Breaking News

ಬೆಳಗಾವಿ ಶಾಲೆಗಳಲ್ಲಿ ‘ಡೆಸ್ಕ್‌ ಅಭಿಯಾನ’: ಅಗತ್ಯ ಶಾಲೆಗಳಿಗೆ ವಿತರಣೆ

Spread the love

ಬೆಳಗಾವಿ: ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಬಳಕೆಯಾಗದೇ ಇರುವ ಹೆಚ್ಚುವರಿ ಡೆಸ್ಕ್‌ಗಳನ್ನು ಅಗತ್ಯವಿರುವ ಶಾಲೆಗಳಿಗೆ ನೀಡಿ, ಸದ್ಬಳಕೆ ಮಾಡುವ ‘ಡೆಸ್ಕ್ ಅಭಿಯಾನ’ ಆರಂಭಗೊಂಡಿದೆ.

ಡೆಸ್ಕ್‌ಗಳ ಕೊರತೆ ನೀಗಿಸಲು ಜಿಲ್ಲಾ ಪಂಚಾಯಿತಿ ಮತ್ತು ಶಾಲಾ ಶಿಕ್ಷಣ ಇಲಾಖೆಯು ಆರಂಭಿಸಿರುವ ಈ ಅಭಿಯಾನವು ಕೆಲ ಶಾಲೆಗಳಲ್ಲಿ ಡೆಸ್ಕ್‌ಗಳ ಕೊರತೆ ನೀಗಿಸಿದೆ.

ಬೆಳಗಾವಿ ಶಾಲೆಗಳಲ್ಲಿ 'ಡೆಸ್ಕ್‌ ಅಭಿಯಾನ': ಅಗತ್ಯ ಶಾಲೆಗಳಿಗೆ ವಿತರಣೆ

ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಸಮೀಕ್ಷೆ ನಡೆಸಿ, ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 1,407, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 6,080 ಸೇರಿ 7,487 ಹೆಚ್ಚುವರಿ ಡೆಸ್ಕ್‌ಗಳಿವೆ ಎಂದು ಹೇಳಿದ್ದಾರೆ.

‘ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಹೆಚ್ಚುವರಿ ಆಗಿದ್ದ 1,407 ಡೆಸ್ಕ್ ಪೈಕಿ 1,007 ಡೆಸ್ಕ್‌ಗಳನ್ನು ಅಗತ್ಯವಿರುವ ಶಾಲೆಗಳಿಗೆ ಸ್ಥಳಾಂತರಿಸಿದ್ದೇವೆ. ಉಳಿದ ಡೆಸ್ಕ್‌ಗಳನ್ನು ಹಂತಹಂತವಾಗಿ ಸ್ಥಳಾಂತರಿಸುತ್ತೇವೆ’ ಎಂದು ಶಾಲಾ ಶಿಕ್ಷಣ ಇಲಾಖೆಯ ಬೆಳಗಾವಿ ಉಪನಿರ್ದೇಶಕಿ ಲೀಲಾವತಿ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲ ಹಂತದಲ್ಲಿ ಅಗತ್ಯ ಶಾಲೆಗಳಿಗೆ ಸ್ಥಳಾಂತರಿಸುತ್ತೇವೆ. ಇದರೊಂದಿಗೆ ಪ್ರೌಢಶಾಲೆಗಳಲ್ಲಿ ಹೊಸ ಡೆಸ್ಕ್‌ಗಳ ಖರೀದಿಗೂ ಟೆಂಡರ್‌ ಕರೆಯಲಾಗಿದೆ. ಮುಂದಿನ ದಿನಗಳಲ್ಲಿ ಡೆಸ್ಕ್‌ಗಳ ಕೊರತೆ ತಗ್ಗಲಿದೆ’ ಎಂದು ಶಾಲಾ ಶಿಕ್ಷಣ ಇಲಾಖೆಯ ಚಿಕ್ಕೋಡಿ ಪ್ರಭಾರ ಉಪನಿರ್ದೇಶಕ ಬಿ.ಎ.ಮೇಕಲಮರಡಿ ಹೇಳಿದರು.

54 ಸಾವಿರ ಡೆಸ್ಕ್‌ ಬೇಕು:

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 1,477 ಸರ್ಕಾರಿ ಶಾಲೆಗಳಿದ್ದು, 1.86 ಲಕ್ಷ ವಿದ್ಯಾರ್ಥಿಗಳಿದ್ದಾರೆ. 36,507 ಡೆಸ್ಕ್‌ ಲಭ್ಯ ಇವೆ. ಇವುಗಳನ್ನು ಹೊರತುಪಡಿಸಿ, 30,229 ಡೆಸ್ಕ್‌ಗಳ ಅಗತ್ಯವಿದೆ. ಚಿಕ್ಕೋಡಿಯಲ್ಲಿ 1,595 ಸರ್ಕಾರಿ ಶಾಲೆಗಳಿದ್ದು, 1.97 ಲಕ್ಷ ವಿದ್ಯಾರ್ಥಿಗಳು ಇದ್ದಾರೆ. 37,823 ಡೆಸ್ಕ್‌ ಲಭ್ಯವಿವೆ. 24 ಸಾವಿರ ಡೆಸ್ಕ್‌ಗಳ ಅಗತ್ಯವಿದೆ.

ಜಿಲ್ಲೆಯಲ್ಲಿ ಹೆಚ್ಚುವರಿ ಮತ್ತು ಕಡಿಮೆ ಡೆಸ್ಕ್‌ಗಳಿರುವ ಶಾಲೆಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಹೆಚ್ಚುವರಿ ಡೆಸ್ಕ್‌ಗಳಿದ್ದರೆ, ಶೇ 20ರಷ್ಟು ಹೆಚ್ಚು ಉಳಿಸಿಕೊಂಡು ಉಳಿದವು ಸ್ಥಳಾಂತರಿಸಲಾಗುತ್ತದೆ.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ