Breaking News

ಬೆಳಗಾವಿಯಲ್ಲಿ ಆಸ್ತಿ ವಿವಾದ: ಅಳಿಯನ ಮೇಲೆಯೇ ಮಾವನಿಂದ ಫೈರಿಂಗ್

Spread the love

ಬೆಳಗಾವಿ, ಮಾರ್ಚ್​​ 18: ಆಸ್ತಿ ವಿವಾದ ಹಿನ್ನೆಲೆಯಲ್ಲಿ ಅಳಿಯನ ಮೇಲೆ ಮಾವನಿಂದ ಫೈರಿಂಗ್(firing)ಮಾಡಿರುವಂತಹ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ ಗ್ರಾಮದ ಬಳಿ ಕೃತ್ಯ ನಡೆದಿದೆ.

ಬೆಳಗಾವಿಯಲ್ಲಿ ಆಸ್ತಿ ವಿವಾದ: ಅಳಿಯನ ಮೇಲೆಯೇ ಮಾವನಿಂದ ಫೈರಿಂಗ್

30 ಗುಂಟೆ ಜಮೀನಿಗಾಗಿ ಶಾಂತಿನಾಥ ಆಲಗೂರು (32) ಮೇಲೆ ಮಾವ ಧನಪಾಲ್ ಆಸಂಗಿ (54) ಫೈರಿಂಗ್ ಮಾಡಿದ್ದಾರೆ. ಆತ್ಮರಕ್ಷಣೆಗಾಗಿ ಪಡೆದಿದ್ದ ರಿವಾಲ್ವರ್ದಿಂದಲೇ ಒಂದು ಸುತ್ತಿನ ಗುಂಡಿನ ದಾಳಿ ಮಾಡಿದ್ದಾರೆ ಧನಪಾಲ್. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಆರೋಪಿ ಧನಪಾಲ್ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

ಹೊಟ್ಟೆ ಭಾಗಕ್ಕೆ ಗುಂಡು ತಾಗಿದ್ದು, ಶಾಂತಿನಾಥ್ ಸ್ಥಿತಿ ಗಂಭೀರವಾಗಿದೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಗಂಭೀರ ಗಾಯ ಹಿನ್ನೆಲೆ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

 


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ