Breaking News

ಸತತ 15 ನೇ ದಿನವೂ ಪೆಟ್ರೋಲ್ ಡಿಸೇಲ್ ದರ ಏರಿಕೆ………

Spread the love

ಹೊಸದಿಲ್ಲಿ:  ದೇಶದಲ್ಲಿ ಸತತ 15 ನೇ ದಿನವೂ ಪೆಟ್ರೋಲ್ ಡಿಸೇಲ್ ದರ ಏರಿಕೆಯಾಗಿದೆ.  ಭಾನುವಾರ  ಪೆಟ್ರೋಲ್ ಗೆ 35 ಪೈಸೆ, ಡಿಸೇಲ್ ಗೆ 60 ಪೈಸೆ ಏರಿಕೆ ದಾಖಲಿಸಿವೆ.

ಕಳೆದ ಎರಡು ವಾರಗಳ ಅವಧಿಯಲ್ಲಿ  ಈವರೆಗೂ ಪೆಟ್ರೋಲ್ 7. 97 ರೂ. ಏರಿಕೆಯಾದ್ರೆ, ಡಿಸೇಲ್ 8.88 ರೂ ಹೆಚ್ಚಿಗೆಯಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 79.23 ರೂ. ಡೀಸೆಲ್ ದರ 77.67 ದಾಖಲಾಗಿದೆ. ಮುಂಬೈನಲ್ಲಿ ಪೆಟ್ರೋಲ್ ದರ 86.06 ರೂ. ಇದ್ದರೆ, ಡೀಸೆಲ್ ದರ 76.69 ರೂ. ಆಗಿದೆ. ಸ್ಥಳೀಯ ತೆರಿಗೆ ಆಧರಿಸಿ ಈ ದರಗಳು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗಲಿವೆ.

ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಎರಡನೇ ಮೂರರಷ್ಟು ತೆರಿಗೆ ಸೇರಿದೆ. ಪೆಟ್ರೋಲ್‌ಗೆ ಕೇಂದ್ರದ ತೆರಿಗೆ 32.98 ರೂ, ಹಾಗೂ ಸ್ಥಳೀಯ ಮಾರಾಟ ತೆರಿಗೆ 17.71 ರೂ.  ಸೇರಿ 50.69 ರೂ.  ಹೆಚ್ಚುವರಿ ಹೊರೆ ಗ್ರಾಹಕನ ಮೇಲೆ ಬೀಳುತ್ತಿದೆ.

ಡೀಸೆಲ್ ಮಾರಾಟದಲ್ಲಿ ಶೇ 63ರಷ್ಟು ತೆರಿಗೆ ಒಳಗೊಂಡಿದೆ. 31.83 ರೂ, ಕೇಂದ್ರದ ತೆರಿಗೆ ಹಾಗೂ 17.69 ರೂ.  ಸ್ಥಳೀಯ ತೆರಿಗೆ ಸೇರಿ 49.43 ರೂ. ಒಟ್ಟಾರೆ ಹೊರೆ ಬೀಳುತ್ತಿದೆ.


Spread the love

About Laxminews 24x7

Check Also

ನಮ್ಗೆ 1 ವೋಟು, ಅಂಬಾನಿಗೆ 1 ಲಕ್ಷ ವೋಟ್‌ ಇರುತ್ತಾ? – ವಿಪಕ್ಷಗಳಿಗೆ ತೇಜಸ್ವಿ ಸೂರ್ಯ ತರಾಟೆ

Spread the loveನವದೆಹಲಿ: ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಕಲ್ಪಿಸಲು ಕ್ಷೇತ್ರ ಪುನರ್‌ವಿಂಗಡಣೆಗಾಗಿ ಸಂವಿಧಾನ (131ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ