Breaking News

ಮುಗಿಯದ ಇ-ಖಾತಾ ಸಂಕಷ್ಟ, ಸರ್ವರ್​ ಸಮಸ್ಯೆ,

Spread the love

ಡಿಸೆಂಬರ್​ 13: ರಾಜಧಾನಿ ಬೆಂಗಳೂರಲ್ಲಿ (Bengaluru) ಆಸ್ತಿ ಮಾರಾಟ, ಖರೀದಿ ಸೇರಿದಂತೆ ಇತರೆ ಕೆಲಸಗಳಿಗೆ ಇ-ಖಾತಾ (E-Khata) ಕಡ್ಡಾಯಗೊಳಿಸಲಾಗಿದೆ.

ಇತ್ತ, ಇ-ಖಾತಾ ಪಡೆಯೋಕೆ ಪ್ರತಿ ವಾರ್ಡ್​ನ ಬಿಬಿಎಂಪಿ ಕಚೇರಿಗಳಲ್ಲಿ ಅವಕಾಶ ಕಲ್ಪಿಸಿದ್ದರೂ, ಬೆಂಗಳರು ಒನ್ ಕೇಂದ್ರಗಳಲ್ಲಿ ಇ-ಖಾತಾ ಪಡೆಯಲು ಅವಕಾಶ ನೀಡಿದ್ದರೂ ಜನರಿಗೆ ಮಾತ್ರ ಸಮಸ್ಯೆ ತಪ್ಪದಂತಾಗಿದೆ.

 

ಬೆಂಗಳೂರು: ಮುಗಿಯದ ಇ-ಖಾತಾ ಸಂಕಷ್ಟ, ಸರ್ವರ್​ ಸಮಸ್ಯೆ, ಅಧಿಕಾರಿಗಳ ನಡೆಯಿಂದ ಜನ ಕಂಗಾಲು

ದಾಖಲೆಗಳು ಸರಿಯಿದ್ದರೆ ಸರ್ವರ್ ಇರಲ್ಲ, ಸರ್ವರ್ ಸರಿಯಿದ್ದರೆ ದಾಖಲೆ ಇಲ್ಲ ಎಂಬ ಸಂದಿಗ್ದ ಪರಿಸ್ಥಿತಿಗೆ ಸಿಲುಕಿರುವ ಜನರು ಇ-ಖಾತಾ ಪಡೆಯೋಕೆ ಪರದಾಡುತ್ತಿದ್ದಾರೆ.ಸದ್ಯ ಕೃಷಿಭೂಮಿಯಿಂದ ಪರಿವರ್ತನೆಯಾದ ಜಾಗಗಳು, ಬಿಡಿಎ ಸ್ವಾಧೀನ ಬಳಿಕ ಕೈಬಿಟ್ಟ ಜಾಗಗಳು, ಎ ಖಾತಾ, ಬಿ ಖಾತಾ ಪಡೆಯುವಾಗ ಮ್ಯಾನುವಲ್ ಇದ್ದಿದ್ದರಿಂದ ಕೆಲ ದಾಖಲೆಗಳು ಇಲ್ಲದಿದ್ದರೂ ಖಾತಾ ಲಭ್ಯವಾಗಿದೆ. ಆದರೆ, ಇದೀಗ ಇ-ಖಾತಾ ಮಾಡಿಸಲು ಕೆಲ ದಾಖಲೆಗಳು ಸೂಕ್ತ ರೀತಿಯಲ್ಲಿ ಒದಗಿಸಲು ಆಗದಿರುವುದರಿಂದ ಜನರಿಗೆ ಸಂಕಷ್ಟವಾಗಿದೆ.

ಕಟ್ಟಡ ಮಂಜೂರು ನಕ್ಷೆ, ಕೂಡ ಹಲವು ಮಾಲೀಕರ ಬಳಿ ಇಲ್ಲದಿರುವುದು ಕೂಡ ಸಮಸ್ಯೆಗೆ ಕಾರಣವಾಗಿದೆ. ಇ-ಖಾತಾ ಪಡೆಯಲು ಇನ್ನೂ ಪರದಾಡವ ಸ್ಥಿತಿ ನಿರ್ಮಾಣವಾಗಿದೆ. ಇ-ಖಾತಾ ಪಡೆಯಲು ಹೋದರೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬರುತ್ತಿದ್ದು, ಇ-ಖಾತಾ ಸಮಸ್ಯೆಗಳನ್ನು ಬಗೆಹರಿಸದ ಪಾಲಿಕೆ ವಿರುದ್ಧ ಜನರು ಕಿಡಿಕಾರುತ್ತಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ