Breaking News

ರಸ್ತೆ ಡಿವೈಡರ್‌ ಮೇಲೆ ನಿಂತು ಯುವತಿಯ ಅಸಭ್ಯ ನೃತ್ಯ

Spread the love

ವಿಶೇಷವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಿತಿ ಮೀರಿ ವರ್ತಿಸುವುದು ಸರಿಯಲ್ಲ. ಈ ವಿಷಯ ಗೊತ್ತಿದ್ದರೂ ಕೂಡಾ ಕೆಲವೊಬ್ಬರು ಸಾರ್ವಜನಿಕ ಸ್ಥಳಗಳಲ್ಲಿ ಲಂಗು ಲಗಾಮಿಲ್ಲದೆ ಅಸಭ್ಯ ರೀತಿಯ ವರ್ತನೆಯನ್ನು ತೋರುತ್ತಿರುತ್ತಾರೆ.

ಇದಕ್ಕೆ ಉದಾಹರಣೆಯಂತಿರುವ ಸಾಕಷ್ಟು ಘಟನೆಗಳು ಈ ಹಿಂದೆಯೂ ಕೂಡಾ ನಡೆದಿವೆ. ಮೊನ್ನೆಯಷ್ಟೇ ರೂಪದರ್ಶಿಯೊಬ್ಬಳು ಬರೀ ಬಾತ್‌ ಟವೆಲ್‌ ಸುತ್ತಿ ಇಂಡಿಯಾ ಗೇಟ್‌ ಬಳಿ ಡ್ಯಾನ್ಸ್‌ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಳು. ಇದೀಗ ಇಂತಹದ್ದೇ ಮತ್ತೊಂದು ಘಟನೆ ನಡೆದಿದ್ದು,

ಓರ್ವ ಯುವತಿ ತುಂಡುಡುಗೆ ತೊಟ್ಟು ರಸ್ತೆ ಡಿವೈಡರ್‌ ಮೇಲೆ ನಿಂತು ಅಸಭ್ಯವಾಗಿ ನೃತ್ಯ ಮಾಡಿದ್ದಾಳೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ತೋರುವ ಇಂತಹ ಲಜ್ಜೆಗೆಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.ಅಕ್ಕಪಕ್ಕದ ರಸ್ತೆಯಲ್ಲಿ ನಿರಂತರವಾಗಿ ವಾಹನಗಳು ಸಂಚರಿಸುತ್ತಿದ್ದರೂ, ಇದಕ್ಕೆಲ್ಲಾ ಕ್ಯಾರೇ ಅನ್ನದೆ ಓರ್ವ ಯುವತಿ ತುಂಡುಡುಗೆ ತೊಟ್ಟು ರಸ್ತೆ ಡಿವೈಡರ್‌ ಮೇಲೆ ಮೈ ಚಳಿ ಬಿಟ್ಟು ಅಸಭ್ಯ ರೀತಿಯಲ್ಲಿ ಮುಜ್ರಾ ಡ್ಯಾನ್ಸ್‌ ಮಾಡಿದ್ದಾಳೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ