Breaking News

ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದ ಖತರ್ನಾಕ್​ ಲೇಡಿ!

Spread the love

ವದೆಹಲಿ: ತನ್ನ ಯೂಟ್ಯೂಬ್​​ ಚಾನೆಲ್​ ಮತ್ತು ಇನ್​ಸ್ಟಾಗ್ರಾಂಗೆ ಹೈ ಕ್ವಾಲಿಟಿ ವಿಡಿಯೋ ಮಾಡಲು, ದುಬಾರಿ ಡಿಎಸ್​ಎಲ್​ಆರ್​ ಕ್ಯಾಮೆರಾ ಖರೀದಿಸುವುದಕ್ಕಾಗಿ ಮಾಲೀಕರ ಮನೆಗೆ ಕನ್ನ ಹಾಕಿದ ಮನೆಗೆಲಸದಾಕೆಯನ್ನು ದೆಹಲಿ ಪೊಲೀಸರು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ.

ರೀಲ್ಸ್​ ಮಾಡಲು ದುಬಾರಿ ಕ್ಯಾಮೆರಾ ಖರೀದಿಸುವ ಆಸೆ: ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದ ಖತರ್ನಾಕ್​ ಲೇಡಿ!

ಬಂಧಿತಳನ್ನು 30 ವರ್ಷದ ನೀತು ಯಾದವ್​ ಎಂದು ಗುರುತಿಸಲಾಗಿದೆ. ಈ ಘಟನೆ ದೆಹಲಿಯ ದ್ವಾರಕ ಏರಿಯಾದಲ್ಲಿ ನಡೆದಿದೆ. ಆರೋಪಿ ನೀತು, ನಿಕೋನ್​ ಡಿಎಸ್​ಎಲ್​ಆರ್​ ಕ್ಯಾಮೆರಾ ಖರೀದಿ ಮಾಡಲು ಬಯಸಿದ್ದಳು. ಈ ಕ್ಯಾಮೆರಾದಲ್ಲಿ ಇನ್​ಸ್ಟಾಗ್ರಾಂ ರೀಲ್ಸ್​ ಮತ್ತು ಯೂಟ್ಯೂಬ್​ ವಿಡಿಯೋ ಮಾಡಿದರೆ ಹೆಚ್ಚಿನ ಕ್ವಾಲಿಟಿ ಬರುತ್ತದೆ ಎಂಬ ದುರಾಸೆಯಿಂದ ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಎಗರಿಸಿದ್ದಳು. ಈ ವಿಚಾರ ಮನೆ ಮಾಲೀಕರಿಗೆ ತಿಳಿದು ದೂರು ನೀಡಿದ ಬೆನ್ನಲ್ಲೇ ದೆಹಲಿಯ ದ್ವಾರಕ ಜಿಲ್ಲೆಯ ಆಯಂಟಿ ಬರ್ಗ್ಲರಿ ಸೆಲ್​ ಆಕೆಯನ್ನು ಬಂಧಿಸಿದೆ.

ಮನೆಯಲ್ಲಿದ್ದ ಚಿನ್ನದ ಬಳೆ, ಬೆಳ್ಳಿ ಸರ ಮತ್ತು ಬೆಳ್ಳಿ ಆಭರಣಗಳು ಕಳುವಾಗಿದೆ ಮತ್ತು ಈ ಕಳ್ಳತನದ ಹಿಂದೆ ಮನೆಗೆಲಸದಾಕೆಯ ಕೈವಾಡ ಇರಬಹುದೆಂದು ಮಾಲೀಕರು ಶಂಕಿಸಿ, ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣ ನೀತು ಮೊಬೈಲ್‌ಗೆ ಕರೆ ಮಾಡಿದ್ದಾರೆ. ಆದರೆ, ಆಕೆಯ ಫೋನ್​ ಸ್ವಿಚ್ ಆಫ್ ಆಗಿತ್ತು. ಅಲ್ಲದೆ, ಆಕೆ ಮನೆ ಮಾಲೀಕರಿಗೆ ನೀಡಿದ ವಿಳಾಸವೂ ಕೂಡ ನಕಲಿ ಎಂಬುದು ತನಿಖೆಯ ವೇಳೆ ಪತ್ತೆಯಾಗಿದ್ದು, ಆಕೆಯ ಕಳ್ಳತನ ಮಾಡಿದ್ದಾಳೆ ಎಂಬುದು ಬಹುತೇಕ ಖಚಿತವಾಯಿತು.


Spread the love

About Laxminews 24x7

Check Also

ರಾಜ್ಯದಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಆಪರೇಷನ್ ಆರಂಭ

Spread the loveಬೆಂಗಳೂರು: ಬಾಂಗ್ಲಾ ದೇಶೀಯರು ಸೇರಿದಂತೆ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರು ವವರನ್ನು ಪತ್ತೆ ಹಚ್ಚಿ, ಗಡೀಪಾರು ಮಾಡುವ ಕಾರ್ಯಾಚರಣೆಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ