ಮಂಡಿಸಿದ ನಿರಂಜನ್ ರೆಡ್ಡಿ ಪಡೆಯೋ ಸಂಭಾವನೆ ಇಷ್ಟೊಂದಾ?

Spread the love

ಅಲ್ಲು ಅರ್ಜುನ್ ಅವರು ಒಂದೇ ದಿನದಲ್ಲಿ ಎಲ್ಲವನ್ನೂ ನೋಡಿ ಬಂದರು. ‘ಪುಷ್ಪ 2’ ಯಶಸ್ಸಿನಲ್ಲಿದ್ದ ಅವರು ನಾನಾ ಕಡೆಗಳಿಗೆ ತೆರಳಿ ಸಕ್ಸಸ್ ಮೀಟ್​ನಲ್ಲಿ ಭಾಗಿ ಆಗುತ್ತಿದ್ದಾರೆ. ಹೀಗಿರುವಾಗಲೇ ಡಿಸೆಂಬರ್ 4ರಂದು ಹೈದರಾಬಾದ್​ನ ಸಂಧ್ಯಾ ಥಿಯೇಟರ್​ನಲ್ಲಿ ನಡೆದ ಕಾಲ್ತುಳಿತ ಘಟನೆಗೆ ಸಂಬಂಧಿಸಿ ಅವರು ಡಿಸೆಂಬರ್ 13ರಂದು ಬಂಧನಕ್ಕೆ ಒಳಗಾಗಿ, ಇಂದು (ಡಿಸೆಂಬರ್ 15) ಬಿಡುಗಡೆ ಹೊಂದಿದ್ದಾರೆ. ತೆಲಂಗಾಣ ಹೈಕೋರ್ಟ್ ಅಲ್ಲು ಅರ್ಜುನ್​ಗೆ ಮಧ್ಯಂತರ ಜಾಮೀನು ನೀಡಿದೆ. ರಾತ್ರಿ ಇಡೀ ಜೈಲಿನಲ್ಲೇ ಇದ್ದ ಅಲ್ಲು ಅರ್ಜುನ್ ಅವರು ಇಂದು ಬಿಡುಗಡೆ ಹೊಂದಿದ್ದಾರೆ. ಅವರ ಪರ ವಕೀಲರು ಇಟ್ಟ ಮುಖ್ಯವಾದ ಪಾಯಿಂಟ್​ಗಳನ್ನು ಕೋರ್ಟ್ ಪರಿಗಣಿಸಿದೆ. ಹಾಗಾದರೆ ಆ ವಕೀಲರ ಹೆಸರು ಏನು? ಅವರು ಚಾರ್ಜ್ ಮಾಡೋದು ಎಷ್ಟು ಎಂಬ ಬಗ್ಗೆ ಇಲ್ಲಿದೆ ವಿವರ.

ಅಲ್ಲು ಅರ್ಜುನ್ ಪರ ವಾದ ಮಾಡಿದವರು ನಿರಂಜನ್ ರೆಡ್ಡಿ. ಅವರು ವೈಎಸ್ ಜಗನ್ ಮೋಹನ ರೆಡ್ಡಿ ಅವರಿಗೆ ಸಂಬಂಧಿಸಿದ ಕೇಸ್​ಗಳನ್ನು ಹ್ಯಾಂಡಲ್ ಮಾಡುತ್ತಾರೆ. ಅವರು ಅಲ್ಲು ಅರ್ಜುನ್ ಪರ ವಾದ ಮಂಡಿಸಿದರು. ನಾಂಪಲ್ಲಿ ಕೋರ್ಟ್ ಅಲ್ಲು ಅರ್ಜುನ್​ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿತ್ತು. ಅವರು ಇದನ್ನು ಅವರು ತೆಲಂಗಾಣ ಹೈಕೋರ್ಟ್​ನಲ್ಲಿ ಪ್ರಶ್ನೆ ಮಾಡಿದ್ದಾರೆ. ಅವರು ಕೆಲವು ಪ್ರಮುಖ ವಿಚಾರಗಳನ್ನು ಎತ್ತಿ ಹಿಡಿದರು.

‘ಜನರನ್ನು ನಿಯಂತ್ರಣ ಮಾಡಬೇಕಿದ್ದ ಪೊಲೀಸರು ಅಲ್ಲು ಅರ್ಜುನ್ ಅವರನ್ನು ನೋಡುತ್ತಾ ನಿಂತಿದ್ದರು. ವಿದೇಶದಲ್ಲಿ ಕ್ರಿಕೆಟ್ ನಡೆಯುವಾಗ ಪೊಲೀಸರು ಅಲ್ಲಿ ಬಂದ ಪ್ರೇಕ್ಷಕರ ಮೇಲೆ ಕಣ್ಣಿಡುತ್ತಾರೆ. ಆದರೆ, ಭಾರತದಲ್ಲಿ ಕ್ರಿಕೆಟ್ ನಡೆದರೆ ಪೊಲೀಸರು ಕ್ರಿಕೆಟರ್​​ಗಳು ಹಾಗೂ ಕ್ರಿಕೆಟ್ ನೋಡುತ್ತಾ ನಿಂತಿರುತ್ತಾರೆ’ ಎಂದು ವಾದ ಮಂಡಿಸಿದರು. ಈ ರೀತಿಯ ಹಲವು ವಿಚಾರವನ್ನು ಅವರು ಮುಂದಿಟ್ಟಿದ್ದಾರೆ.ಕೆಲವು ವರದಿಗಳ ಪ್ರಕಾರ ನಿರಂಜನ್ ರೆಡ್ಡಿ ಅವರು ಒಂದು ಬಾರಿ ಕೋರ್ಟ್​ಗೆ ಆಗಮಿಸಿದರೆ ಬರೋಬ್ಬರಿ 5-10 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಾರಂತೆ. ‘ಇಷ್ಟು ದೊಡ್ಡ ಮೊತ್ತದ ಹಣ ನೀಡುವುದರಲ್ಲಿ ಅರ್ಥ ಇದೆ’ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ