Breaking News

ಕರ್ನಾಟಕದ ಗ್ಯಾರಂಟಿ ಸರ್ಕಾರ ಪತನಕ್ಕೆ ಮಹಾರಾಷ್ಟ್ರದಂತೆ`ನಾಥ್‌ ಆಪರೇಷನ್‌’..?!

Spread the love

ಕರ್ನಾಟಕದ ಗ್ಯಾರಂಟಿ ಸರ್ಕಾರ ಪತನಕ್ಕೆ ಮಹಾರಾಷ್ಟ್ರದಂತೆ`ನಾಥ್‌ ಆಪರೇಷನ್‌’..?!

ಬೆಂಗಳೂರು,ಮೇ 13- ಮಹಾರಾಷ್ಟ್ರದ ಮಾದರಿಯಲ್ಲಿ ಕರ್ನಾಟಕದಲ್ಲೂ ನಾಥ್‌ ಆಪರೇಷನ್‌ ಮಾಡಿ ಕಾಂಗ್ರೆಸ್‌‍ ಸರ್ಕಾರವನ್ನು ಪತನಗೊಳಿಸಲು ಚರ್ಚೆಗಳು ನಡೆದಿವೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಹೇಳಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

 

ಮಹಾರಾಷ್ಟ್ರದ ಸತಾರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಹೇಳಿಕೆ ನೀಡಿರುವ ಏಕನಾಥ ಶಿಂಧೆ ಕರ್ನಾಟಕ ಸರ್ಕಾರದ ಭವಿಷ್ಯ ಕುರಿತು ಮಹತ್ವದ ಸುಳಿವು ನೀಡಿದ್ದಾರೆ. ಇತ್ತೀಚೆಗೆ ತಾವು ಕರ್ನಾಟಕದ ಸಭೆಯಲ್ಲಿ ಭಾಗವಹಿಸಲು ತೆರಳಿದ್ದೆ. ಅಲ್ಲಿ ಪಕ್ಷದ ನಾಯಕರು ನಾಥ್‌ ಆಪರೇಷನ್‌ ಮಾಡೋದಿದೆ ಎಂದು ಹೇಳಿದರು. ನಾಥ್‌ ಆಪರೇಷನ್‌ ಎಂದರೆ ಏನು ಎಂದು ನಾನು ಅವರಲ್ಲಿ ಕೇಳಿದೆ.

ಕರ್ನಾಟಕದ ಗ್ಯಾರಂಟಿ ಸರ್ಕಾರ ಪತನಕ್ಕೆ ಮಹಾರಾಷ್ಟ್ರದಂತೆ`ನಾಥ್‌ ಆಪರೇಷನ್‌'..?!

ಮಹಾರಾಷ್ಟ್ರದಲ್ಲಿ ಏಕನಾಥ್‌ ಶಿಂಧೆ ಮಾದರಿಯಲ್ಲೇ ನಾಥ್‌ ಆಪರೇಷನ್‌ ಮಾಡಬೇಕಿದೆ. ನಿಮ ಅನುಭವ ಮತ್ತು ಸಹಕಾರ ನಮಗೆ ಅಗತ್ಯ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. ನಾನು ಅಗತ್ಯ ಸಂದರ್ಭದಲ್ಲಿ ಜೊತೆಗಿರುವುದಾಗಿ ಭರವಸೆ ನೀಡಿದ್ದೇನೆ ಎಂದು ಶಿಂಧೆ ತಿಳಿಸಿದ್ದಾರೆ.ಇದು ಬಿಜೆಪಿಯವರು ಕರ್ನಾಟಕದಲ್ಲಿ ತೆರೆಮರೆಯಲ್ಲಿ ಆಪರೇಷನ್‌ ಕಮಲಕ್ಕೆ ವೇದಿಕೆ ಸಜ್ಜುಗೊಳಿಸಿರುವುದನ್ನು ಮತ್ತೊಮೆ ಸಾಬೀತುಪಡಿಸಿದೆ.


Spread the love

About Laxminews 24x7

Check Also

ತಂದೆಗೆ ಲಿವರ್ ದಾನ ಮಾಡಿ ಮಹಾದಾನಿ ಆದ ಮಗ

Spread the loveಬೆಳಗಾವಿ: ಲಿವರ್ ಸಂಪೂರ್ಣವಾಗಿ ನಿಷ್ಕ್ರೀಯವಾಗಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ರೋಗಿಗೆ ಯಶಸ್ವಿ ಲಿವರ್ ಕಸಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ ಜೀವವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ