Breaking News

ಬಿಗ್ ಬಾಸ್ – 11 ನೇ ಸೀಜನ್ ಗೆ ಅಚ್ಚರಿ ಹೆಸರುಗಳು ಕೇಳಿಬರುತ್ತಿವೆ.

Spread the love

ಬಿಗ್ ಬಾಸ್ – ಕನ್ನಡ 10 ರ ಸೀಸನ್ ಯಶಸ್ವಿ ಪ್ರದರ್ಶನದ ನಂತರ ಈಗ 11 ನೇ ಸೀಜನ್ ಗೆ ಅಚ್ಚರಿ ಹೆಸರುಗಳು ಕೇಳಿಬರುತ್ತಿವೆ. ಈ ಮಧ್ಯೆ ಚಿಕ್ಕಮಗಳೂರಿನ ಗೌದಿಗದ್ದೆಯ ವಿನಯ್ ಗುರುಜಿ ಹಾಗೂ ಮಾಜಿ ಕೊಡಗು – ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಹೆಸರು ಜೋರಾಗಿ ಕೇಳಿಬರುತ್ತಿವೆ.

ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಮೈಸೂರು ಲೋಕಸಭಾ ಟಿಕೆಟ್ ಮಿಸ್ ಮಾಡಿದ್ದ ಹಿನ್ನಲೆಯಲ್ಲಿ ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರತಾಪ್ ಸಿಂಹ ಸುದ್ದಿ ಸಂಕಲನ ಮೂಡಿಸಿತ್ತು. ಜೊತಗೆ ಯುವ ರಾಜಕಾರಣಿ ಪ್ರತಾಪ್ ಸಿಂಹ ಆಗಾಗ್ಗೆ ತಮ್ಮ ವಿವಾದಾತ್ಮಕ ಹೇಳಿಕೆಯಿಂದಲೇ ಸುದ್ದಿಯಾಗುತ್ತಾರೆ. ಸಧ್ಯ ಇವರ ಹೆಸರು ಬಿಗ್ ಬಾಸ್ ನಲ್ಲಿ ಕೇಳಿಬರುತ್ತಿದೆ‌‌.

ಇನ್ನೂ ವಿನಯ್ ಗುರುಜಿ ಈ ಬಾರಿ ಬಿಗ್ ಬಾಸ್ ಗೆ ಹೋಗುತ್ತಾರೆ ಎಂಬ ಮಾತು ಜೋರಾಗಿವೆ. ಸಧ್ಯ ಸೋಶಿಯಲ್ ಮೀಡಿಯಾದಲ್ಲಿ‌ ಅನೇಕರ ಹೆಸರು ಜೋರಾಗಿ ಕೇಳಿಬರುತ್ತಿವೆ. ಇದರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಮಾಡಿಕೊಂಡು ಫೇಮಸ್ ಆದವರ ಹೆಸರೂ ಇವೆ.

ಸೀರಿಯಲ್‌ ನಟಿ ಜ್ಯೋತಿ ರೈ. ಹಾಗೆಯೇ ಪ್ರವಾಸಿ ಕುರಿತು ವೀಡಿಯೋ ಮಾಡುವ ಯೂಟ್ಯೂಬರ್ ಡಾ. ಬ್ರೋ. ನಟಿ ಹರ್ಷ ಕಾವೇರಿ, ನಟಿ ಪ್ರೀಯಾ ಶಠಮರ್ಷನ್, ಮಾಜಿ ಸಚಿವ ಸಿ.ಪಿ ಯೋಗೇಶ್ವರ ಪುತ್ರಿ ನಿಶಾ ಯೋಗೇಶ್ವರ್, ಅಶ್ವಿನಿ ಗೌಡ ಹೆಸರು ಕೇಳಿಬರುತ್ತಿವೆ‌.

ಇನ್ನೂ ಟಿಕ್ ಟಾಕ್ ಸ್ಟಾರ್ ಪ್ರೀಯಾ ಸವದಿ, ಮುಕಳೆಪ್ಪ, ಶಿವಪುತ್ರ ಯಾದವಾಡ, ವಕೀಲ ನಾಗರಾಜ ಕುಡಪಲಿ ಸೇರಿದಂತೆ ಅನೇಕರ ಹೆಸರುಗಳು ಕೇಳಿಬರುತ್ತಿವೆ. ಇನ್ನೂ ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ನಡೆದಿದ್ದು ಪರ, ವಿರೋಧ ಚರ್ಚೆ ನಡೆದಿವೆ.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ