Breaking News

ಟಿಕೆಟ್ ತೋರಿಸಿ ಎಂದಿದ್ದಕ್ಕೆ ಟಿಸಿ(Ticket Collector) ಸೇರಿ ಐವರ ಮೇಲೆ ಮಾರಣಾಂತಿಕ ಹಲ್ಲೆ

Spread the love

ಬೆಳಗಾವಿ, ಮೇ.: ಟಿಕೆಟ್ ತೋರಿಸಿ ಎಂದಿದ್ದಕ್ಕೆ ಟಿಸಿ(Ticket Collector) ಸೇರಿ ಐವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಚಾಲುಕ್ಯ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಳಗಾವಿ(Belagavi) ಜಿಲ್ಲೆಯ ಖಾನಾಪುರ ತಾಲೂಕಿನ ಲೋಂಡಾ ಬಳಿ ನಡೆದಿದೆ.

ನಾಲ್ವರು ಅಪರಿಚಿತ ಮುಸುಕುಧಾರಿಪ್ರಯಾಣಿಕರು ಸೇರಿಟಿಸಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ. ನಂತರ ಟಿಸಿ ಮತ್ತು ನಾಲ್ವರು ಪ್ರಯಾಣಿಕರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವ ನಾಲ್ವರಿಗೂ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಚಿಕಿತ್ಸೆ ಫಲಿಸದೇ ಓರ್ವ ಮೃತಪಟ್ಟಿದ್ದಾರೆ.

ಬೆಳಗಾವಿ: ರೈಲಿನಲ್ಲಿ ಟಿಸಿ ಸೇರಿದಂತೆ ಐವರ ಮೇಲೆ ಮುಸುಕುಧಾರಿ ಹಲ್ಲೆ, ಓರ್ವ ಸಾವು

ಚಿಕಿತ್ಸೆ ಫಲಿಸದೆ ಕೋಚ್ ಅಟೆಂಡರ್ ಸಾವು

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಚಿಕಿತ್ಸೆ ಫಲಿಸದೆ ಕೋಚ್ ಅಟೆಂಡರ್ ದೇವ‌ಋಷಿ ವರ್ಮಾ(23) ಎಂಬುವವರು ಸಾವನ್ನಪ್ಪಿದ್ದಾರೆ.

ಪಾಂಡಿಚೇರಿ ಯಿಂದ ಮುಂಬಯಿ ಮಾರ್ಗವಾಗಿ ಚಲಿಸುತ್ತಿದ್ದ ಚಾಲುಕ್ಯ ಎಕ್ಸ್‌ಪ್ರೆಸ್‌ ರೈಲಿನ ಎಸ್ 8 ಬೋಗಿಯಲ್ಲಿ ಟಿಸಿ ಮೇಲಿನ ಹಲ್ಲೆ ತಡೆಯಲು ಹೋಗಿದ್ದ ಕೋಚ್ ಅಟೆಂಡರ್​ಗೆ ಮುಸುಕುಧಾರಿ ಮನಸೋ ಇಚ್ಚೆ ಚಾಕು ಇರಿದಿದ್ದ. ಇದೀಗ ಕೊನೆಯುಸಿರೆಳೆದಿದ್ದಾರೆ.

ಇನ್ನು ಟಿಸಿ ಸೇರಿ ಉಳಿದ ಮೂವರಿಗೆ ಜಿಲ್ಲಾ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ.


Spread the love

About Laxminews 24x7

Check Also

ಪರಿಷ್ಕರಣೆ ಹೆಸರಲ್ಲಿ ಗ್ಯಾರಂಟಿ ಯೋಜನೆ ರದ್ದು ಮಾಡುವ ಹುನ್ನಾರ: ಸರ್ಕಾರದ ವಿರುದ್ಧ ಶ್ರೀರಾಮುಲು ಕಿಡಿ

Spread the loveಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿಪರಿಷ್ಕಣೆ ಹೆಸರಿನಲ್ಲಿ ಗ್ಯಾರಂಟಿ ಯೋಜನೆ ರದ್ದು ಮಾಡುವ ಹುನ್ನಾರ ಮಾಡ್ತಿದೆ ಅಂತ ಮಾಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ