Breaking News

ವಯಸ್ಸಲ್ಲಿ ತಮಗಿಂತ ಹಿರಿಯ ನಟಿಯ ಜೊತೆ ಸೈಫ್ ಮಗ ಡೇಟಿಂಗ್

Spread the love

ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಅಲಿ ಖಾನ್ ಆಗಾಗ ಸುದ್ದಿ ಆಗುತ್ತಾರೆ. ಸ್ಟಾರ್ ಹೀರೋನ ಮಗ ಎನ್ನುವ ಕಾರಣಕ್ಕೆ ಅವರ ಹೆಸರು ಆಗಾಗ ಚರ್ಚೆಗೆ ಬರುತ್ತದೆ. ಅವರು ಕಂಡಾಗ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಈಗ ಅವರ ವೈಯಕ್ತಿಕ ವಿಚಾರಕ್ಕೆ ಸುದ್ದಿ ಆಗುತ್ತಿದ್ದಾರೆ. ನಟಿಯೊಬ್ಬರ ಜೊತೆ ಸುತ್ತಾಟ ನಡೆಸುತ್ತಾ ಇದ್ದಾರೆ. ಇವರು ಈ ವಿಚಾರವನ್ನು ಮುಚ್ಚಿಡುತ್ತಿಲ್ಲ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿದೆ.

ಇಬ್ರಾಹಿಂ ಅಲಿ ಖಾನ್ ಅವರು ಸುತ್ತಾಟ ನಡೆಸುತ್ತಿರುವುದು ಪಲಕ್ ತಿವಾರಿ ಜೊತೆ. ಇಬ್ಬರೂ ಮಾಲ್ಡೀವ್ಸ್​​ನ ರೆಸಾರ್ಟ್​ನಲ್ಲಿ ಸಮಯ ಕಳೆಯುತ್ತಿದ್ದಾರೆ. ಪಲಕ್ ಅವರು ಖ್ಯಾತ ಕಿರುತೆರೆ ನಟಿ ಶ್ವೇತಾ ತಿವಾರಿ ಅವರ ಮಗಳು. ಇಬ್ಬರೂ ಒಟ್ಟಾಗಿ ಇರುವ ವಿಡಿಯೋಗಳನ್ನು ಹಂಚಿಕೊಂಡಿಲ್ಲ. ಆದರೆ, ಇವರ ಹಿನ್ನೆಲೆ ನೋಡಿ ಫ್ಯಾನ್ಸ್ ಈ ರೀತಿಯಲ್ಲಿ ಊಹೆಗಳನ್ನು ಮಾಡುತ್ತಾ ಇದ್ದಾರೆ.

ಪಲಕ್ ಅವರು ಸೋಶಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಪಲಕ್ ಅವರು ನೀರಿನಿಂದ ಎದ್ದು ಬರುತ್ತಿರುವ ವಿಡಿಯೋಗಳು ಇವೆ. ಇದನ್ನು ಶೂಟ್ ಮಾಡಿದ್ದು ಇಬ್ರಾಹಿಂ ಅಲಿ ಖಾನ್ ಎನ್ನಲಾಗಿದೆ. ಇವರು ಸದ್ಯಕ್ಕಂತೂ ಈ ಬಗ್ಗೆ ಘೋಷಣೆ ಮಾಡೋದು ಅನುಮಾನವೇ

ವಯಸ್ಸಿನ ಅಂತರದ ಬಗ್ಗೆಯೂ ಇಲ್ಲಿ  ನಾವು ನಿಮಗೆ ಹೇಳಲೇ ಬೇಕು. ಇಬ್ರಾಹಿಂ ಅಲಿ ಖಾನ್​ಗೆ ಈಗ 23 ವರ್ಷ. ಅದೇ ಪಲಕ್​ಗೆ 24 ವರ್ಷ. ವಯಸ್ಸಿನಲ್ಲಿ ಪಲಕ್ ಅವರು ಒಂದು ವರ್ಷ ಹಿರಿಯವರು ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ.

ಇಬ್ರಾಹಿಂ ಅಲಿ ಖಾನ್ ಅವರು ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಅವರ ಮಗ. ಬಾಲಿವುಡ್​ ಯುವ ನಟಿ ಸಾರಾ ಅಲಿ ಖಾನ್ ಅವರ ಸಹೋದರ ಕೂಡ ಹೌದು. ಈಗ ಇಬ್ರಾಹಿಂ ಡೇಟಿಂಗ್ ವಿಚಾರಕ್ಕೆ ಸುದ್ದಿ ಆಗಿದ್ದಾರೆ.


Spread the love

About Laxminews 24x7

Check Also

5 ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರಣ್ಯಾಧಿಕಾರಿಗಳಿಗೆ ಕಡ್ಡಾಯ ರಜೆ ನೀಡಿ ಪಿಸಿಸಿಎಫ್ ಆದೇಶಿಸಿದ್ದಾರೆ.

Spread the loveಚಾಮರಾಜನಗರ: ಮಲೆಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯದಲ್ಲಿ 5 ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರಣ್ಯಾಧಿಕಾರಿಗಳಿಗೆ ಕಡ್ಡಾಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ