Breaking News

ಹಣಕ್ಕಾಗಿ ಮಗಳನ್ನು ಸೋನುಗೆ ದತ್ತು ಕೊಟ್ರಾ ಪೋಷಕರು?

Spread the love

ಬೆಂಗಳೂರು: ಬಾಲಕಿಯನ್ನು ಕಾನೂನು ಬಾಹಿರವಾಗಿ ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿರುವ ಬಿಗ್​ಬಾಸ್​ ಒಟಿಟಿ ಸೀಸನ್​-1ರ ಸ್ಪರ್ಧಿ, ರೀಲ್ಸ್​ ಸ್ಟಾರ್​ ಸೋನು ಶ್ರೀನಿವಾಸ್​ ಗೌಡ ವಿರುದ್ಧ FIR ದಾಖಲಾಗಿದ್ದು, ಆಕೆಯನ್ನು ನಾಲ್ಕು ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಪಡೆಯಲಾಗಿದೆ.

 

ಮಾರ್ಚ್​ 25ರಂದು ಸೋನು ಶ್ರೀನಿವಾಸ್​ ಗೌಡ ಅವರನ್ನು ಪೊಲೀಸರು ಕೋರ್ಟ್​ಗೆ ಹಾಜರುಪಡಿಸಬೇಕಿದೆ. ಅಲ್ಲಿಯವರೆಗೆ ಸೋನು ಗೌಡ ಅವರನ್ನು ರಾಯಚೂರಿಗೆ ಕರೆದೊಯ್ದು ಪೊಲೀಸರು ತನಿಖೆ ನಡೆಸಲಿದ್ದಾರೆ. ಆದ್ದರಿಂದ ನ್ಯಾಯಾಲಯ ಅವರನ್ನು 4 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಬಾಲಕಿ ಪರಿಚಯವಾಗಿದ್ದ ಸ್ಥಳ ಮತ್ತು ಬಾಲಕಿಯ ನಿವಾಸ ಸೇರಿ ಹಲವು ಕಡೆಗಳಿಗೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ.

ಇತ್ತ ಸೋನು ಗೌಡ ಬಾಲಕಿಯನ್ನು ದತ್ತು ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್​ ಸಿಕ್ಕಿದ್ದು, ಬಾಲಕಿಯ ತಂದೆ ಹಾಗೂ ತಾಯಿಯನ್ನು ಮಕ್ಕಳ ರಕ್ಷಣಾ ನಿರ್ದೇಶನಾಲಯ (CWC) ವಿಚಾರಣೆ ನಡೆಸಲಿದೆ. ಮಗುವನ್ನು ಸೋನು ಗೌಡ ಅವರಿಗೆ ಕೊಟ್ಟಿದ್ದಕ್ಕೆ ನಿಖರ ಕಾರಣವನ್ನು ಅಧಿಕಾರಿಗಳು ಕೇಳಲಿದ್ದಾರೆ. ಹಣ ಪಡೆದು ಮಗುವನ್ನ ದತ್ತು ಕೊಟ್ಟಿದ್ದರೆ ಪೋಷಕರಿಗೂ ಸಂಕಷ್ಟ ಎದುರಾಗಲಿದೆ. ಒಂದು ವೇಳೆ ಹಣ ಪಡೆದಿರುವುದು ಪತ್ತೆಯಾದಲ್ಲಿ ಪೋಷಕರ ಮೇಲೂ ಕ್ರಮ ಜರುಗಲಿದೆ.


Spread the love

About Laxminews 24x7

Check Also

ಗ್ಯಾರಂಟಿ’ಗಳಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ನಿಜ, ಆದರೆ ಅಭಿವೃದ್ಧಿ ಕಾರ್ಯ ನಿಂತಿಲ್ಲ: ಸತೀಶ್ ಜಾರಕಿಹೊಳಿ

Spread the loveಬೆಳಗಾವಿ: ಗ್ಯಾರಂಟಿ ಯೋಜನೆಗಳ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌, ಸಚಿವ ಎಂ.ಬಿ.ಪಾಟೀಲ್‌ ಅಪಸ್ವರ ಎತ್ತಿದ ಬೆನ್ನಲ್ಲೇ ಲೋಕೋಪಯೋಗಿ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ