Breaking News

ತುಂಗಭದ್ರೆಯ ಚೆಲುವಿಗೆ ಮನಸೋತ ಪ್ರವಾಸಿಗರು

Spread the love

ಮುನಿರಾಬಾದ್: ಇಲ್ಲಿನ ತುಂಗಭದ್ರಾ ಜಲಾಶಯವು ನಿರಂತರ ಮಳೆಯಿಂದ ಭರ್ತಿಯಾಗಿದ್ದು, ಹೆಚ್ಚುವರಿ ನೀರು ನದಿಗೆ ಹರಿಸಲಾಗುತ್ತಿದೆ.

ಜಲಾಶಯದಿಂದ ಧುಮ್ಮಿಕ್ಕುವ ನೀರು ಮತ್ತು ನೊರೆಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಪ್ರವಾಸಿಗರು ಬರುತ್ತಿದ್ದಾರೆ.

ಜಲಾಶಯ ಹಿನ್ನೀರಿನ ಲೇಕ್ ವ್ಯೂ ಪ್ರವಾಸಿ ಮಂದಿರದ ಬಳಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡುಬಂದರು.

ತೆರೆ ಬರುವ ವೇಳೆ ಮತ್ತು ಗಾಳಿಯ ಪರಿಣಾಮ ಸಿಡಿಯುವ ನೀರ ಸಿಂಚನಕ್ಕೆ ಮೈವೊಡ್ಡಿ ಮಕ್ಕಳು ಸಮೇತ ಪ್ರವಾಸಿಗರು ಪುಳಕಗೊಂಡರು. ಅಲ್ಲಿನ ಸಿಬ್ಬಂದಿಯ ಎಚ್ಚರಿಕೆ ಹೊರತಾಗಿಯೂ ಕೆಲವರು ದಡದಲ್ಲಿ ನಿಂತು ಸ್ನಾನ ಮಾಡಿದ್ದು ಕಂಡುಬಂತು.

ಜಲಾಶಯದ ಮುಂಭಾಗದಲ್ಲಿ ಇರುವ ಹಳೆ ಸೇತುವೆ ನೀರಿನಲ್ಲಿ ಮುಳುಗಿದ್ದು, ವಾಹನ ಸಂಚಾರವನ್ನು ಸ್ಥಗಿತಗೊಳಿಸಿ, ಮುಳ್ಳು ಮತ್ತು ಬ್ಯಾರಿಕೇಡ್ ಹಾಕಿ ರಸ್ತೆಯನ್ನು ಬಂದ್ ಮಾಡಲಾಗಿದೆ. ಅಲ್ಲೂ ಕೂಡ ಪ್ರವಾಸಿಗರು ಕಂಡುಬಂದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ