Breaking News

ಸಂಸದ ಪ್ರಜ್ವಲ್‌, ಭವಾನಿ ರೇವಣ್ಣ ವಿರುದ್ಧ ಕಿಡ್ನಾಪ್‌, ಚಿತ್ರಹಿಂಸೆ ಆರೋಪ

Spread the love

ಹಾಸನ : ಸಂಸದ ಪ್ರಜ್ವಲ್‌ ರೇವಣ್ಣ (MP Prajwal revanna) ಹಾಗೂ ಶಾಸಕ ಎಚ್‌.ಡಿ. ರೇವಣ್ಣ (MLA H D Revanna) ಪತ್ನಿ ಭವಾನಿ ರೇವಣ್ಣ (Bhavani revanna) ತನ್ನನ್ನು ಹಾಗೂ ತನ್ನ ಪತ್ನಿಯನ್ನು ಅಪಹರಿಸಿ (Kidnap) ಚಿತ್ರಹಿಂಸೆ ನೀಡಿದ್ದಾರೆ ಎಂದು ಅವರ ಮಾಜಿ ಕಾರು ಚಾಲಕ ಕಾರ್ತಿಕ್‌ ಆರೋಪಿಸಿದ್ದಾನೆ.

ಈ ಕುರಿತು ದಕ್ಷಿಣ ವಲಯದ ಐಜಿಪಿಗೆ ದೂರನ್ನೂ ಸಹ ದಾಖಲಿಸಿದ್ದಾನೆ.

ತಾನು ಹತ್ತು ವರ್ಷಗಳ ಕಾಲ ಅವರ ಬಳಿ ಕಾರ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದೆ. ಕಳೆದ ವರ್ಷ ಮಾರ್ಚ್‌ 12 ರಂದು ತಮ್ಮನ್ನು ಅಪಹರಿಸಿ ತಮ್ಮ ಸ್ವಾಧೀನದಲ್ಲಿದ್ದ 13 ಎಕರೆ ಜಮೀನನ್ನು ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಕಾರ್ತಿಕ್‌ ದೂರಿನಲ್ಲಿ ತಿಳಿಸಿದ್ದು, ಭವಾನಿ ರೇವಣ್ಣ ಹಾಗೂ ಇಬ್ಬರೂ ತನಗೆ ಚಿತ್ರಹಿಂಸೆ ನೀಡಿದ್ದರೆಂದು ಆರೋಪಿಸಿದ್ದಾನೆ.


Spread the love

About Laxminews 24x7

Check Also

543 ಸ್ಥಾನಗಳಲ್ಲೇ ಮಹಿಳೆಯರಿಗೆ 33% ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತನ್ನಿ: ಮೋದಿಗೆ ಖರ್ಗೆ ಸವಾಲು

Spread the loveನವದೆಹಲಿ: ಪ್ರಸ್ತುತ ಇರುವ 543 ಲೋಕಸಭಾ ಸ್ಥಾನಗಳಲ್ಲೇ ಮಹಿಳೆಯರಿಗೆ 33% ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತನ್ನಿ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ