Breaking News

ಜಿಲ್ಲಾಧಿಕಾರಿ ವಿರುದ್ಧ ಚುನಾವಣಾ ಆಯೋಗಕ್ಕೆ ಎಚ್​​ಡಿಡಿ ದೂರು;

Spread the love

ಹಾಸನ: ಗಂಭೀರ ಸ್ವರೂಪದ ಆರೋಪ ಮಾಡಿ ಕೇಂದ್ರ ಚುನಾವಣಾ ಆಯೋಗಕ್ಕೆ (Election Commission) ಹಾಸನ ಜಿಲ್ಲಾಧಿಕಾರಿ (Hassan DC ) ಹಾಗೂ ಚುನಾವಣಾಧಿಕಾರಿ ಸತ್ಯಭಾಮಾ (Sathyabhama) ವಿರುದ್ಧ ಮಾರ್ಚ್ 20ರಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ (HD Deve gowda) ಅವರು ದೂರು ನೀಡಿದ್ದಾರೆ.ಉಸ್ತುವಾರಿ ಸಚಿವರ (Minister Rajanna) ಅಣತಿಯಂತೆ ಮಾತ್ರ ಸತ್ಯಭಾಮಾ ಕೆಲಸ ಮಾಡುತ್ತಾರೆ. ಜನರ ಜತೆ ಡಿಸಿ ಸೌಜನ್ಯದಿಂದ ವರ್ತಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

 

ಜಿಲ್ಲಾಧಿಕಾರಿಗಳ ವಿರುದ್ಧ ಗಂಭೀರ ಆರೋಪ

ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರನ್ನು ತಕ್ಷಣ ವರ್ಗಾವಣೆ ಮಾಡುವಂತೆ ಪತ್ರದಲ್ಲಿ ಮಾಜಿ ಪ್ರಧಾನಿಗಳು ಆಗ್ರಹಿಸಿದ್ದಾರೆ. ಸಿ.ಸತ್ಯಭಾಮ ಅವರು ಕಳೆದ ಎಂಟು ತಿಂಗಳಿಂದ ಹಾಸನದ ಜಿಲ್ಲಾಧಿಕಾರಿಯ ಕಾರ್ಯನಿರ್ವಹಿಸುತ್ತಿದ್ದಾರೆ.

ಹಾಸನ ಜಿಲ್ಲಾಧಿಕಾರಿ ಉಸ್ತುವಾರಿ ಸಚಿವರ ಅಣತಿಯಂತೆ ಮಾತ್ರ ಕೆಲಸ ಮಾಡುತ್ತಾರೆ. ಸಚಿವ ರಾಜಣ್ಣ ಅವರ ಸಮುದಾಯಕ್ಕೆ ಸೇರಿರುವ ಸತ್ಯಭಾಮ ಅವರಿಂದ ನಿಷ್ಪಕ್ಷಪಾತ ಆಡಳಿತ ಸಾಧ್ಯವಿಲ್ಲ. ಜಿಲ್ಲಾಧಿಕಾರಿ ಅವರಿಂದ ಜನರ ಜೊತೆ ಸೌಜನ್ಯದ ವರ್ತನೆ ತೋರುತ್ತಿಲ್ಲ. ತಮ್ಮ ಸಹೊದ್ಯೋಗಿಗಳಿಗೆ ಗೌರವ ಕೊಡಲ್ಲ, ಎಲ್ಲರೊಟ್ಟಿಗು ಜಗಳ ಮಾಡಿಕೊಳ್ತಾರೆ. ಈ ಹಿಂದೆ ಅವರು ಕೋಲಾರದಲ್ಲಿ ಇದ್ದಾಗಲು ಸಹೋದ್ಯೋಗಿಗಳ ಜೊತೆ ಜಗಳ ಮಾಡಿಕೊಂಡಿದ್ದರು ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ