Breaking News

ಬೆಂಗಳೂರು ರೇವ್‌ ಪಾರ್ಟಿ ಕೇಸ್‌; ಬಿಲ್ಡಪ್‌ ಕೊಡಲು ಹೋಗಿ ಲಾಕ್‌ ಆದ ತೆಲುಗು ನಟಿ

Spread the love

ಬೆಂಗಳೂರು: ತಡರಾತ್ರಿ ಎಲೆಕ್ಟ್ರಾನಿಕ್‌ ಸಿಟಿಯ (electronic city) ಫಾರಂ ಹೌಸ್‌ನಲ್ಲಿ (Farm house) ನಡೆದಿದ್ದ ರೇವ್‌ ಪಾರ್ಟಿಗೆ (Rave party) ಸಂಬಂಧಪಟ್ಟಂತೆ ತೆಲುಗು ನಟಿ ಹೇಮಾ (Telugu actress Hema) ಅವರು ಪೊಲೀಸರ ಮುಂದೆ ಬಿಲ್ಡಪ್‌ ಕೊಡಲು ಹೋಗಿ ಲಾಕ್‌ ಆಗಿದ್ದಾರೆ ಎಂಬ ಸಂಗತಿ ಗೊತ್ತಾಗಿದೆ.

Rave party: ಬೆಂಗಳೂರು ರೇವ್‌ ಪಾರ್ಟಿ ಕೇಸ್‌; ಬಿಲ್ಡಪ್‌ ಕೊಡಲು ಹೋಗಿ ಲಾಕ್‌ ಆದ ತೆಲುಗು ನಟಿ ಹೇಮಾ!

ನಾನು ತೆಲುಗಿನ ಫೇಮಸ್‌ ನಟಿ ಎಂದು ಹೇಳಿಕೊಂಡಿದ್ದೇ ಅವರಿಗೆ ಮುಳುವಾಗಿದೆ ಎನ್ನಲಾಗಿದೆ.

ನಗರದ ಹೊರವಲಯದಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಅಪಾರ ಪ್ರಮಾಣದ ಮಾದಕ ವಸ್ತು ಸಿಕ್ಕಿರುವ ಕೇಸ್‌ನ ತನಿಖೆಯನ್ನು ಚುರುಕುಗೊಳಿಸಲಾಗಿದೆ. ಎರಡು ದಿನ ಎಗ್ಗಿಲ್ಲದೆ ಪಾರ್ಟಿ ನಡೆದಿದೆ. ಹೀಗಾಗಿ ಆ ಜೋಶ್‌ನಲ್ಲಿದ್ದ ನಟಿ ಹೇಮಾ ಅವರು ಪೊಲೀಸರು ದಾಳಿ ಮಾಡಿದ ವೇಳೆ ತಮ್ಮ ಬಗ್ಗೆ ಹೇಳಿಕೊಂಡು ಸರಿಯಾಗಿ ಸಿಕ್ಕಿಬಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ ತಾವು ದೊಡ್ಡ ಹಳ್ಳ ತೋಡಿ ಬಚಾವ್‌ ಆಗುತ್ತೇನೆ ಎಂದು ಮಾಡಿದ ಪ್ಲ್ಯಾನ್‌ ಫ್ಲಾಪ್‌ ಆಗಿದ್ದು, ಆ ಹಳ್ಳಕ್ಕೆ ಅವರೇ ಬಿದ್ದಂತೆ ಆಗಿದೆ.


Spread the love

About Laxminews 24x7

Check Also

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..

Spread the loveಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ.. ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ