Breaking News
Home / ರಾಜಕೀಯ / 15 ವರ್ಷದ ಬಳಿಕ ರಾಜ್ಯದಲ್ಲಿ ವಿದ್ಯುತ್​ ದರ ಇಳಿಕೆ: 100 ಯುನಿಟ್​​ಗಿಂತ ಹೆಚ್ಚು ಬಳಸುವವರಿಗೆ ಲಾಭ

15 ವರ್ಷದ ಬಳಿಕ ರಾಜ್ಯದಲ್ಲಿ ವಿದ್ಯುತ್​ ದರ ಇಳಿಕೆ: 100 ಯುನಿಟ್​​ಗಿಂತ ಹೆಚ್ಚು ಬಳಸುವವರಿಗೆ ಲಾಭ

Spread the love

ಬೆಂಗಳೂರು, ಏಪ್ರಿಲ್​ 01: ಲೋಕಸಭೆ ಚುನಾವಣೆ (Lok Sabha Election) ಸಮಯದಲ್ಲಿ ಎಲ್ಲ ವರ್ಗದ ವಿದ್ಯುತ್​ ಬಳಕೆದಾರರಿಗೆ ಕರ್ನಾಟಕ ರಾಜ್ಯ ವಿದ್ಯುತ್​ಚ್ಛಕ್ತಿ ನಿಯಂತ್ರಣ ಆಯೋಗವು (KERC) ಗುಡ್​ ನ್ಯೂಸ್​ ನೀಡಿದೆ. ಗೃಹ ಬಳಕೆಯಲ್ಲಿ 100 ಯುನಿಟ್​​ಗಿಂತ ಹೆಚ್ಚು ವಿದ್ಯುತ್​​ ಬಳಕೆ ಮಾಡುವವರಿಗೆ ಪ್ರತಿ ಯುನಿಟ್​ಗೆ 1.10 ರೂ. ಕಡಿಮೆ (Electricity bill reduce) ಮಾಡಲಾಗಿದೆ. ಈ ಮೂಲಕ 15 ವರ್ಷಗಳ ಬಳಿಕ ರಾಜ್ಯದಲ್ಲಿ ವಿದ್ಯುತ್ ದರ ಇಳಿಕೆಯಾಗಿದೆ. 2024-25ನೇ ಸಾಲಿಗೆ ಅನ್ವಯವಾಗುವಂತೆ ಈ ಪರಿಷ್ಕೃತ ದರ ಇಂದು (ಏಪ್ರಿಲ್​ 01) ರಿಂದಲೆ ಜಾರಿಯಾಗಲಿದೆ. ಎಲ್ಲಾ ಎಸ್ಕಾಂಗಳಿಗೂ ಏಕರೂಪದ ಗೃಹಬಳಕೆ ವಿದ್ಯುತ್​ ದರ ನಿಗದಿ ಮಾಡಿದೆ.

15 ವರ್ಷದ ಬಳಿಕ ರಾಜ್ಯದಲ್ಲಿ ವಿದ್ಯುತ್​ ದರ ಇಳಿಕೆ: 100 ಯುನಿಟ್​​ಗಿಂತ ಹೆಚ್ಚು ಬಳಸುವವರಿಗೆ ಲಾಭ

ಮೊದಲು 100ಕ್ಕಿಂತ ಹೆಚ್ಚು ಯುನಿಟ್​ ವಿದ್ಯುತ್​ ಬಳಕೆ ಮಾಡುವವರಿಗೆ ಪ್ರತಿ ಯುನಿಟ್​​ಗೆ 7 ರೂ. ನಿಗದಿ ಮಾಡಲಾಗಿತ್ತು. ಇದೀಗ 7 ರೂ. ಬದಲಿಗೆ ಪ್ರತಿ ಯುನಿಟ್​ಗೆ 5.90 ರೂ. ಮಾತ್ರ ಶುಲ್ಕ ವಿಧಿಸಲಾಗಿದೆ. ಇನ್ನು 100 ಯುನಿಟ್​ಗಿಂತ ಕಡಿಮೆ ವಿದ್ಯುತ್​ ಬಳಕೆ ಮಾಡುವವರು ಈಗಾಗಲೆ ಪ್ರತಿ ಯುನಿಟ್​ಗೆ 4.75 ರೂ. ಪಾವತಿಸುತ್ತಿದ್ದಾರೆ.ಆದರೆ ಸರ್ಕಾರ 200 ಯುನಿಟ್​ ಒಳಗೆ ಬಳಸುವವರಿಗೆ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್​ ನೀಡುವುದರಿಂದ ಈ ಸೌಲಭ್ಯಕ್ಕೆ ನೋಂದಾಯಿಸಿಕೊಂಡವರಿಗೆ ದರ ಇಳಿಕೆಯ ಪ್ರಯೋಜನ ಸಿಗುವುದಿಲ್ಲ. ಗ್ರಾಹಕರಿಗೆ ದರ ಕಡಿತದ ಲಾಭ ಏಪ್ರಿಲ್​ನಲ್ಲಿ ಬರುವ ಬಿಲ್​​ನಲ್ಲಿ ಬರುವುದಿಲ್ಲ. ಮೇ ತಿಂಗಳಿನಲ್ಲಿ ಬರುವ ಬಿಲ್​ನಲ್ಲಿ ಈ ದರ ಅನ್ವಯವಾಗಲಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ