Breaking News

ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ.. ಖಾಸಗಿ ಬಸ್​ಗಳಲ್ಲಿ ಪ್ರಯಾಣಿಕರ ಕೊರತೆ

Spread the love

ಮಂಗಳೂರು: ಸರ್ಕಾರಿ ಬಸ್​ನಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಬಸ್ ಓಡಾಡುವ ಮಾರ್ಗದಲ್ಲಿ ಖಾಸಗಿ ಬಸ್​ಗಳಿಗೆ ಮಹಿಳಾ ಪ್ರಯಾಣಿಕರ ಕೊರತೆಯನ್ನು ಸೃಷ್ಟಿಸಿದೆ.

 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಗರ ಮತ್ತು ಜಿಲ್ಲೆಯಾದ್ಯಂತ ಸಂಚಾರಕ್ಕೆ ಹೆಚ್ಚಿನ ಜನರು ಖಾಸಗಿ ಬಸ್​ಗಳನ್ನು ಅವಲಂಬಿಸಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್​ಗಳ ಪ್ರಭಾವವೇ ಅಧಿಕ. ಇಲ್ಲಿನ‌ ಜನರು ನಗರದಲ್ಲಿ ಪ್ರಯಾಣಿಸಲು, ಜಿಲ್ಲೆಯಾದ್ಯಂತ ಪ್ರಯಾಣಿಸಲು ಮತ್ತು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಡುವೆ ಪ್ರಯಾಣಿಸಲು ಖಾಸಗಿ ಬಸ್​ಗಳ ಮೊರೆ ಹೋಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ಬಸ್​ಗಳ ಓಡಾಟ ತೀರಾ ಕಡಿಮೆ. ಕೆಲವೊಂದು ಮಾರ್ಗದಲ್ಲಿ ಒಂದೆರಡು ನರ್ಮ್ ಬಸ್​ಗಳು ಮಾತ್ರ ಓಡಾಡುತ್ತಿವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಿಂದ ಪುತ್ತೂರು, ಸುಳ್ಯ, ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ರಸ್ತೆಗಳಲ್ಲಿ ಸರ್ಕಾರಿ ಬಸ್ ಓಡಾಟವಿದೆ. ಆದರೆ ಈ ಮಾರ್ಗಗಳಲ್ಲಿ ಮಂಗಳೂರು -ಪುತ್ತೂರು, ಮಂಗಳೂರು – ಉಪ್ಪಿನಂಗಡಿ, ಮಂಗಳೂರು- ವಿಟ್ಲ ಮಾರ್ಗದಲ್ಲಿ‌ ಕಾಂಟ್ರ್ಯಾಕ್ಟ್ ಕ್ಯಾರೇಜ್ ಸೇವೆಯಡಿ ಖಾಸಗಿ ಬಸ್​ಗಳು ಸಂಚಾರ ನಡೆಸುತ್ತಿವೆ.

ರಾಜ್ಯ ಸರ್ಕಾರವು ಭಾನುವಾರದಿಂದ ಆರಂಭಿಸಿರುವ ಮಹಿಳಾ ಬಸ್ ಪ್ರಯಾಣಿಕರಿಗೆ ಆರಂಭಿಸಿದ ಶಕ್ತಿ ಯೋಜನೆ ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗುತ್ತಿಲ್ಲ. ಇದೀಗ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣ ಆರಂಭವಾಗಿದ್ದು, ಜಿಲ್ಲೆಯಲ್ಲಿ ಸರ್ಕಾರಿ ಬಸ್ ಓಡಾಡುವ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್​ಗಳಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಾಗಿದೆ. ನಿತ್ಯ ಸಂಚರಿಸುವ ಮಹಿಳೆಯರು ಇಂದಿನಿಂದ ಸರ್ಕಾರಿ ಬಸ್ ನೆಚ್ಚಿಕೊಂಡಿದ್ದಾರೆ.

ಪುತ್ತೂರು ಬಸ್ ನಿರ್ವಾಹಕ ರಾಧಕೃಷ್ಣ ಮಾತನಾಡಿ, ಈಗ ಖಾಸಗಿ ಬಸ್​ನಲ್ಲಿ 75 ಶೇಕಡಾ ಮಹಿಳಾ ಪ್ರಯಾಣಿಕರು ಕಡಿಮೆಯಾಗಿದ್ದಾರೆ. ಇನ್ನೂ ಪ್ರಚಾರ ಆದ ನಂತರ ಹೇಗಾಗುತ್ತದೆ ಎಂಬುದನ್ನು ಕಾದು ನೋಡಬೇಕು. ಇವತ್ತು ಬೆಳಗ್ಗೆಯಿಂದಲೇ ತುಂಬಾ ಪ್ರಯಾಣಿಕರು ಕಡಿಮೆಯಾಗಿದ್ದಾರೆ ಎನ್ನುತ್ತಾರೆ.


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ