Breaking News

ಭಾರೀ ಮಳೆ; ವಾಹನ ಸಂಚಾರ ಅಸ್ತವ್ಯಸ್ತ

Spread the love

ಬೆಳ್ತಂಗಡಿ: ತಾಲೂಕಿನ ಹಲವೆಡೆ ರವಿವಾರ ಸಂಜೆ ಭಾರೀ ಮಳೆಯಾ ಗಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿ ಅಲ್ಲಲ್ಲಿ ರಸ್ತೆ ತಡೆಯುಂಟಾದ ಘಟನೆ ನಡೆದಿದೆ.

ತಾಲೂಕಿನಾದ್ಯಂತ ಮುಂಜಾನೆ ಬಿಸಿಲಿನ ವಾತಾವರಣ ಕಂಡುಬಂದರೆ, ಮಧ್ಯಾಹ್ನ ಬಳಿಕ ನಿರಂತರ ಮಳೆಯಾಗುತ್ತಿದೆ. ರವಿವಾರ ಸಂಜೆ ಸುಮಾರು 5 ಗಂಟೆಯಿಂದ ಧರ್ಮಸ್ಥಳ, ಉಜಿರೆ, ಮುಂಡಾಜೆ ಸಹಿತ ತಾಲೂಕಿನಾದ್ಯಂತ ಹಲವಡೇ ತಾಸುಗಟ್ಟಲೆ ಭಾರೀ ಮಳೆ ಸುರಿದಿದೆ.

Belthangady: ಭಾರೀ ಮಳೆ; ವಾಹನ ಸಂಚಾರ ಅಸ್ತವ್ಯಸ್ತ

ಉಜಿರೆ ಕೆಳಗಿನ ಪೇಟೆ ಸಹಿತ ಅಲ್ಲಲ್ಲಿ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಉಜಿರೆಯಿಂದ ಮುಂಡಾಜೆಯವರೆಗೆ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯಿಂದ ರಸ್ತೆಯಲ್ಲಿರುವ ದೊಡ್ಡ ಹೊಂಡಗಳಲ್ಲಿ ಮಳೆ ನೀರು ನಿಂತ ಪರಿಣಾಮ ದ್ವಿಚಕ್ರ ವಾಹನ ಸವಾರರರು ಪರದಾಡುತ್ತ ಸಂಚರಿಸುವ ಸ್ಥಿತಿ ನಿರ್ಮಾಣವಾಗಿತ್ತು.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ