Breaking News

ರಾಜಾಹುಲಿ ರಾಜಕೀಯ ಪಯಣಕ್ಕೆ 50 ವರ್ಷ – ಚಿತ್ರದುರ್ಗದಲ್ಲಿಂದು ಬಿಎಸ್‌ವೈ ಅಭಿಮಾನೋತ್ಸವ

Spread the love

ಚಿತ್ರದುರ್ಗ: ರಾಜ್ಯ ರಾಜಕಾರಣದ ಧ್ರುವತಾರೆ, ರೈತನಾಯಕ ಬಿ.ಎಸ್.ಯಡಿಯೂರಪ್ಪನವರ 50 ವರ್ಷಗಳ ಸುದೀರ್ಘ ರಾಜಕೀಯ ಪಯಣದ ಸುವರ್ಣ ಸಂಭ್ರಮಕ್ಕೆ ಕೋಟೆನಾಡು ಸಾಕ್ಷಿಯಾಗುತ್ತಿದೆ. ಇಂದು (ಮೇ 9) ನಡೆಯಲಿರುವ ಐತಿಹಾಸಿಕ ಅಭಿಮಾನೋತ್ಸವಕ್ಕಾಗಿ ಚಿತ್ರದುರ್ಗ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ರಾಜ್ಯ ರಾಜಕಾರಣದ ಧ್ರುವತಾರೆ, ರೈತನಾಯಕ ಬಿ.ಎಸ್. ಯಡಿಯೂರಪ್ಪನವರ ರಾಜಕೀಯ ಪಯಣಕ್ಕೆ ಸುದೀರ್ಘ 50 ವರ್ಷಗಳು. ಕೋಟೆನಾಡು ಚಿತ್ರದುರ್ಗದಲ್ಲಿಂದು ಯಡಿಯೂರಪ್ಪ ಅಭಿಮಾನೋತ್ಸವ ನಡೆಯಲಿದೆ. ಇಂದು ನಡೆಯಲಿರುವ ಬಿಎಸ್‌ವೈ  ಅಭಿಮಾನೋತ್ಸವ ಕೇವಲ ಒಂದು ಸಮಾರಂಭವಾಗದೇ ಅದೊಂದು ಕೇಸರಿ ಪಡೆಯ ಬೃಹತ್ ಶಕ್ತಿ ಪ್ರದರ್ಶನವಾಗಲಿದೆ. ಐತಿಹಾಸಿಕ ಅಭಿಮಾನೋತ್ಸವಕ್ಕಾಗಿ ಚಿತ್ರದುರ್ಗ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಯಡಿಯೂರಪ್ಪ ಅಭಿಮಾನೋತ್ಸವದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ, ವಿವಿಧ ಮಠಾಧೀಶರು ಉಪಸ್ಥಿತಿ ಇರಲಿದ್ದಾರೆ. ಬಿಜೆಪಿಯ  ಎಲ್ಲ ನಾಯಕರು, ಮುಖಂಡರು, ಕಾರ್ಯಕರ್ತರು, ರಾಜ್ಯದ ಮೂಲೆ ಮೂಲೆಗಳಿಂದ ಬರುವ 10 ಲಕ್ಷಕ್ಕೂ ಅಧಿಕ ಜನರು ಭಾಗಿಯಾಗಲಿದ್ದಾರೆ. 

ಹೌದು, ಯಡಿಯೂರಪ್ಪ ಎಂಬ ಅದಮ್ಯ ಚೇತನದ ಐದು ದಶಕಗಳ ರಾಜಕೀಯ ಹಾದಿಯ ಸ್ಮರಣಾರ್ಥವಾಗಿ ಬೃಹತ್ `ಅಭಿಮಾನೋತ್ಸವ’ ಆಯೋಜಿಸಲಾಗಿದೆ. ಚಿತ್ರದುರ್ಗ ನಗರದ ಹೊರವಲಯದಲ್ಲಿ ಜರ್ಮನ್ ಮಾದರಿಯ ಬೃಹತ್ ಪೆಂಡಾಲ್ ಹಾಕಲಾಗಿದೆ. ಏಳುಸುತ್ತಿನ ಕೋಟೆ ಮಾದರಿಯ ಪ್ರವೇಶ ದ್ವಾರ ನಿರ್ಮಾಣಮಾಡಲಾಗಿದೆ. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವ ಜನರಿಗೆ ಸಮಸ್ಯೆ ಆಗದಂತೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ಇಡೀ ಆವರಣ ಕೇಸರಿಮಯವಾಗಿದ್ದು, ದ್ವಾರಬಾಗಿಲಲ್ಲಿ ಅಭಿಮಾನಿಗಳನ್ನು ಕೈಮುಗಿದು ಸ್ವಾಗತಿಸುತ್ತಿರುವ ಬಿಎಸ್‌ವೈ ಕಟೌಟ್‌ಗಳು ರಾರಾಜಿಸುತ್ತಿವೆ.

ಬಿಜೆಪಿ ನಾಯಕ ಬಿಎಸ್‌ವೈ ಚಿತ್ರದುರ್ಗ ಪುರ ಪ್ರವೇಶ ಮಾಡಿದ್ದಾರೆ. ಶುಕ್ರವಾರ (ಮೇ 8) ನಗರದ ಕನಕ ವೃತ್ತದಿಂದ ಚಳ್ಳಕೆರೆ ಗೇಟ್‌ವರೆಗೆ ಅದ್ಧೂರಿ ಮೆರವಣಿಗೆ ನಡೆದಿದೆ. ಮಹಿಳೆಯರು ಕುಂಭಮೇಳದ ಸ್ವಾಗತ ಮಾಡಿದರು. ನಾರಿ ಶಕ್ತಿ ವಂದನ್ ಅಡಿಯಲ್ಲಿ ಮಹಿಳೆಯರು ಒನಕೆ ಹಿಡಿದು ಮೆರವಣಿಗೆಯಲ್ಲಿ ಸಾಗಿದರು. 25 ಜನಪದ ಕಲಾಮೇಳಗಳು ಹಾಗೂ ಯಡಿಯೂರಪ್ಪನವರ ಜೀವನ ಕಥನ ಸಾರುವ ಎಐ ತಾಂತ್ರಿಕತೆಯ 6 ಸ್ತಬ್ಧಚಿತ್ರಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿ ಗಮನ ಸೆಳೆದವು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡೆದುಬಂದ ದಾರಿ ಮರೆತಿಲ್ಲ ಎಂಬುದಕ್ಕೆ ಸಾಕ್ಷಿ ಅವರ ಅಂಬಾಸಿಡರ್ ಕಾರು. ಬಿಎಸ್‌ವೈ ರಾಜಕೀಯ ಜೀವನದ ಅದೃಷ್ಟದ ಸಂಕೇತವೆಂದು ಪರಿಗಣಿಸಲ್ಪಟ್ಟಿದೆ. 1974ರಲ್ಲಿ ಖರೀದಿಸಿದ್ದ ಕಾರು, ಅವರ ದೀರ್ಘಕಾಲದ ರಾಜಕೀಯ ಏಳು-ಬೀಳುಗಳಿಗೆ ಸಾಕ್ಷಿ. ಇಂದು ನಡೆಯುವ ಕಾರ್ಯಕ್ರಮಕ್ಕೆ ಬಿಎಸ್‌ವೈ ಇದೇ ಕಾರಿನಲ್ಲಿ ಬರಲಿದ್ದಾರೆ.


Spread the love

About Laxminews 24x7

Check Also

ಸಂತಾನಹರಣ ಚಿಕಿತ್ಸೆ ವೇಳೆ ಕರುಳು ಕಟ್ – ವೈದ್ಯರ ಯಡವಟ್ಟಿನಿಂದ ಮಹಿಳೆ ಸಾವು: ಪತಿ ಆರೋಪ

Spread the loveಚಿಕ್ಕಬಳ್ಳಾಪುರ: ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಚಿಕಿತ್ಸೆ ವೇಳೆ ಕರುಳು ಕತ್ತರಿಸಿ ವೈದ್ಯರ ಯಡವಟ್ಟು ಮಾಡಿದ್ದಾರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ