Breaking News

ಕಿರಿಯ ಪುತ್ರ ಅಬ್ರಾಮ್​ ಜೊತೆ ನಟ ಶಾರುಖ್​ ಖಾನ್​ ಮುಂಬೈನ ಪ್ರಸಿದ್ಧ ‘ಲಾಲ್​ಬೌಚ ರಾಜಾ’ ಸನ್ನಿಧಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.

Spread the love

ಕಿರಿಯ ಪುತ್ರ ಅಬ್ರಾಮ್​ ಜೊತೆ ನಟ ಶಾರುಖ್​ ಖಾನ್​ ಮುಂಬೈನ ಪ್ರಸಿದ್ಧ ‘ಲಾಲ್​ಬೌಚ ರಾಜಾ’ ಸನ್ನಿಧಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.

ಬಾಲಿವುಡ್​ ಸೂಪರ್​ಸ್ಟಾರ್​ ಶಾರುಖ್​ ಖಾನ್​ ಗುರುವಾರ ತಮ್ಮ ಕಿರಿಯ ಪುತ್ರ ಅಬ್ರಾಮ್​ ಜೊತೆ ಮುಂಬೈನ ಪ್ರಸಿದ್ಧ ‘ಲಾಲ್​ಬೌಚ ರಾಜಾ’ ಸನ್ನಿಧಾನದಲ್ಲಿ (Lalbaugcha Raja) ವಿಶೇಷ ಪೂಜೆ ಸಲ್ಲಿಸಿದರು.

‘ಲಾಲ್​ಬೌಚ ರಾಜಾ’ ಲಾಲ್​ಬಾಗ್​ನಲ್ಲಿ ಇರಿಸಲಾಗಿರುವ ದೊಡ್ಡ ಗಣೇಶನ ವಿಗ್ರಹವಾಗಿದೆ. ಪೂಜೆ ಸಂದರ್ಭದಲ್ಲಿ ನಟ​ ಬಿಳಿ​ ಶರ್ಟ್​ ಧರಿಸಿದ್ದರೆ, ಮಗ ಅಬ್ರಾಮ್​ ಕೆಂಪು ಕುರ್ತಾದಲ್ಲಿ ಮುದ್ದಾಗಿ ಕಾಣುತ್ತಿದ್ದರು.

 

 

ಸೂಪರ್​ಸ್ಟಾರ್​ ‘ಲಾಲ್​ಬೌಚ ರಾಜಾ’ಗೆ ಭೇಟಿ ನೀಡಿರುವ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. 1934 ರಲ್ಲಿ ಸ್ಥಾಪಿತವಾದ ಪೂಜಾ ಸ್ಥಳವಾದ ಪುಟ್ಲಬಾಯಿ ಚಾಲ್​ನಲ್ಲಿರುವ ‘ಲಾಲ್​ಬೌಚ ರಾಜಾ’ದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗಣೇಶ ವಿಗ್ರಹ ಇತಿಹಾಸ ಪ್ರಸಿದ್ಧವಾಗಿದೆ. ಕಳೆದ ಶುಕ್ರವಾರ ಸಂಜೆ ಲಾಲ್​ಬೌಚ ರಾಜಾದ ಗಣೇಶ ಮೂರ್ತಿಯನ್ನು ಅನಾವರಣಗೊಳಿಸಲಾಗಿತ್ತು.

 

 

ಗಣೇಶ ಚತುರ್ಥಿ 10 ದಿನಗಳ ಹಬ್ಬವಾಗಿದ್ದು, ಹಿಂದೂ ಚಂದ್ರಮಾನ ಕ್ಯಾಲೆಂಡರ್​ ತಿಂಗಳ ‘ಭಾದ್ರಪದ’ದ ನಾಲ್ಕನೇ ದಿನದಂದು ಪ್ರಾರಂಭವಾಗುತ್ತದೆ. ಈ ವರ್ಷ ಹಬ್ಬವು ಸೆಪ್ಟೆಂಬರ್​ 19ರಿಂದ ಪ್ರಾರಂಭವಾಗಿದೆ. ಹಬ್ಬದ ಸಮಯದಲ್ಲಿ ಗಣೇಶ ಭೂಮಿಗೆ ಬಂದು, ತನ್ನ ಭಕ್ತರಿಗೆ 10 ದಿನ ಆಶೀರ್ವಾದ ನೀಡಿ ನಂತರ ಹೆತ್ತವರಾದ ಶಿವ ಮತ್ತು ಪಾರ್ವತಿಯ ವಾಸಸ್ಥಾನವಾದ ಕೈಲಾಸ ಪರ್ವತಕ್ಕೆ ಹಿಂದಿರುಗುತ್ತಾನೆ ಅನ್ನೋದು ನಂಬಿಕೆ.


Spread the love

About Laxminews 24x7

Check Also

ಇಂದು ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ

Spread the loveಬೆಂಗಳೂರು: ಇಂದು ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ ಮಾಡಲಾಗಿದೆ. ಕೊನೆಯ ರೈಲು ಹೊರಡುವ ಸಮಯ ವಿಸ್ತರಣೆಯಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ