Breaking News

KSRTC ಬಸ್ ಚಾಲಕ ಮೊಬೈಲ್‌ನಲ್ಲಿ ಮಾತು: ಸಂಸ್ಥೆ ಗಮನಕ್ಕೆ ತಂದ ADGP ಅಲೋಕ್ ಕುಮಾರ್

Spread the love

ಬೆಂಗಳೂರು: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಾ ಬಸ್ ಚಾಲನೆ ಮಾಡಿದ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ರಾಜ್ಯ ಸಂಚಾರ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರನ್ನು (KSRTC) ಒತ್ತಾಯಿಸಿದ್ದಾರೆ.

KSRTC ಬಸ್ ಚಾಲಕ ಮೊಬೈಲ್‌ನಲ್ಲಿ ಮಾತು: ಸಂಸ್ಥೆ ಗಮನಕ್ಕೆ ತಂದ ADGP ಅಲೋಕ್ ಕುಮಾರ್

ಈ ಕುರಿತು ಅವರು ಮೈಸೂರು-ಬೆಂಗಳೂರು-ಎಕ್ಸ್‌ಪ್ರೆಸ್‌ ವೇನಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಚಾಲಕರು ನಮ್ಮ ಕಣ್ಣಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ನಮ್ಮ ಎಲ್ಲ ಸಿಸಿಟಿವಿಗಳು ಅವುಗಳ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿವೆ. ಮೇ 11 ರಂದು ಚನ್ನಪಟ್ಟಣ ಬಳಿ ಕೆಎಸ್‌ಆರ್‌ಟಿಸಿ ಚಾಲಕ ಮೊಬೈಲ್‌ನಲ್ಲಿ ಮಾತನಾಡುತ್ತಾ ಬಸ್ ಚಾಲನೆ ಮಾಡಿದ್ದಾರೆ ಎಂದು ಫೋಟೊ ಸಮೇತ ಮಾಹಿತಿ ಹಂಚಿಕೊಂಡಿದ್ದಾರೆ.


Spread the love

About Laxminews 24x7

Check Also

ವಸ್ತುಗಳನ್ನು ಸಾಗಿಸುತ್ತಿದ್ದಾಗ ಏಕಾಏಕಿ ಕುಸಿದ ಲಿಫ್ಟ್‌ – ಇನ್‌ಸ್ಟಾ ಮಾರ್ಟ್‌ ಉದ್ಯೋಗಿ ಸಾವು

Spread the loveಮಂಗಳೂರು: ವಸ್ತುಗಳನ್ನು ಸಾಗಿಸುತ್ತಿದ್ದಾಗ ಏಕಾಏಕಿ ಲಿಫ್ಟ್‌ ಕುಸಿದು ಇನ್‌ಸ್ಟಾ ಮಾರ್ಟ್‌ ಉದ್ಯೋಗಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ  ಕುಂಟಿಕಾನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ