Breaking News

ಭಾನುವಾರವೂ ಅಂಚೆ ಕಚೇರಿ ತೆರೆಯಲು ಚಿಂತನೆ

Spread the love

ಬೆಂಗಳೂರು: ರಾಜ್ಯದಲ್ಲಿನ ಆಯ್ದ ಅಂಚೆ ಕಚೇರಿಗಳನ್ನು ಭಾನುವಾರವೂ ತೆರೆಯಲು ಅಂಚೆ ಇಲಾಖೆ ಚಿಂತನೆ ನಡೆಸಿದೆ.

ಅಂಚೆ ಸೇವೆಗಳಿಗಳಿಗಾಗಿ ಉದ್ಯೋಗಸ್ಥರು ಕೆಲವೊಮ್ಮೆ ಅರ್ಧ ದಿನ ರಜೆ ಹಾಕುವ ಅನಿವಾರ್ಯ ಪರಿಸ್ಥಿತಿ ಉಂಟಾಗುತ್ತಿದೆ. ಹೀಗಾಗಿ ಭಾನುವಾರವೂ ತೆರೆದರೆ ಅನುಕೂಲ ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಆರ್ಥಿಕ ವಹಿವಾಟು ಸೇರಿ ಎಲ್ಲ ಅಂಚೆ ಸೇವೆಗಳನ್ನು ಭಾನುವಾರವೂ ಕಲ್ಪಿಸುವ ಸಂಬಂಧ ಅಂಚೆ ಕಚೇರಿಗಳನ್ನು ತೆರೆಯಲು ಯೋಚಿಸಿದೆ.

ಈ ಸಂಬಂಧ ಸಾರ್ವಜನಿಕರಿಂದ ಸಲಹೆಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ಕರ್ನಾಟಕ ವೃತ್ತ್ತ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

 

ಬೆಂಗಳೂರಿನಲ್ಲಿರುವ 150 ಅಂಚೆ ಕಚೇರಿಗಳಲ್ಲಿ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮದಲ್ಲಿ ಮತ್ತು ಕೇಂದ್ರ ವ್ಯಾಪಾರ ಜಿಲ್ಲೆಯಲ್ಲಿ ತಲಾ ಒಂದರಂತೆ ಐದು ಅಂಚೆ ಕಚೇರಿಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಈ ಅಂಚೆ ಕಚೇರಿಗಳನ್ನು ವಾರದ ದಿನಗಳಲ್ಲಿ ಮುಚ್ಚುವುದು ಅಥವಾ ಸಿಬ್ಬಂದಿಗೆ ಪರ್ಯಾಯ ರಜೆ ಕೊಟ್ಟು ಭಾನುವಾರ ಬಳಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಸ್ಪೀಡ್ ಪೋಸ್ಟ್, ಮನಿ ಆರ್ಡರ್, ಖಾತೆಗೆ ಹಣ ಪಾವತಿಸುವುದು, ಪಡೆಯುವುದು ಹೀಗೆ ನಾನಾ ಸೇವೆಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಸರ್ಕಾರಿ ಬಸ್‌ಗಳ ಮೇಲಿನ ಜಾಹೀರಾತಿಗೆ ಬ್ರೇಕ್ – 15 ದಿನದೊಳಗೆ ಜಾಹೀರಾತು ತೆರವಿಗೆ ಸೂಚನೆ

Spread the loveಬೆಂಗಳೂರು: ಸರ್ಕಾರಿ ಸಾರಿಗೆ ಬಸ್‌ಗಳ ಮೇಲೆ ತಂಬಾಕು ಜಾಹೀರಾತು  ವಿರುದ್ಧ ಜನಾಕ್ರೋಶ ಹೆಚ್ಚಾಗಿತ್ತು. ಬಸ್‌ಗಳ ಮೇಲಿನ ಜಾಹೀರಾತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ